ಸಾರಾಂಶ
‘ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ. ಅದು ಅಧಿಕೃತ ಭಾಷೆಯಷ್ಟೇ’ ಎಂದು ಮಾಜಿ ಕ್ರಿಕೆಟಿಗ ಆರ್. ಅಶ್ವಿನ್ ಹೇಳಿದ್ದಾರೆ, ಈ ಮೂಲಕ ದಕ್ಷಿಣ ಭಾರತೀಯರು ನಡೆಸುವ ಹಿಂದಿ ವಿರೋಧಿ ಅಭಿಯಾನಕ್ಕೆ ಅವರ ಹೇಳಿಕೆಯಿಂದ ಪುಷ್ಟಿ ಬಂದಿದೆ.
ಚೆನ್ನೈ : ‘ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ. ಅದು ಅಧಿಕೃತ ಭಾಷೆಯಷ್ಟೇ’ ಎಂದು ಮಾಜಿ ಕ್ರಿಕೆಟಿಗ ಆರ್. ಅಶ್ವಿನ್ ಹೇಳಿದ್ದಾರೆ, ಈ ಮೂಲಕ ದಕ್ಷಿಣ ಭಾರತೀಯರು ನಡೆಸುವ ಹಿಂದಿ ವಿರೋಧಿ ಅಭಿಯಾನಕ್ಕೆ ಅವರ ಹೇಳಿಕೆಯಿಂದ ಪುಷ್ಟಿ ಬಂದಿದೆ.
ತಮಿಳುನಾಡಿನ ಖಾಸಗಿ ಕಾಲೇಜಿನಲ್ಲಿ ನಡೆದ ಘಟಿಕೋತ್ಸವದಲ್ಲಿ ಭಾಗಿಯಾಗಿದ್ದ ಅಶ್ವಿನ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ‘ನೀವು ಯಾವ ಭಾಷೆಯಲ್ಲಿ ನನ್ನ ಮಾತುಗಳನ್ನು ಕೇಳಲು ಬಯಸುತ್ತೀರಿ?’ ಎಂದು ಪ್ರಶ್ನಿಸಿದರು. ಆಗ ಕೆಲವರು ‘ಇಂಗ್ಲಿಷ್’ ಎಂದರೆ, ಹೆಚ್ಚಿನವರು ‘ತಮಿಳು’ ಎಂದು ಹೇಳಿದರು. ಆದರೆ ಹಿಂದಿಯನ್ನು ಯಾರೂ ಆಯ್ಕೆ ಮಾಡಿಕೊಳ್ಳಲಿಲ್ಲ.
ಅದಕ್ಕೆ ಪ್ರತಿಕ್ರಿಯಿಸಿದ ಅಶ್ವಿನ್, ‘ಹಿಂದಿಗೆ ಯಾವುದೇ ಪ್ರತಿಕ್ರಿಯೆ ಇಲ್ಲ. ನನ್ನ ಪ್ರಕಾರ ಹಿಂದಿ ನಮ್ಮ ರಾಷ್ಟ್ರೀಯ ಭಾಷೆಯಲ್ಲ. ಆದರೆ ಅಧಿಕೃತ ಭಾಷೆಯಷ್ಟೇ’ ಎಂದರು.
ದಕ್ಷಿಣ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಅಶ್ವಿನ್ ತವರು ರಾಜ್ಯ ತಮಿಳುನಾಡಲ್ಲಿ ಹಿಂದಿ ವಿರೋಧಿ ಅಭಿಯಾನ ನಡೆಯುತ್ತಿರುವುದು ಇಲ್ಲಿ ಗಮನಾರ್ಹ.