ಸಾರಾಂಶ
ಉದಾಸೀನ ಬಿಟ್ಟು ಮತ ಚಲಾಯಿಸಿದ ಮಹಂತ ಹರಿದಾಸ್ ಗುಜರಾತ್‌ನ ಬನೆಜ್ ಮತಗಟ್ಟೆಯಲ್ಲಿ ಶೇ.100ರಷ್ಟು ಮತಚಲಾವಣೆಯಾಗಲು ಕಾರಣರಾಗಿದ್ದಾರೆ.
ಬನೆಜ್ (ಗುಜರಾತ್): ಅಪರೂಪದ ವಿದ್ಯಮಾನವೊಂದರಲ್ಲಿ ಗುಜರಾತ್‌ನ ಮತಗಟ್ಟೆಯೊಂದರಲ್ಲಿ ಶೇ.100ರಷ್ಟು ಮತ ಚಲಾವಣೆಯಾಗಿದೆ. ಏಕೆಂದರೆ ಅಲ್ಲಿದ್ದದ್ದು ಒಬ್ಬನೇ ಮತದಾರ. ಅವರು ಮತ ಚಲಾಯಿಸಿದ ಹಿನ್ನೆಲೆಯಲ್ಲಿ ಗುಜರಾತ್‌ನ ಗಿರ್ ಅರಣ್ಯದೊಳಗಿನ ಬನೆಜ್ ಮತಗಟ್ಟೆಗೆ ಶೇ.100ರಷ್ಟು ಮತ ಚಲಾಯಿಸಿದ ಶ್ರೇಯ ಸಂದಿದೆ.
ಭಾರತದಲ್ಲಿ ಪ್ರಜಾಪ್ರಭುತ್ವದ ಅತಿದೊಡ್ಡ ಪ್ರಕ್ರಿಯೆಯಾಗಿರುವ ಮತದಾನದಿಂದ ಯಾರೊಬ್ಬರೂ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗ, ಗಿರ್ ಅರಣ್ಯದೊಳಗಿನ ಶಿವ ದೇಗುಲದ ಅರ್ಚಕ ಮಹಂತ ಹರಿದಾಸ್ ಉದಾಸೀನ್ ಎಂಬ ಏಕೈಕ ಮತದಾರನಿಗೆ ಮತಗಟ್ಟೆ ಸ್ಥಾಪಿಸಿತ್ತು. ಇದಕ್ಕಾಗಿ 10ಕ್ಕೂ ಹೆಚ್ಚು ಸಿಬ್ಬಂದಿ ಉರಿಬಿಸಿಲಿನಲ್ಲಿ ದಟ್ಟಾರಣ್ಯದೊಳಗೆ ಸಾಗಿ ಮತಗಟ್ಟೆ ತಲುಪಿದ್ದರು.