ಉತ್ತರಾಖಂಡದಲ್ಲಿ ಕೇದಾರನಾಥದಿಂದ ಹೊರಟಿದ್ದ ಹೆಲಿಕಾಪ್ಟರ್‌ ಕೆಲ ಕ್ಷಣದಲ್ಲಿಯೇ ನಡು ರಸ್ತೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಅದೃಷ್ಟವಶಾತ್‌ ಅದರಲ್ಲಿದ್ದ 6 ಜನರಿಗೆ ಯಾವುದೇ ಅನಾಹುತ ಸಂಭವಿಸಿಲ್ಲ. ಕಾಪ್ಟರ್‌ ಹಿಂಬದಿ ರೆಕ್ಕೆ ಮುರಿದಿದೆ.

ರುದ್ರಪ್ರಯಾಗ: ಉತ್ತರಾಖಂಡದಲ್ಲಿ ಕೇದಾರನಾಥದಿಂದ ಹೊರಟಿದ್ದ ಹೆಲಿಕಾಪ್ಟರ್‌ ಕೆಲ ಕ್ಷಣದಲ್ಲಿಯೇ ನಡು ರಸ್ತೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಅದೃಷ್ಟವಶಾತ್‌ ಅದರಲ್ಲಿದ್ದ 6 ಜನರಿಗೆ ಯಾವುದೇ ಅನಾಹುತ ಸಂಭವಿಸಿಲ್ಲ. ಕಾಪ್ಟರ್‌ ಹಿಂಬದಿ ರೆಕ್ಕೆ ಮುರಿದಿದೆ.

ಶುಕ್ರವಾರ ಮಧ್ಯಾಹ್ನ 12:52ರ ವೇಳೆಗೆ ಕೇದಾರನಾಥ ಸಮೀಪ ಬದಾಸುವಿನಿಂದ ಹೊರಟು ಬರುತ್ತಿತ್ತು. ಹಾರಾಟ ಆರಂಭಿಸಿದ ಕೆಲ ಹೊತ್ತಿನಲ್ಲಿಯೇ ಕಂಟ್ರೋಲಿಂಗ್ಸ್‌ನಲ್ಲಿ ದೋಷ ಕಾಣಿಸಿಕೊಂಡಿದೆ. ಹೀಗಾಗಿ ಪೈಲೆಟ್‌ ಸಾಹಸಮಯವಾಗಿ ನಡು ರಸ್ತೆಯಲ್ಲಿ ಕಾಪ್ಟರ್‌ ಇಳಿಸಿದ್ದಾರೆ. ಇದರಿಂದಾಗಿ ಪೈಲೆಟ್‌ಗೆ ಮಾತ್ರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಪ್ಟರ್‌ನ ಹಿಂಬದಿ ರೆಕ್ಕೆ ಮುರಿದಿದೆ. ಇದರ ಕೆಳಗೆ ನಿಂತಿದ್ದ ಕಾರಿಗೂ ಸಹ ಹಾನಿಯಾಗಿದೆ.

ಇದು ವರ್ಷದಲ್ಲಿ ನಡೆಯುತ್ತಿರುವ 4ನೇ ಕಾಪ್ಟರ್‌ ಅಪಘಾತವಾಗಿದೆ.