ಬಾಹ್ಯಾಕಾಶಕ್ಕೆ ಪ್ರವಾಸ ಹೋಗಿ ಬಂದ ಭಾರತೀಯ ಗೋಪಿಚಂದ್‌

| Published : May 20 2024, 01:31 AM IST / Updated: May 20 2024, 07:04 AM IST

ಸಾರಾಂಶ

ಅಮೆರಿಕದ ಶ್ರೀಮಂತ ಉದ್ಯಮಿ ಜೆಫ್‌ ಬೆಜೋಸ್‌ ಒಡೆತನದ ಬ್ಲ್ಯೂ ಒರಿಜಿನ್‌ ಬಾಹ್ಯಾಕಾಶ ನೌಕೆಯಲ್ಲಿ ಭಾರತೀಯ ಮೂಲದ ಉದ್ಯಮಿ, ಪೈಲಟ್‌ ಗೋಪಿಚಂದ್ ಥೋಟಕುರ ಭಾನುವಾರ ಬಾಹ್ಯಾಕಾಶ ಪ್ರವಾಸ ನಡೆಸಿದ್ದಾರೆ.

ವಾಷಿಂಗ್ಟನ್‌: ಅಮೆರಿಕದ ಶ್ರೀಮಂತ ಉದ್ಯಮಿ ಜೆಫ್‌ ಬೆಜೋಸ್‌ ಒಡೆತನದ ಬ್ಲ್ಯೂ ಒರಿಜಿನ್‌ ಬಾಹ್ಯಾಕಾಶ ನೌಕೆಯಲ್ಲಿ ಭಾರತೀಯ ಮೂಲದ ಉದ್ಯಮಿ, ಪೈಲಟ್‌ ಗೋಪಿಚಂದ್ ಥೋಟಕುರ ಭಾನುವಾರ ಬಾಹ್ಯಾಕಾಶ ಪ್ರವಾಸ ನಡೆಸಿದ್ದಾರೆ. 

ಈ ಮೂಲಕ ‘ಅಂತರಿಕ್ಷ ಪ್ರವಾಸ’ ಕೈಗೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಭಾರತೀಯ ಕಾಲಮಾರ ಭಾನುವಾರ ಸಂಜೆ 7 ಗಂಟೆ ವೇಳೆಗೆ ನ್ಯೂ ಶೆಫರ್ಡ್‌-25 ನೌಕೆ ಬಾಹ್ಯಾಕಾಶ ನೌಕೆ ಗೋಪಿ ಸೇರಿ ಐವರೊಂದಿಗೆ ಯಶಸ್ವಿಯಾಗಿ ನಭಕ್ಕೆ ನೆಗೆಯಿತು. 

11 ನಿಮಿಷಗಳ ಒಟ್ಟಾರೆ ಈ ಉಡ್ಡಯನದ ವೇಳೆ ನೌಕೆಯು ಭೂಮಿಯ ವಾತಾವರಣ ಮತ್ತು ಬಾಹ್ಯಾಕಾಶವನ್ನು ಪ್ರತ್ಯೇಕಿಸುವ ಕರ್ಮನ್‌ ಲೈನ್‌ ದಾಟಿ, ಬಳಿಕ ಭೂಮಿಗೆ ಮರಳಿದೆ. ಹೀಗೆ ರೇಖೆ ದಾಟಿದ ವೇಳೆ ಯಾತ್ರಿಗಳು ಕೆಲ ನಿಮಿಷಗಳ ಕಾಲ ಭೂಮಿಯ ಗುರುತ್ವಾಕರ್ಷಣೆ ಕಳೆದುಕೊಂಡಾಗ ಆಗುವ ಅನುಭವವನ್ನು ಸಂಭ್ರಮಿಸಿದರು. ಜೊತೆಗೆ ಭೂಮಿಯ ಸುಂದರ ದೃಶ್ಯವನ್ನು ಸವಿದರು.

ಗೋಪಿಚಂದ್‌ 1984ರ ನಂತರ ಅಂತರಿಕ್ಷಕ್ಕೆ ಹೋದ 2ನೇ ಭಾರತೀಯನೂ ಹೌದು. 1984ರಲ್ಲಿ ರಾಕೇಶ್‌ ಶರ್ಮಾ ಅಧ್ಯಯನದ ಉದ್ದೇಶದಿಂದ ಅಂತರಿಕ್ಷಕ್ಕೆ ಹೋಗಿದ್ದರು. ಆದರೆ ಆಂಧ್ರದ ಗೋಪಿಚಂದ್‌ ಪ್ರವಾಸ ದೃಷ್ಟಿಯಿಂದ ಹೋಗಿದ್ದಾರೆ.