ಸಾರಾಂಶ
ರೈತರ ಪ್ರತಿಭಟನೆಯಲ್ಲಿ ಹೃದಯಾಘಾತದಿಂದಾಗಿ ಗ್ಯಾನ್ ಸಿಂಗ್ ಎಂಬ ರೈತ ಸಾವನ್ನಪ್ಪಿದ್ದಾನೆ.
ಅಂಬಾಲಾ: ದಿಲ್ಲಿ ಚಲೋ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 80 ವರ್ಷದ ಹಿರಿಯ ರೈತರೊಬ್ಬರು ಶುಕ್ರವಾರ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾರೆ.
ಗಿಯಾನ್ ಸಿಂಗ್ ಎಂಬ ರೈತರು ಮಂಗಳವಾರ ಇಲ್ಲಿ ದಿಲ್ಲಿ ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು.
ಗುರುವಾರ ಪ್ರತಿಭಟನೆ ನಡೆಸುವ ವೇಳೆ ಎದೆ ನೋವು ಎಂದು ಹತ್ತಿರವಿದ್ದವರ ಬಳಿ ಹೇಳಿಕೊಂಡಿದ್ದರು.
ಅವರನ್ನು ಕೂಡಲೆ ಪಂಜಾಬ್‌ನ ರಾಜಪುರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಆದರೆ ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಪಟಿಯಾಲಾದಲ್ಲಿನ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಅವರು ನಿಧನರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.