ಸಾರಾಂಶ
ದೆಹಲಿ : ತಾಮ್ರ ಮತ್ತು ಲಿಥಿಯಂನಂತಹ ನಿರ್ಣಾಯಕ ಖನಿಜಗಳ ದೇಶೀಯ ಉತ್ಪಾದನೆ, ಅವುಗಳ ಮರುಬಳಕೆ ಮತ್ತು ವಿದೇಶದಲ್ಲಿ ಅಂತಹ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮಿಷನ್ ಅನ್ನು ಪ್ರಾರಂಭಿಸುವ ಘೋಷಣೆಯನ್ನು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮಾಡಿದೆ.
ಕಡಲಾಚೆಯ ಗಣಿಗಾರಿಕೆ ಬ್ಲಾಕ್‌ಗಳ ಮೊದಲ ಸುತ್ತಿನ ಹರಾಜನ್ನು ಸರ್ಕಾರ ಪ್ರಾರಂಭಿಸಲಿದೆ. ಕಡಲಾಚೆಯ ಗಣಿಗಾರಿಕೆಯು ಆಳವಾದ ಸಮುದ್ರತಳದಿಂದ 200 ಮೀ.ಗಿಂತಲೂ ಹೆಚ್ಚು ಆಳದಲ್ಲಿ ಖನಿಜ ನಿಕ್ಷೇಪಗಳನ್ನ ಹೊರತೆಗೆವ ಪ್ರಕ್ರಿಯೆಯಾಗಿದೆ.ತಾಮ್ರ, ಲೀಥಿಯಂ, ನಿಕಲ್, ಕೋಬಾಲ್ಟ್ ಮತ್ತು ಅಪರೂಪದ ಭೂಮಿಯ ಅಂಶಗಳಂತಹ ನಿರ್ಣಾಯಕ ಖನಿಜಗಳು ವೇಗವಾಗಿ ಬೆಳೆಯುತ್ತಿರುವ ಶುದ್ಧ ಇಂಧನ ತಂತ್ರಜ್ಞಾನಗಳಲ್ಲಿ ಅತ್ಯಗತ್ಯ ಅಂಶಗಳಾಗಿವೆ.
ಶುದ್ಧ ಇಂಧನಕ್ಕೆ ಬೇಡಿಕೆ ಹೆಚ್ಚುತ್ತಿದ್ದಂತೆಯೇ ಈ ಖನಿಜಗಳಿಗೆ ಬೇಡಿಕೆ ಹೆಚ್ಚುತ್ತಿದೆ.ಕಳೆದ ವರ್ಷ, ಸರ್ಕಾರವು 30 ನಿರ್ಣಾಯಕ ಖನಿಜಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದು ಆಂಟಿಮನಿ, ಬೆರಿಲಿಯಮ್, ಬಿಸ್ಮತ್, ಕ್ಯಾಡ್ಮಿಯಮ್, ಕೋಬಾಲ್ಟ್, ತಾಮ್ರ, ಗ್ಯಾಲಿಯಂ, ಜರ್ಮೇನಿಯಮ್, ಗ್ರಾಫೈಟ್, ಹ್ಯಾಫ್ನಿಯಮ್, ಇಂಡಿಯಮ್, ಲಿಥಿಯಂ, ಮಾಲಿಬ್ಡಿನಮ್, ನಿಯೋಬಿಯಂ, ನಿಕ್ಕಲ್ - ಇವುಗಳಲ್ಲಿ ಪ್ರಮುಖವಾಗಿವೆ.