ಸಾರಾಂಶ
ಟೂರಿಸ್ಟ್ ವೀಸಾ ಪಡೆದು ದುಬೈಗೆ ಹೋಗಬಯಸುವ ಪ್ರವಾಸಿಗರಿಗೆ ಹೊಸ ನಿಯಮ ರೂಪಿಸಲಾಗಿದೆ. ಈ ಸಂಬಂಧ ಅಲ್ಲಿನ ವಲಸೆ ಇಲಾಖೆ ಬಿಡುಗಡೆ ಮಾಡಿರುವ ಮಾರ್ಗಸೂಚಿಯ ಪ್ರಕಾರ ಹೋಟೆಲ್ ಕಾಯ್ದಿರಿಸಿದ ಬಗೆಗಿನ ಮಾಹಿತಿ ಹಾಗೂ ಮರಳುವ ಟಿಕೆಟ್‌ನ ಪ್ರತಿ ಸಲ್ಲಿಸುವುದು ಕಡ್ಡಾಯ ಮಾಡಲಾಗಿದೆ.
ದುಬೈ: ಟೂರಿಸ್ಟ್ ವೀಸಾ ಪಡೆದು ದುಬೈಗೆ ಹೋಗಬಯಸುವ ಪ್ರವಾಸಿಗರಿಗೆ ಹೊಸ ನಿಯಮ ರೂಪಿಸಲಾಗಿದೆ. ಈ ಸಂಬಂಧ ಅಲ್ಲಿನ ವಲಸೆ ಇಲಾಖೆ ಬಿಡುಗಡೆ ಮಾಡಿರುವ ಮಾರ್ಗಸೂಚಿಯ ಪ್ರಕಾರ ಪ್ರವಾಸಿ ವೀಸಾಗೆ ಅರ್ಜಿ ಸಲ್ಲಿಸುವ ವೇಳೆ ಹೋಟೆಲ್ ಕಾಯ್ದಿರಿಸಿದ ಬಗೆಗಿನ ಮಾಹಿತಿ ಹಾಗೂ ಮರಳುವ ಟಿಕೆಟ್‌ನ ಪ್ರತಿ ಸಲ್ಲಿಸುವುದು ಕಡ್ಡಾಯ ಮಾಡಲಾಗಿದೆ.
ಈಗಾಗಲೇ ಪಾಕಿಸ್ತಾನ, ಕೆಲ ಆಫ್ರಿಕನ್ ದೇಶಗಳ ಪ್ರವಾಸಿಗರಿದ ನಿಯಮವನ್ನು ಎಲ್ಲರಿಗೂ ವಿಸ್ತರಣೆ ಮಾಡಲಾಗುತ್ತಿದೆ. ಅಕ್ರಮ ವಲಸೆ ತಡೆಯಲು ಸರ್ಕಾರ ಈ ನಿಯಮ ಜಾರಿಗೆ ತರುತ್ತಿದೆ.ಈ ಮೊದಲು ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಕೇಳಿದರಷ್ಟೇ ಈ ಕಡತಗಳನ್ನು ತೋರಿಸಬೇಕಿತ್ತು. ಆದರೆ ಇದೀಗ 2 ತಿಂಗಳ ವೀಸಾ ಪಡೆಯಬಯಸುವವರ ಕ್ರೆಡಿಟ್/ ಡೆಬಿಟ್ ಕಾರ್ಡ್‌ನಲ್ಲಿ ಕನಿಷ್ಠ 5000 ದಿರ್ಹಾಮ್ ಹಾಗೂ 3 ತಿಂಗಳ ವೀಸಾ ಬಯಸುವವರ ಬಳಿ 3000 ದಿರ್ಹಾಮ್ ಇರುವುದು ಕಡ್ಡಾಯವಾಗಿತ್ತು.