ಚುರು ನಿಗಿ ನಿಗಿ ಕೆಂಡ: 50.5 ಡಿಗ್ರಿ ಉಷ್ಣಾಂಶ

| Published : May 29 2024, 12:45 AM IST

ಸಾರಾಂಶ

ದೇಶದ ಉತ್ತರ ಮತ್ತು ಪೂರ್ವದ ರಾಜ್ಯಗಳಲ್ಲಿ ಉಷ್ಣಾಂಶದಲ್ಲಿ ದಿನೇ ದಿನೇ ಏರಿಕೆಯಾಗುತ್ತಲೇ ಇದ್ದು, ಮಂಗಳವಾರ ರಾಜಸ್ಥಾನದ ಚುರು ಮತ್ತು ಹರ್ಯಾಣದ ಸಿರ್ಸಾದಲ್ಲಿ ಗರಿಷ್ಠ ಉಷ್ಣಾಂಶ 50 ಡಿಗ್ರಿ ಸೆಲ್ಷಿಯಸ್‌ ದಾಟಿದೆ.

ನವದೆಹಲಿ: ದೇಶದ ಉತ್ತರ ಮತ್ತು ಪೂರ್ವದ ರಾಜ್ಯಗಳಲ್ಲಿ ಉಷ್ಣಾಂಶದಲ್ಲಿ ದಿನೇ ದಿನೇ ಏರಿಕೆಯಾಗುತ್ತಲೇ ಇದ್ದು, ಮಂಗಳವಾರ ರಾಜಸ್ಥಾನದ ಚುರು ಮತ್ತು ಹರ್ಯಾಣದ ಸಿರ್ಸಾದಲ್ಲಿ ಗರಿಷ್ಠ ಉಷ್ಣಾಂಶ 50 ಡಿಗ್ರಿ ಸೆಲ್ಷಿಯಸ್‌ ದಾಟಿದೆ. ಚುರುನಲ್ಲಿ 50.5 ಡಿಗ್ರಿ ಮತ್ತು ಸಿರ್ಸಾದಲ್ಲಿ 50.3 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಚುರುವಿನಲ್ಲಿ ದಾಖಲಾದ ಉಷ್ಣಾಂಶ ಸಾಮಾನ್ಯಕ್ಕಿಂತ 7 ಡಿಗ್ರಿಯಷ್ಟು ಹೆಚ್ಚಳವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 2019ರಲ್ಲಿ 50.8 ಡಿಗ್ರಿ ದಾಖಲಾಗಿತ್ತು.ಇನ್ನು ರಾಜಧಾನಿ ದೆಹಲಿಯ ಹಲವು ಪ್ರದೇಶಗಳಲ್ಲೂ ಬುಧವಾರ ಗರಿಷ್ಠ ಉಷ್ಣಾಂಶ 50 ಡಿಗ್ರಿ ಸಮೀಪಕ್ಕೆ ತಲುಪಿದೆ. ಮುಂಗೇಶ್‌ಪುರ, ನರೇಲಾದಲ್ಲಿ 49.4 ಡಿಗ್ರಿ ತಾಪಮಾನ ತಲುಪಿದ್ದು, ಸಾಮಾನ್ಯ ಅವಧಿಗಿಂತ ಶೇ.9ರಷ್ಟು ಹೆಚ್ಚಾಗಿದೆ.