ಸಾರಾಂಶ
ಢಾಕಾ: ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ಮತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಬಾಂಗ್ಲಾದೇಶದ ಹಿಂದೂಗಳು ಶನಿವಾರ ಚಿತ್ತಗಾಂಗ್‌ನಲ್ಲಿ ಬೃಹತ್ ರ್‍ಯಾಲಿ ನಡೆಸಿದರು.
ಜೊತೆಗೆ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಪಟ್ಟುಹಿಡಿದಿದ್ದಾರೆ. ಚಿತ್ತಗಾಂಗ್‌ನ ಐತಿಹಾಸಿಕ ಲಾಲ್ಡಿಗಿ ಮೈದಾನದಲ್ಲಿ ಸನಾತನ್ ಜಾಗರಣ್ ಮಂಚ್ ವತಿಯಿಂದ ಆಯೋಜಿತ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಹಿಂದೂಗಳು, ಬಾಂಗ್ಲಾದೇಶದ ಮದ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್‌ಗೆ 7 ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದಾರೆ.
ಹಿಂದೂಗಳ ಮೇಲಿನ ದೌರ್ಜನ್ಯ ಇತ್ಯರ್ಥಕ್ಕೆ ಪ್ರತ್ಯೇಕ ನ್ಯಾಯಾಧೀಕರಣ, ಹಿಂದೂಗಳಿಗೆ ಸರಿಯಾದ ಪರಿಹಾರ ಮತ್ತು ಪುನರ್ವಸತಿ, ಅಲ್ಪಸಂಖ್ಯಾತ ರಕ್ಷಣಾ ಕಾನೂನು ಜಾರಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಸ್ಥಾಪನೆ, ಹಿಂದೂ, ಬೌದ್ಧ ಮತ್ತು ಕ್ರೈಸ್ತ ಟ್ರಸ್ಟ್‌ಗಳನ್ನು ಫೌಂಡೇಷನ್ ಗೊಳಿಸುವಿಕೆ, ಆಸ್ತಿ ಮರುಪಡೆಯುವಿಕೆ ಮತ್ತು ಸಂರಕ್ಷಣೆ ಕಾಯ್ದೆ ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ದುರ್ಗಾ ಪೂಜೆ ವೇಳೆ 5 ದಿನಗಳು ರಜೆ ನೀಡಬೇಕು ಎಂದು ಕೋರಿದ್ದಾರೆ.