ಹಿಂದೂ ನಾಯಕರ ಹತ್ಯೆಗೆ ಸಂಚು: ಮೌಲ್ವಿ ಬಂಧನ

| Published : May 05 2024, 02:15 AM IST / Updated: May 05 2024, 05:01 AM IST

arrest 3

ಸಾರಾಂಶ

ಹಿಂದೂ ಕಾರ್ಯಕರ್ತನ ಹತ್ಯೆಗೆ ಸಂಚು ರೂಪಿಸಿದ್ದಲ್ಲದೆ, ಸುದರ್ಶನ ಟೀವಿ ಸಂಪಾದಕ ಸುರೇಶ ಚವ್ಹಣಕೆ, ತೆಲಂಗಾಣದ ಬಿಜೆಪಿ ಶಾಸಕ ರಾಜ ಸಿಂಗ್ ಮತ್ತು ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಬೆದರಿಕೆಯೊಡ್ಡಿದ್ದ ಆರೋಪದಡಿ ಸೂರತ್ ಪೊಲೀಸರು ಸೋಹೆಲ್ ಅಬೂಕ್ರ್ ತಿಮೋಲ್  ಬಂಧಿಸಿದ್ದಾರೆ.

ಸೂರತ್: ಹಿಂದೂ ಕಾರ್ಯಕರ್ತನ ಹತ್ಯೆಗೆ ಸಂಚು ರೂಪಿಸಿದ್ದಲ್ಲದೆ, ಸುದರ್ಶನ ಟೀವಿ ಸಂಪಾದಕ ಸುರೇಶ ಚವ್ಹಣಕೆ, ತೆಲಂಗಾಣದ ಬಿಜೆಪಿ ಶಾಸಕ ರಾಜ ಸಿಂಗ್ ಮತ್ತು ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಬೆದರಿಕೆಯೊಡ್ಡಿದ್ದ ಆರೋಪದಡಿ ಸೂರತ್ ಪೊಲೀಸರು ಸೋಹೆಲ್ ಅಬೂಕ್ರ್ ತಿಮೋಲ್ (27) ಎಂಬ ಮೌಲ್ವಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಮಕ್ಕಳಿಗೆ ಇಸ್ಲಾಂ ಬೋಧನೆ ಕೆಲಸ ಮಾಡುತ್ತಿದ್ದ. ಹಿಂದೂ ಸನಾತನ ಸಂಘದ ರಾಷ್ಟ್ರೀಯ ಅಧ್ಯಕ್ಷ ಉಪದೇಶ ರಾಣಾ ಹತ್ಯೆಗೆ ಸಂಚು ರೂಪಿಸಿದ್ದ. ಇದಕ್ಕಾಗಿ ನೇಪಾಳ ಮತ್ತು ಕಾಶ್ಮೀರದಿಂದ 1 ಕೋಟಿ ರು. ಸುಪಾರಿ ಕುದುರಿಸಲು ಹಾಗೂ ಪಾಕಿಸ್ತಾನದಿಂದ ಶಸ್ತಾಸ್ತ್ರಗಳನ್ನು ಖರೀದಿಸಲು ಯತ್ನಿಸಿದ್ದ.

‘ಆತನ ಮೊಬೈಲ್ ನಿಂದ ಹಲವು ಆಕ್ಷೇಪಾರ್ಹ ವಿಷಯಗಳಿದ್ದವು. ಬಂಧಿತ ಆರೋಪಿ ತನ್ನ ಗುರುತು ಮರೆ ಮಾಚಲು ನೇಪಾಳದಿಂದ ಸಿಮ್ ಖರೀದಿ ಮಾಡಿದ್ದಾನೆ. ಒಂದೂವರೆ ವರ್ಷದಿಂದ ಆತನ ಜೊತೆ ಪಾಕಿಸ್ತಾನ ಮತ್ತು ನೇಪಾಳದ ಇಬ್ಬರು ವ್ಯಕ್ತಿಗಳು ಸಂಪರ್ಕದಲ್ಲಿದ್ದರು. ಪಾಕಿಸ್ತಾನ, ವಿಯೆಟ್ನಾಂ, ಇಂಡೋನೆಷ್ಯಾ. ಕಜಕಿಸ್ತಾನ, ಲಾವೋಸ್ ಸೇರಿದಂತೆ ಬೇರೆ ದೇಶಗಳ ವಾಟ್ಸ್ಯಾಪ್ ಸಂಖ್ಯೆ ಹೊಂದಿರುವರ ಜೊತೆ ಮೊಬೈಲ್ ಸಂಭಾಷಣೆ ನಡೆಸಿರುವ ಸಾಕ್ಷ್ಯ ಲಭ್ಯವಾಗಿದೆ ’ ಎಂದು ಸೂರತ್ ಕಮಿಷನರ್ ಅನುಪಮ್ ಸಿಂಗ್ ಗೆಹ್ಲೋಟ್ ಮಾಹಿತಿ ನೀಡಿದ್ದಾರೆ.