ನವದೆಹಲಿ: ಚಳಿಗಾಲ ಸಂದರ್ಭದಲ್ಲಿ ಹೆಚ್ಚಿನ ವಾಯುಮಾಲಿನ್ಯಕ್ಕೆ ತುತ್ತಾಗುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರ್ಕಾರ ಅದಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು ನ.1ರಿಂದ ಶೇ.50ರಷ್ಟು ವರ್ಕ್ ಫ್ರಂ ಹೋಮ್ ನೀತಿ ಜಾರಿಗೆ ಮುಂದಾಗಿದೆ. ಇದರ ಜತೆಗೆ ನಿರ್ಮಾಣ, ಪಾರ್ಕಿಂಗ್ ವಲಯಗಳಿಗೂ ಕೆಲ ಷರತ್ತುಗಳನ್ನು ಹೇರಲಿದೆ.
- ನ.1ರಿಂದ ಹೊಸ ನೀತಿ ಜಾರಿಗೆ
ನವದೆಹಲಿ: ಚಳಿಗಾಲ ಸಂದರ್ಭದಲ್ಲಿ ಹೆಚ್ಚಿನ ವಾಯುಮಾಲಿನ್ಯಕ್ಕೆ ತುತ್ತಾಗುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರ್ಕಾರ ಅದಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು ನ.1ರಿಂದ ಶೇ.50ರಷ್ಟು ವರ್ಕ್ ಫ್ರಂ ಹೋಮ್ ನೀತಿ ಜಾರಿಗೆ ಮುಂದಾಗಿದೆ. ಇದರ ಜತೆಗೆ ನಿರ್ಮಾಣ, ಪಾರ್ಕಿಂಗ್ ವಲಯಗಳಿಗೂ ಕೆಲ ಷರತ್ತುಗಳನ್ನು ಹೇರಲಿದೆ.ನವೆಂಬರ್‌ನಲ್ಲಿ ಉಲ್ಬಣಗೊಳ್ಳುವ ವಾಯುಮಾಲಿನ್ಯ ತಡೆಗೆ ದೆಹಲಿ ಸರ್ಕಾರ ನ.1ರಿಂದ ಫೆ.28ರವರೆಗೆ ಅನ್ವಯವಾಗುವಂತೆ ಕೆಲ ಕ್ರಮಗಳನ್ನು ಪ್ರಕಟಿಸಿದೆ. ಅದರ ಪ್ರಕಾರ, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಿಗೆ ಶೇ.50ರಷ್ಟು ವರ್ಕ್ ಫ್ರಂ ಹೋಮ್ ಜಾರಿಗೆ ಮುಂದಾಗಿದೆ. ದೆಹಲಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಸರ್ಕಾರಿ ಕಚೇರಿಗಳ ವೇಳಾಪಟ್ಟಿ ಪರಿಷ್ಕರಿಸಿದ್ದು ನ.1ರಿಂದ ಫೆ.28ರ ತನಕ ಬೆಳಿಗ್ಗೆ 10:00 ರಿಂದ ಸಂಜೆ 6:30 ರವರೆಗೆ ಕಾರ್ಯನಿರ್ವಹಿಸುತ್ತವೆ
ನಿರ್ಮಾಣ, ಪಾರ್ಕಿಂಗ್‌ಗೂ ಷರತ್ತುಡಿ.10ರಿಂದ ಮುಂದಿನ ವರ್ಷದ ಜ.20ರ ತನಕ ಜಾರಿಗೆ ಬರುವಂತೆ ಕಟ್ಟಡಗಳ ನಿರ್ಮಾಣ, ದುರಸ್ತಿ ಕಾರ್ಯಗಳ ಮೇಲೆ ಸಂಪೂರ್ಣ ನಿಷೇಧ ಹೇರಿದೆ. ಧೂಳು ಹೊರ ಸೂಸುವ ಒಳಾಂಗಣ, ಹೊರಾಂಗಣ ನಿರ್ಮಾಣ ಚಟುವಟಿಕೆಗೆ ನ.1- ಜ.31ರ ತನಕ ನಿರ್ಬಂಧವಿದೆ. ಜತೆಗೆ ನಿಗದಿತ ಸ್ಥಳಗಳಲ್ಲಿ ಪಾರ್ಕಿಂಗ್ ಶುಲ್ಕ ದುಪ್ಪಟ್ಟಾಗಲಿದೆ.