ಸಾರಾಂಶ
ಗಾಜಾದಲ್ಲಿ ಕದನ ವಿರಾಮ ಘೋಷಣೆಗೆ ಇಸ್ರೇಲ್‌ನ ಸಂಪುಟ ಸಭೆ ಅನುಮತಿ ನೀಡಿದ್ದು, ಇದರೊಂದಿಗೆ 15 ತಿಂಗಳಿನಿಂದ ನಡೆಯುತ್ತಿರುವ ಇಸ್ರೇಲ್- ಹಮಾಸ್ ಯುದ್ಧ ಕೊನೆಗೊಳ್ಳುವ ಹಾದಿಯಲ್ಲಿ ಮೊದಲ ಹೆಜ್ಜೆ ಇಟ್ಟಂತಾಗಿದೆ.
ಜೆರುಸಲೇಂ: ಗಾಜಾದಲ್ಲಿ ಕದನ ವಿರಾಮ ಘೋಷಣೆಗೆ ಇಸ್ರೇಲ್‌ನ ಸಂಪುಟ ಸಭೆ ಅನುಮತಿ ನೀಡಿದ್ದು, ಇದರೊಂದಿಗೆ 15 ತಿಂಗಳಿನಿಂದ ನಡೆಯುತ್ತಿರುವ ಇಸ್ರೇಲ್- ಹಮಾಸ್ ಯುದ್ಧ ಕೊನೆಗೊಳ್ಳುವ ಹಾದಿಯಲ್ಲಿ ಮೊದಲ ಹೆಜ್ಜೆ ಇಟ್ಟಂತಾಗಿದೆ.
ಮಾತುಕತೆಯ ಮಧ್ಯಸ್ಥಿಕೆ ವಹಿಸಿದ್ದ ಕತಾರ್, ಅಮೆರಿಕ, 6 ವಾರಗಳ ಕದನ ವಿರಾಮ ಹಾಗೂ ಒತ್ತೆಯಾಳುಗಳ ಬಿಡುಗಡೆಯ ಘೋಷಣೆ ಮಾಡಿವೆ. ಭಾನುವಾರ ರಾತ್ರಿ 8:30ರಿಂದ ಕದನ ವಿರಾಮ ಜಾರಿಯಾಗಲಿದೆ.ಒಪ್ಪಂದದ ಅನ್ವಯ, ಮೊದಲ ಹಂತದಲ್ಲಿ ಗಾಜಾದ ಕೆಲ ಭಾಗಗಳಿಂದ ಇಸ್ರೇಲ್ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲಿದೆ. ಜೊತೆಗೆ, ಇಸ್ರೇಲ್‌ನಲ್ಲಿ ಬಂಧಿತರಾಗಿರುವ ನೂರಾರು ಪ್ಯಾಲೆಸ್ತೇನಿಯರನ್ನು ಬಿಡುಗಡೆ ಮಾಡಲಾಗುತ್ತಿದ್ದು, ಅದಕ್ಕೆ ಪ್ರತಿಯಾಗಿ 6 ವಾರಗಳಲ್ಲಿ 33 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುವುದು.
2023ರ ಅ.7ರಂದು ಇಸ್ರೇಲ್ ಮೇಲೆ ಏಕಾಏಕಿ ದಾಳಿ ನಡೆಸಿದ್ದ ಹಮಾಸ್, 1,200 ಜನರನ್ನು ಕೊಂದು 250 ಮಂದಿಯನ್ನು ಬಂಧಿಯಾಗಿಸಿಟ್ಟುಕೊಂಡಿತ್ತು. ಬಳಿಕ ಇಸ್ರೇಲ್ ನಡೆಸಿದ ದಾಳಿಗೆ 46,000ಕ್ಕೂ ಅಧಿಕ ಪ್ಯಾಲೆಸ್ತೇನಿಯರು ಬಲಿಯಾಗಿದ್ದರು.ಕದನ ವಿರಾಮ ಒಪ್ಪಂದಗಳು:
-ಇಸ್ರೇಲ್ ಬಂಧಿಸಿರುವ 1,900 ಪ್ಯಾಲೆಸ್ತೇನಿಯರ ಬದಲಾಗಿ ಗಾಜಾದಲ್ಲಿ ಹಮಾಸ್ ಒತ್ತೆಯಾಳಾಗಿರಿಸಿಕೊಂಡಿರುವ 33 ಜನರ ಬಿಡುಗಡೆ ಭಾನುವಾರ ಆರಂಭ-ಹಮಾಸ್‌ನಿಂದ ಮೊದಲ ದಿನ 3, 7ನೇ ದಿನ 4 ಮಹಿಳೆಯರು, ಉಳಿದ 26 ಜನರನ್ನು ಮುಂದಿನ 5 ವಾರಗಳಲ್ಲಿ ಬಿಡುಗಡೆಗೊಳಿಸುವ ಭರವಸೆ
-ಪ್ರತಿ ದಿನ 600 ಪರಿಹಾರ ಟ್ರಕ್‌ಗಳು ಗಾಜಾ ಪ್ರವೇಶಕ್ಕೆ ಅವಕಾಶ