ಸಾರಾಂಶ
ನವದಹಲಿ: ಹಾರ್ಲಿಕ್ಸ್ , ಬೂಸ್ಟ್ ಸೇರಿದಂತೆ ವಿವಿಧ ಆರೋಗ್ಯ ಲೆಬೆಲ್ ಹೊಂದಿರುವ ಪಾನೀಯಗಳನ್ನು ಉತ್ಪಾದಿಸುವ ಹಿಂದೂಸ್ತಾನ್ ಯುನಿಲಿವರ್ ಸಂಸ್ಥೆಯು ತನ್ನ ಕಂಪನಿಯ ಆರೋಗ್ಯಕರ ಪಾನೀಯ ಪಟ್ಟಿಯಿಂದ ಹಾರ್ಲಿಕ್ಸ್ ಹೆಸರನ್ನು ಕೈ ಬಿಟ್ಟಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ- ಕಾಮರ್ಸ್ ವೈಬ್ಸೈಟ್ ನಿಂದ ಪಾನೀಯಗಳ ಹೆಸರನ್ನು ಆರೋಗ್ಯಕರ ಪಾನೀಯ ಪಟ್ಟಿಯಿಂದ ಕೈ ಬಿಡುವುದಕ್ಕೆ ಸೂಚಿಸಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಹೆಲ್ತ್ ಡ್ರಿಂಕ್ಸ್ ಹೆಸರು ತೆಗೆದು ಹಾಕಿ ಹಾರ್ಲಿಕ್ಸ್ ನ್ನು ಕ್ರಿಯಾತ್ಮಕ ಪೌಷ್ಠಿಕಾಂಶ ಪಾನೀಯದ ಗುಂಪಿಗೆ ಸೇರಿಸಲಾಗಿದೆ.
ಇದಕ್ಕೂ ಮುನ್ನವೇ ‘ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗವು 2006ರ ಆರೋಗ್ಯ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಕಾನೂನಿನಡಿಯಲ್ಲಿ ಆರೋಗ್ಯಕರ ಪಾನೀಯಗೆ ಯಾವುದೇ ಅರ್ಥವಿಲ್ಲ. ಡೈರಿ, ಧಾನ್ಯ ಅಥವಾ ಮಾಲ್ಟ್ ಆಧಾರಿತ ಪಾನೀಯಗಳನ್ನು ಹೆಲ್ಟ್ ಡ್ರಿಂಕ್ ಪಟ್ಟಿಗೆ ಸೇರಿಸಬೇಡಿ. ಅದು ಸರಿಯಾದ ಪದವಲ್ಲ. ಗ್ರಾಹಕರು ತಪ್ಪು ಹಾದಿ ತುಳಿಯುವುದಕ್ಕೆ ಕಾರಣವಾಗುತ್ತದೆ’ ಎಂದು ಸೂಚಿಸಿತ್ತು.
;Resize=(128,128))
;Resize=(128,128))
;Resize=(128,128))
;Resize=(128,128))