51000 ಜನರಿಗೆ ಉದ್ಯೋಗ ಪ್ರಮಾಣ ಪತ್ರ ವಿತರಿಸಿದ ಮೋದಿ

| N/A | Published : Apr 27 2025, 01:32 AM IST / Updated: Apr 27 2025, 07:19 AM IST

PM Narendra Modi

ಸಾರಾಂಶ

ಇಲ್ಲಿ ನಡೆದ 15ನೇ ಆವೃತ್ತಿಯ ರೋಜ್‌ಗಾರ್‌ ಮೇಳದಲ್ಲಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ತೆರವು ಹುದ್ದೆಗಳ ಭರ್ತಿಗೆ ಶನಿವಾರ 51000 ಸಾವಿರಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.

ನವದೆಹಲಿ: ಇಲ್ಲಿ ನಡೆದ 15ನೇ ಆವೃತ್ತಿಯ ರೋಜ್‌ಗಾರ್‌ ಮೇಳದಲ್ಲಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ತೆರವು ಹುದ್ದೆಗಳ ಭರ್ತಿಗೆ ಶನಿವಾರ 51000 ಸಾವಿರಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ವರ್ಚುವಲ್‌ ಮಾದರಿಯಲ್ಲಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಈ ವೇಳೆ ಮಾತನಾಡಿ, ಉದ್ಯೋಗ ಮತ್ತು ಸ್ವ-ಉದ್ಯೋಗದ ಅವಕಾಶಗಳು ಹೆಚ್ಚುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಯುವಜನತೆಗೆ ಇದೊಂದು ಅಭೂತಪೂರ್ವ ಅವಕಾಶ ಎಂದು ಹೇಳಿದರು.

ಆಟೋಮೊಬೈಲ್‌, ಪಾದರಕ್ಷೆ ಉದ್ಯಮಗಳು ಉತ್ಪಾದನೆ, ರಫ್ತಲ್ಲಿ ಹೊಸ ದಾಖಲೆ ನಿರ್ಮಿಸಿದ್ದು, ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಿವೆ. ರಾಷ್ಟ್ರ ನಿರ್ಮಾಣದಲ್ಲಿ ಯುವಜನತೆ ಸಕ್ರಿಯರಾಗಿದ್ದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಯುವಜನತೆಗೆ ಪ್ರತಿ ಹಂತದಲ್ಲಿ ಉದ್ಯೋಗದ ಅವಕಾಶಗಳು ದೊರೆಯುವುದನ್ನು ಕೇಂದ್ರ ಸರ್ಕಾರ ಖಚಿತಪಡಿಸಿಕೊಳ್ಳುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.