ಅನರ್ಹತೆ ಪ್ರಶ್ನಿಸಿ ಆರು ಹಿಮಾಚಲ ಕಾಂಗ್ರೆಸ್‌ ಶಾಸಕರು ಹೈಕೋರ್ಟ್‌ಗೆ

| Published : Mar 02 2024, 01:47 AM IST

ಸಾರಾಂಶ

ಹಿಮಾಚಲ ಪ್ರದೇಶದ ಸ್ಪೀಕರ್‌ ತಮ್ಮನ್ನು ಕಾನೂನುಬಾಹಿರವಾಗಿ ಅನರ್ಹ ಮಾಡಿದ್ದಾರೆ ಎಂದು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ನವದೆಹಲಿ: ಪಕ್ಷದ ವಿಪ್‌ ಉಲ್ಲಂಘಿಸಿದ ಕಾರಣಕ್ಕಾಗಿ ಕಾಂಗ್ರೆಸ್‌ನಿಂದ ವಜಾಗೊಂಡಿರುವ ಹಿಮಾಚಲಪ್ರದೇಶದ 6 ಕಾಂಗ್ರೆಸ್‌ ಶಾಸಕರು ಹೈಕೋರ್ಟ್‌ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

ಸ್ಪೀಕರ್‌ ನೀಡಿದ್ದ ನೋಟಿಸ್‌ಗೆ ಉತ್ತರಿಸಲು ತಮಗೆ ಕಾನೂನಿನನ್ವಯ ಏಳು ದಿನಗಳ ಕಾಲಾವಕಾಶ ನೀಡಿಲ್ಲ.

ಸೂಕ್ತ ದಾಖಲೆಗಳನ್ನು ಒದಗಿಸದೇ ನಿಯಮಬಾಹಿರವಾಗಿ ತಮ್ಮನ್ನು ಅನರ್ಹ ಮಾಡಲಾಗಿದೆ ಎಂಬ ಕಾರಣವಿಟ್ಟುಕೊಂಡು ನ್ಯಾಯಾಲಯದಲ್ಲಿ ದಾವೆ ಹೂಡಲು ಕಾಂಗ್ರೆಸ್‌ ಶಾಸಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಮತಹಾಕಿದ್ದಕ್ಕೆ ಮತ್ತು ಬಜೆಟ್‌ ಮೇಲಿನ ಮತದಾನಕ್ಕೆ ಗೈರಾದ ಕಾರಣ ನೀಡಿ 6 ಶಾಸಕರನ್ನು ವಿಧಾನಸಭೆ ಸ್ಪೀಕರ್‌ ವಜಾ ಮಾಡಿದ್ದರು.