ಈರುಳ್ಳಿ ಬೆಳೆವ ರೈತರಿಗೆ ಕೇಂದ್ರದಿಂದ ಗುಡ್ ನ್ಯೂಸ್

| Published : May 05 2024, 02:01 AM IST / Updated: May 05 2024, 05:11 AM IST

ಸಾರಾಂಶ

ದೇಶದ ಪ್ರಮುಖ ಬೆಳೆಯಾದ ಈರುಳ್ಳಿ ರಫ್ತು ಮೇಲಿನ ನಿಷೇಧವನ್ನು ರೈತರ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಶನಿವಾರ ಸಂಪೂರ್ಣ ತೆಗೆದುಹಾಕಿದೆ. ಈ ನಿರ್ಧಾರವು ರೈತರ ಆದಾಯವನ್ನು ಹೆಚ್ಚಿಸಲು ಸಹಾಯವಾಲಿದೆ.

 ನವದೆಹಲಿ :  ದೇಶದ ಪ್ರಮುಖ ಬೆಳೆಯಾದ ಈರುಳ್ಳಿ ರಫ್ತು ಮೇಲಿನ ನಿಷೇಧವನ್ನು ರೈತರ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಶನಿವಾರ ಸಂಪೂರ್ಣ ತೆಗೆದುಹಾಕಿದೆ. ಈ ನಿರ್ಧಾರವು ರೈತರ ಆದಾಯವನ್ನು ಹೆಚ್ಚಿಸಲು ಸಹಾಯವಾಲಿದೆ.

ಅಲ್ಲದೆ ಮಹಾರಾಷ್ಟ್ರ ಸೇರಿದಂತೆ ಪ್ರಮುಖ ಈರುಳ್ಳಿ ಉತ್ಪಾದನಾ ಪ್ರದೇಶಗಳಲ್ಲಿ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಕೈಗೊಂಡ ಈ ನಿರ್ಧಾರ ರಾಜಕೀಯವಾಗಿಯೂ ಪರಿಣಾಮ ಬೀರುವ ಸಾಧ್ಯತೆ ಇದೆ.ಇದೇ ವೇಳೆ ಸರ್ಕಾರ ಪ್ರತಿ ಟನ್‌ ಈರುಳ್ಳಿಗೆ 550 ಡಾಲರ್ (ಕೇಜಿಗೆ 46 ರು.) ಕನಿಷ್ಠ ರಫ್ತು ಬೆಲೆ ಹಾಗೂ ಶೇ.40 ರಫ್ತು ಸುಂಕವನ್ನು ನಿಗದಿಪಡಿಸಿದೆ. ಹೀಗಾಗಿ 770 ಡಾಲರ್‌ (ಕೇಜಿಗೆ 64 ರು.) ದರಕ್ಕಿಂತ ಕಡಿಮೆ ದರದ ಸಾಗಣೆಗೆ ಅನುಮತಿ ಸಿಗವುದಿಲ್ಲ.

ರೈತರ ಬೇಡಿಕೆಗೆ ಮನ್ನಣೆ:ಉತ್ಪಾದನೆಯಲ್ಲಿ ಕುಸಿತದ ಕಾರಣ ಚಿಲ್ಲರೆ ಬೆಲೆಗಳನ್ನು ನಿಯಂತ್ರಿಸಲು ಕಳೆದ ವರ್ಷ ಡಿಸೆಂಬರ್ 8 ರಂದು ಈರುಳ್ಳಿ ರಫ್ತನ್ನು ಕೇಂದ್ರವು ನಿಷೇಧಿಸಿತ್ತು. ಇದರ ಬೆನ್ನಲ್ಲೇ ದೇಶದಲ್ಲಿ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬಂದು ಇಂದು ಸುಮಾರು 20-25 ರು.ಗೆ ಕೇಜಿಯಂತೆ ಚಿಲ್ಲರೆ ಪೇಟೆಯಲ್ಲಿ ಮಾರಾಟವಾಗುತ್ತಿದೆ.ಮಹಾರಾಷ್ಟ್ರದ ನಾಸಿಕ್, ಅಹಮದ್‌ನಗರ ಮತ್ತು ಸೊಲ್ಲಾಪುರದಂತಹ ಪ್ರಮುಖ ಈರುಳ್ಳಿ ಬೆಲ್ಟ್‌ಗಳಲ್ಲಿ ಈ ನಿರ್ಧಾರವು ಲೋಕಸಭೆ ಚುನಾವಣೆಗೆ ಮುನ್ನ ಮಹತ್ವದ್ದಾಗಿದೆ. ಈ ಭಾಗದ ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಪಡೆಯಲು ನಿಷೇಧವನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದರು. ಅದಕ್ಕೆ ಈಗ ಮನ್ನಣೆ ದೊರಕಿದೆ.

ಉತ್ಪಾದನೆ ಕುಸಿತ: ಮಾಹಿತಿಯ ಪ್ರಕಾರ, 2023-24 ರಲ್ಲಿ ಈರುಳ್ಳಿ ಉತ್ಪಾದನೆ ಸುಮಾರು 254.73 ಲಕ್ಷ ಟನ್‌ಗಳಾಗುವ ನಿರೀಕ್ಷೆಯಿದೆ. ಇದು ಕಳೆದ ವರ್ಷ ಸುಮಾರು 302.08 ಲಕ್ಷ ಟನ್‌ಗಳಿಗೆ ಹೋಲಿಸಿದರೆ ತುಂಬಾ ಕಮ್ಮಿ. ಮಹಾರಾಷ್ಟ್ರದಲ್ಲಿ 34.31 ಲಕ್ಷ ಟನ್, ಕರ್ನಾಟಕದಲ್ಲಿ 9.95 ಲಕ್ಷ ಟನ್, ಆಂಧ್ರಪ್ರದೇಶದಲ್ಲಿ 3.54 ಲಕ್ಷ ಟನ್ ಮತ್ತು ರಾಜಸ್ಥಾನದಲ್ಲಿ 3.12 ಲಕ್ಷ ಟನ್ ಉತ್ಪಾದನೆ ಕಡಿಮೆಯಾಗಿರುವ ಕಾರಣ ದೇಶದ ಒಟ್ಟು ಉತ್ಪಾದನೆ ಕುಸಿದಿದೆ ಎಂದು ಅಂಕಿಅಂಶಗಳು ತೋರಿಸಿವೆ.ಕಳೆದ 4-5 ವರ್ಷಗಳಲ್ಲಿ, ದೇಶವು ವಾರ್ಷಿಕವಾಗಿ 17 ಲಕ್ಷದಿಂದ 25 ಲಕ್ಷ ಟನ್‌ಗಳಷ್ಟು ಈರುಳ್ಳಿಯನ್ನು ರಫ್ತು ಮಾಡಿದೆ.

ಬೆಲೆ 200 ರು.ನಷ್ಟು ಏರಿಕೆ:ಸರ್ಕಾರದ ರಫ್ತು ನಿಷೇಧ ರದ್ದು ನಿರ್ಧಾರ ಬೆನ್ನಲ್ಲೇ ಈರುಳ್ಳಿ ಬೆಲೆ ದೇಶದ ಅತಿದೊಡ್ಡ ಈರುಳ್ಳಿ ಪೇಟೆಯಾದ ಮಹಾರಾಷ್ಟ್ರದ ಲಾಸಲಗಾಂವ್‌ನಲ್ಲಿ ಕ್ವಿಂಟಲ್‌ಗೆ 200 ರು.ನಷ್ಟು ಏರಿದೆ. ವಿವಿಧ ಗುಣಮಟ್ಟದ ಈರುಳ್ಳಿಗಳ ಬೆಲೆ ಕ್ವಿಂಟಲ್‌ಗೆ 801 ರು., 2,551 ರು. Rs 2,100 ರು.ಗೆ ಶನಿವಾರ ನೆಗೆದಿದೆ