ಜೈಲು ಶಿಕ್ಷೆಗೆ ಆಘಾತ ವ್ಯಕ್ತಪಡಿಸಿದ ಹಿಂದುಜಾ ಕುಟುಂಬ

| Published : Jun 23 2024, 02:00 AM IST / Updated: Jun 23 2024, 05:07 AM IST

SP Hinduja
ಜೈಲು ಶಿಕ್ಷೆಗೆ ಆಘಾತ ವ್ಯಕ್ತಪಡಿಸಿದ ಹಿಂದುಜಾ ಕುಟುಂಬ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದಿಂದ ಕರೆಸಿಕೊಂಡ ಕಾರ್ಮಿಕರನ್ನು ಶೋಷಿಸಿದ ಪ್ರಕರಣದಲ್ಲಿ ಸ್ವಿಜರ್‌ಲೆಂಡ್‌ ನ್ಯಾಯಾಲಯ ತಮಗೆ 4.5 ವರ್ಷಗಳ ಜೈಲುಶಿಕ್ಷೆ ವಿಧಿಸಿರುವುದಕ್ಕೆ ಬ್ರಿಟನ್ನಿನ ನಂ.1 ಶ್ರೀಮಂತ ಉದ್ಯಮಿಗಳ ಕುಟುಂಬವಾದ ಹಿಂದುಜಾ ಕುಟುಂಬ ಆಘಾತ ವ್ಯಕ್ತಪಡಿಸಿದೆ.

 ಲಂಡನ್‌ : ಭಾರತದಿಂದ ಕರೆಸಿಕೊಂಡ ಕಾರ್ಮಿಕರನ್ನು ಶೋಷಿಸಿದ ಪ್ರಕರಣದಲ್ಲಿ ಸ್ವಿಜರ್‌ಲೆಂಡ್‌ ನ್ಯಾಯಾಲಯ ತಮಗೆ 4.5 ವರ್ಷಗಳ ಜೈಲುಶಿಕ್ಷೆ ವಿಧಿಸಿರುವುದಕ್ಕೆ ಬ್ರಿಟನ್ನಿನ ನಂ.1 ಶ್ರೀಮಂತ ಉದ್ಯಮಿಗಳ ಕುಟುಂಬವಾದ ಹಿಂದುಜಾ ಕುಟುಂಬ ಆಘಾತ ವ್ಯಕ್ತಪಡಿಸಿದೆ. ಅಲ್ಲದೆ, ತಮಗೆ ತಪ್ಪಾಗಿ ಶಿಕ್ಷೆ ವಿಧಿಸಲಾಗಿದ್ದು, ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದೇವೆ ಎಂದೂ ತಿಳಿಸಿದೆ.

ಅಶೋಕ್‌ ಲೇಲ್ಯಾಂಡ್‌ ಸೇರಿದಂತೆ ನಾನಾ ಉದ್ದಿಮೆಗಳನ್ನು ಹೊಂದಿರುವ ಹಾಗೂ ಭಾರತ ಸೇರಿದಂತೆ 48 ದೇಶಗಳಲ್ಲಿ ಉದ್ದಿಮೆಗಳನ್ನು ನಡೆಸುವ ಹಿಂದುಜಾ ಕುಟುಂಬದ ಪ್ರಕಾಶ್‌, ಕಮಲ್‌ ಹಿಂದುಜಾ ಹಾಗೂ ಅವರ ಮಗ ಅಜಯ್‌ ಮತ್ತು ಸೊಸೆ ನಮೃತಾಗೆ ಜಿನೆವಾ ನ್ಯಾಯಾಲಯ ಜೈಲುಶಿಕ್ಷೆ ವಿಧಿಸಿದೆ. 8.5 ಲಕ್ಷ ಕೋಟಿ ರು. ಆಸ್ತಿ ಹೊಂದಿರುವ ಹಿಂದುಜಾಗಳು ಅನಿವಾಸಿ ಭಾರತೀಯರಾಗಿದ್ದಾರೆ.

‘ಹಿಂದುಜಾಗಳ ವಿರುದ್ಧ ಹೊರಿಸಲಾಗಿದ್ದ ಮಾನವ ಕಳ್ಳಸಾಗಣೆ ಆರೋಪ ಸಾಬೀತಾಗಿಲ್ಲ. ಆದರೆ ಕಾರ್ಮಿಕರ ಶೋಷಣೆಯ ಆರೋಪದಡಿ ಜೈಲುಶಿಕ್ಷೆ ಪ್ರಕಟವಾಗಿದೆ. ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ. ಈಗಾಗಲೇ ಕಾರ್ಮಿಕರು ಕೂಡ ತಮ್ಮ ದೂರು ಹಿಂಪಡೆದಿದ್ದಾರೆ. ಹಿಂದುಜಾಗಳು ತಕ್ಷಣ ಜೈಲಿಗೆ ಹೋಗುತ್ತಾರೆ ಎಂದು ಕೆಲ ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ. ಸ್ವಿಜರ್‌ಲೆಂಡ್‌ ಕಾನೂನಿನ ಪ್ರಕಾರ ಅತ್ಯುನ್ನತ ಕೋರ್ಟ್‌ನಲ್ಲಿ ಶಿಕ್ಷೆ ಎತ್ತಿಹಿಡಿಯಲ್ಪಟ್ಟರೆ ಮಾತ್ರ ಆರೋಪ ಸಾಬೀತಾದಂತಾಗುತ್ತದೆ. ಈಗ ತೀರ್ಪು ನೀಡಿರುವುದು ಕೆಳ ಹಂತದ ಕೋರ್ಟ್ ಆಗಿದೆ’ ಎಂದು ಹಿಂದುಜಾಗಳ ವಕೀಲರು ತಿಳಿಸಿದ್ದಾರೆ.