ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಹೆಸರು, ಫೋಟೋ, ವಿಡಿಯೋ ಇತ್ಯಾದಿಗಳ ದುರ್ಬಳಕೆಗೆ ಕಡಿವಾಣ ಹಾಕಿರುವ ದೆಹಲಿ ಹೈಕೋರ್ಟ್, ಅವರು ಪಾಕಿಸ್ತಾನವನ್ನು ಹೊಗಳುತ್ತಿರುವಂತೆ ಎಐ ಬಳಸಿ ಮಾಡಲಾದ ಡೀಪ್ ಫೇಕ್ ವಿಡಿಯೋವನ್ನು ತೆಗೆದುಹಾಕುವಂತೆ ಎಕ್ಸ್‌ಗೆ ಸೂಚಿಸಿದೆ.
ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಹೆಸರು, ಫೋಟೋ, ವಿಡಿಯೋ ಇತ್ಯಾದಿಗಳ ದುರ್ಬಳಕೆಗೆ ಕಡಿವಾಣ ಹಾಕಿರುವ ದೆಹಲಿ ಹೈಕೋರ್ಟ್, ಅವರು ಪಾಕಿಸ್ತಾನವನ್ನು ಹೊಗಳುತ್ತಿರುವಂತೆ ಎಐ ಬಳಸಿ ಮಾಡಲಾದ ಡೀಪ್ ಫೇಕ್ ವಿಡಿಯೋವನ್ನು ತೆಗೆದುಹಾಕುವಂತೆ ಎಕ್ಸ್‌ಗೆ ಸೂಚಿಸಿದೆ. ಶಶಿ ತರೂರ್ ಹೂಡಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ತೀರ್ಪು ನೀಡಿದ ನ್ಯಾ। ಮಿನಿ ಪುಷ್ಕರ್ಣ, ‘ತರೂರ್ ಅವರ ಹೆಸರು, ಫೋಟೋ, ಸ್ವರ, ಮಾತನಾಡುವ ರೀತಿ, ಉತ್ಕೃಷ್ಟ ಪದವಳಕೆ ಸೇರಿದಂತೆ ಅವರ ವ್ಯಕ್ತಿತ್ವವನ್ನು ಬಳಸಿಕೊಂಡು ಡೀಪ್‌ಫೇಕ್ ವಿಡಿಯೋ, ಆಡಿಯೋ, ಇತ್ಯಾದಿಗಳನ್ನು ವಾಣಿಜ್ಯ, ರಾಜಕೀಯ ಅಥವಾ ಇನ್ನಿತರೆ ದುರುದ್ದೇಶಪೂರಿತ ಕೆಲಸಗಳಿಗೆ ಯಾವುದೇ ಮಾಧ್ಯಮದಲ್ಲಿ ಬಳಸಬಾರದು’ ಎಂದು ಮಧ್ಯಂತರ ಆದೇಶ ಹೊರಡಿಸಿದ್ದಾರೆ.
ಜತೆಗೆ, ಅಂತಹ ರೀಲ್‌ಗಳನ್ನು ತೆಗೆದು ಹಾಕುವಂತೆ ಮೆಟಾಗೆ ನಿರ್ದೇಶಿಸಿದ್ದಾರೆ.