ಸಾರಾಂಶ
ಹಿಮಾಚಲ ಪ್ರದೇಶದಲ್ಲಿ ಅನರ್ಹಗೊಂಡಿದ್ದ ಆರು ಮಂದಿಯೂ ಸೇರಿದಂತೆ ಒಟ್ಟು 11 ಶಾಸಕರು ಹೃಷಿಕೇಶದ ರೆಸಾರ್ಟ್‌ವೊಂದಕ್ಕೆ ತೆರಳಿದ್ದು, ಸುಪ್ರೀಂಕೋರ್ಟ್‌ನಲ್ಲಿ ಅವರ ಅನರ್ಹತೆ ಕುರಿತು ತೀರ್ಪು ಬರುವವರೆಗೂ ಅಲ್ಲೇ ತಂಗಲಿದ್ದಾರೆ ಎನ್ನಲಾಗಿದೆ.
ಹೃಷಿಕೇಶ: ಹಿಮಾಚಲ ಪ್ರದೇಶದಲ್ಲಿ ರಾಜಕೀಯ ಏರಿಳಿತದ ನಡುವೆಯೇ 6 ಕಾಂಗ್ರೆಸ್ ಅನರ್ಹ ಶಾಸಕರು ಸೇರಿ 11 ಶಾಸಕರು ಉತ್ತರಾಖಂಡದ ಹೃಷಿಕೇಶದ ತಾಜ್ ರೆಸಾರ್ಟ್‌ಗೆ ಆಗಮಿಸಿದ್ದಾರೆ.
ಅನರ್ಹತೆ ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ತೀರ್ಪಿನವರೆಗೂ ಅಲ್ಲಿಯೇ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆ ಹೊತ್ತಿನಲ್ಲಿ ಅಡ್ಡ ಮತದಾನ ಮಾಡಿ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಪತನದಂಚಿಗೆ ದೂಡಲು ಕಾರಣರಾದ 9 ಶಾಸಕರು ಇದರಲ್ಲಿ ಇದ್ದಾರೆ.
ಈ ಪೈಕಿ ಕಾಂಗ್ರೆಸ್‌ನ 6 ಬಂಡಾಯ ಶಾಸಕರು, 3 ಸ್ವತಂತ್ರ ಶಾಸಕರು ಇಲ್ಲಿಗೆ ಬಂದಿದ್ದು, ಇವರಿಗೆ ಇಬ್ಬರು ಬಿಜೆಪಿ ಶಾಸಕರು ಸಾಥ್ ನೀಡಿದ್ದಾರೆ.
ಶಾಸಕರನ್ನು ಅನರ್ಹಗೊಳಿಸಿದ್ದ ಸ್ಪೀಕರ್ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡುವವರೆಗೂ ಇವರು ಇಲ್ಲೇ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಶಾಸಕರನ್ನು ಫೆ.28ರಂದು ಸ್ಪೀಕರ್ ಕುಲ್ದೀಪ್ ಸಿಂಗ್ ಅನರ್ಹಗೊಳಿಸಿದ್ದರು.