ಬಾಹ್ಯಾಕಾಶ ಪ್ರವಾಸ: ಗೋಪಿ ಸಂತಸ

| Published : May 21 2024, 12:33 AM IST / Updated: May 21 2024, 05:32 AM IST

ಸಾರಾಂಶ

ಮೊದಲ ಭಾರತೀಯ ಪ್ರವಾಸಿಗನಾಗಿದ್ದು ಹೆಮ್ಮೆ ಎಂದು ಗೋಪಿ ಅವರು ತಿಳಿಸಿದ್ದು, ಅಮೆರಿಕದ ಖಾಸಗಿ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಿ ಬಂದ ಹಿರಿಮೆ ಅವರದ್ದಾಗಿದೆ.

ಹೂಸ್ಟನ್‌: ಅಮೆಜಾನ್ ಸಂಸ್ಥಾಪಕದ ಜೆಫ್ ಬೆಜೋಸ್‌ರ ಬ್ಲ್ಯೂ ಒರಿಜಿನ್‌ ನೌಕೆಯಲ್ಲಿ ಭಾನುವಾರ ಬಾಹ್ಯಾಕಾಶಕ್ಕೆ ಯಶಸ್ವಿ ಪ್ರಯಾಣ ಕೈಗೊಂಡು ಮರಳಿದ ಭಾರತೀಯ ಗೋಪಿ ಥೋಟಕುರಾ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಬಾಹ್ಯಾಕಾಶಕ್ಕೆ ಪ್ರವಾಸಿಗನಾಗಿ ಹೋದ ಮೊದಲ ಭಾರತೀಯನಾಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ ಎಂದು ಆಂಧ್ರಪ್ರದೇಶ ಮೂಲದ ಗೋಪಿ ಹೇಳಿದ್ದಾರೆ.

11 ನಿಮಿಷಗಳ ಈ ಉಡ್ಡಯನಕ್ಕೂ ಮುನ್ನ ಗೋಪಿ ‘ಬಾಹ್ಯಾಕಾಶಕ್ಕೆ ಭಾರತ’ ಎಂಬ ವಿಡಿಯೋ ಬಿಡುಗಡೆ ಮಾಡಿದ್ದರು. ಅದರಲ್ಲಿ ಅವರು ತಮ್ಮೊಂದಿಗೆ ಭಾರತದ ಧ್ವಜ ಮತ್ತು ನಮ್ಮ ಸುಸ್ಥಿರ ಗ್ರಹಕ್ಕೆ ನಾನು ಪರಿಸರ ಯೋಧ ಎನ್ನುವ ಬ್ಯಾನರ್ ಹಿಡಿದಿದ್ದರು.

ಬ್ಲ್ಯೂ ಒರಿಜಿನ್‌ನ ನೌಕೆಯು 100 ಕಿ.ಮೀ ಎತ್ತರದಲ್ಲಿರುವ ಭೂಮಿಯ ವಾತಾವರಣ ಮತ್ತು ಬಾಹ್ಯಾಕಾಶವನ್ನು ಪ್ರತ್ಯೇಕಿಸುವ ಕರ್ಮನ್‌ ಲೈನ್‌ ದಾಟಿ, ಬಳಿಕ ಭೂಮಿಗೆ ಮರಳಿದೆ. ಹೀಗೆ ರೇಖೆ ದಾಟಿದ ವೇಳೆ ಯಾತ್ರಿಗಳು ಕೆಲ ನಿಮಿಷಗಳ ಕಾಲ ಭೂಮಿಯ ಗುರುತ್ವಾಕರ್ಷಣೆ ಕಳೆದುಕೊಂಡಾಗ ಆಗುವ ಅನುಭವವನ್ನು ಸಂಭ್ರಮಿಸಿದರು. 1984ರಲ್ಲಿ ರಾಕೇಶ್‌ ಶರ್ಮಾ ಅಧ್ಯಯನದ ಉದ್ದೇಶದಿಂದ ರಷ್ಯಾ ನೌಕೆಯ ಮೂಲಕ ಅಂತರಿಕ್ಷಕ್ಕೆ ಹೋಗಿದ್ದರು. ಆದರೆ ಆಂಧ್ರದ ಗೋಪಿಚಂದ್‌ ಪ್ರವಾಸ ದೃಷ್ಟಿಯಿಂದ ಹೋದ ಮೊದಲ ಭಾರತೀಯ ಎನ್ನಿಸಿಕೊಂಡಿದ್ದಾರೆ.