ಮತ್ತೆ 34 ರು.ಗೆ ಕೇಜಿ ಅಕ್ಕಿ, 30 ರು.ಗೆ ಗೋಧಿ ಹಿಟ್ಟು ಮಾರಾಟ ಶುರು

| Published : Nov 06 2024, 12:36 AM IST

ಮತ್ತೆ 34 ರು.ಗೆ ಕೇಜಿ ಅಕ್ಕಿ, 30 ರು.ಗೆ ಗೋಧಿ ಹಿಟ್ಟು ಮಾರಾಟ ಶುರು
Share this Article
  • FB
  • TW
  • Linkdin
  • Email

ಸಾರಾಂಶ

ಆಹಾರ ವಸ್ತುಗಳ ಬೆಲೆ ಮತ್ತೆ ಗಗನಮುಖಿಯಾದ ಬೆನ್ನಲ್ಲೇ, ‘ಭಾರತ್‌ ಬ್ರ್ಯಾಂಡ್‌’ ಅಡಿಯಲ್ಲಿ ಗ್ರಾಹಕರಿಗೆ ಸಬ್ಸಿಡಿ ರೂಪದಲ್ಲಿ ಅಕ್ಕಿ ಹಾಗೂ ಗೋಧಿ ಹಿಟ್ಟಿನ ಮಾರಾಟದ 2ನೇ ಹಂತಕ್ಕೆಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮಂಗಳವಾರ ಚಾಲನೆ ನೀಡಿದರು.

ನವದೆಹಲಿ: ಆಹಾರ ವಸ್ತುಗಳ ಬೆಲೆ ಮತ್ತೆ ಗಗನಮುಖಿಯಾದ ಬೆನ್ನಲ್ಲೇ, ‘ಭಾರತ್‌ ಬ್ರ್ಯಾಂಡ್‌’ ಅಡಿಯಲ್ಲಿ ಗ್ರಾಹಕರಿಗೆ ಸಬ್ಸಿಡಿ ರೂಪದಲ್ಲಿ ಅಕ್ಕಿ ಹಾಗೂ ಗೋಧಿ ಹಿಟ್ಟಿನ ಮಾರಾಟದ 2ನೇ ಹಂತಕ್ಕೆಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮಂಗಳವಾರ ಚಾಲನೆ ನೀಡಿದರು.

ಈ ಯೋಜನೆಯಡಿ ಗೋಧಿ ಹಿಟ್ಟು ಪ್ರತಿ ಕೇಜಿಗೆ 30 ರು., ಅಕ್ಕಿ 34 ರು. ನಿಗದಿಪಡಿಸಲಾಗಿದೆ. ಎನ್‌ಸಿಸಿಎಫ್‌, ನಾಫೆಡ್‌ ಮತ್ತು ಕೇಂದ್ರೀಯ ಭಂಡಾರ್‌ ಹಾಗೂ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳ ಮೂಲಕ 5 ಕೇಜಿ ಗೋಧಿ ಮತ್ತು 10 ಕೇಜಿ ಅಕ್ಕಿ ಚೀಲಗಳನ್ನು ಗ್ರಾಹಕರು ಖರೀದಿಸಬಹುದಾಗಿದೆ.

ಮೊದಲ ಹಂತದ ಮಾರಾಟಕ್ಕೆ ಹೋಲಿಸಿದರೆ ಈ ಬಾರಿ ಗೋಧಿ ಹಿಟ್ಟಿನ ದರ 2.5 ರು., ಅಕ್ಕಿ ದರವನ್ನು 5 ರು. ಏರಿಸಲಾಗಿದೆ. ಮೊದಲ ಹಂತದಲ್ಲಿ 15.20 ಲಕ್ಷ ಟನ್ ಗೋಧಿ ಹಿಟ್ಟು ಮತ್ತು 14.58 ಲಕ್ಷ ಟನ್ ಅಕ್ಕಿಯನ್ನು ವಿತರಿಸಲಾಗಿತ್ತು.