ಸಾರಾಂಶ
2023ರಲ್ಲಿ 1.98 ಲಕ್ಷ ಕೋಟಿ ರು.ಗೂ ಅಧಿಕ ತೆರಿಗೆ ವಂಚನೆ ನಡೆದಿದೆ ಎಂಬುದನ್ನು ಜಿಎಸ್‌ಟಿ ಗುಪ್ತಚರ ಇಲಾಖೆ ಪತ್ತೆ ಹಚ್ಚಿದೆ.
ನವದೆಹಲಿ: 2023ರಲ್ಲಿ 1.98 ಲಕ್ಷ ಕೋಟಿ ರು.ಗೂ ಅಧಿಕ ತೆರಿಗೆ ವಂಚನೆ ನಡೆದಿದೆ ಎಂಬುದನ್ನು ಜಿಎಸ್‌ಟಿ ಗುಪ್ತಚರ ಇಲಾಖೆ ಪತ್ತೆ ಹಚ್ಚಿದೆ. ಅಲ್ಲದೇ ಈ ವಂಚನೆ ಹಿಂದಿರುವ 140 ಮಂದಿ ಮಾಸ್ಟರ್‌ಮೈಂಡ್‌ಗಳನ್ನು ಬಂಧಿಸಲಾಗಿದೆ ಎಂದು ಗುರುವಾರ ವಿತ್ತ ಸಚಿವಾಲಯ ಹೇಳಿದೆ.
ಆನ್ಲೈನ್ ಗೇಮಿಂಗ್, ಕ್ಯಾಸಿಸೋ, ವಿಮೆ ಮತ್ತು ಮಾನವಶಕ್ತಿಯ ಆಮದಿನಲ್ಲಿ ವಂಚನೆ ಎಸಗಲಾಗಿದೆ. 2023ರಲ್ಲಿ ಇಂತಹ 6,323 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, 1.98 ಲಕ್ಷ ಕೋಟಿ ರು. ತೆರಿಗೆ ವಂಚನೆ ನಡೆದಿದೆ.
ಇದರಲ್ಲೊಇ 28 ಸಾವಿರ ಕೋಟಿ ಸ್ವಯಂಪ್ರೇರಿತ ಪಾವತಿಗಳನ್ನು ಮಾಡಲಾಗಿದೆ ಎಂದು ಇಲಾಖೆ ಹೇಳಿದೆ. 2022ರಲ್ಲಿ 4,273 ಪ್ರಕರಣಗಳು ನಡೆದಿದ್ದು, 90,499 ಕೋಟಿ ರು. ತೆರಿಗೆ ವಂಚನೆ ನಡೆದಿತ್ತು. ಇದರಲ್ಲಿ 22 ಸಾವಿರ ಕೋಟಿ ರು. ಸ್ವಯಂಪ್ರೇರಿತ ಪಾವತಿ ಮಾಡಲಾಗಿತ್ತು.