ಸಾರಾಂಶ
ಯುನೆಸ್ಕೋ ಪಾರಂಪರಿಕ ತಾಣದಲ್ಲಿ ಫೆ.6 ರಿಂದ ಮೂರು ದಿನಗಳ ಕಾಲ ನಡೆಸಲು ಉದ್ದೇಶಿಸಲಾಗಿರುವ ಉರುಸ್ ಉತ್ಸವಕ್ಕೆ ತಡಯಾಜ್ಞೆ ನೀಡಬೇಕೆಂದು ಕೋರಿ ಆಗ್ರಾ ಸ್ಥಳೀಯ ನ್ಯಾಯಾಲಯದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಅರ್ಜಿ ಸಲ್ಲಿಸಿದೆ.
ಆಗ್ರಾ: ಯುನೆಸ್ಕೋ ಪಾರಂಪರಿಕ ತಾಣದಲ್ಲಿ ಫೆ.6 ರಿಂದ ಮೂರು ದಿನಗಳ ಕಾಲ ನಡೆಸಲು ಉದ್ದೇಶಿಸಲಾಗಿರುವ ಉರುಸ್ ಉತ್ಸವಕ್ಕೆ ತಡಯಾಜ್ಞೆ ನೀಡಬೇಕೆಂದು ಕೋರಿ ಆಗ್ರಾ ಸ್ಥಳೀಯ ನ್ಯಾಯಾಲಯದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಅರ್ಜಿ ಸಲ್ಲಿಸಿದೆ.
ತಾಜ್ ನಿರ್ಮಾತೃ ಶಹಜಹಾನ್‌ನ ಸಾವಿನ ಸ್ಮರಣಾರ್ಥ ಉರುಸ್ ಉತ್ಸವ ಆಚರಿಸಲಾಗುತ್ತದೆ. ಅದರೆ ಲಭ್ಯವಿರುವ ಮಾಹಿತಿಯಂತೆ ಮೊಘಲರು ಹಾಗೂ ಬ್ರಿಟಿಷರ ಕಾಲದಲ್ಲೂ ಅಧಿಕೃತವಾಗಿ ತಾಜ್‌ಮಹಲ್ ಒಳಗೆ ಅದರ ನೀಡಲು ಅನುಮತಿ ನೀಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ತಾಜ್‌ಮಹಲ್‌ನಲ್ಲಿ ನಡೆಯುವ ಉರುಸ್ ಉತ್ಸವಕ್ಕೆ ಶಾಶ್ವತ ತಡೆ ನೀಡಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ.
ನ್ಯಾಯಾಲಯ ಅರ್ಜಿಯನ್ನು ಪುರಸ್ಕರಿಸಿದ್ದು, ವಿಚಾರಣೆಯನ್ನು ಫೆ.4ಕ್ಕೆ ಮುಂದೂಡಿದೆ.