ಸಾರಾಂಶ
2025ನೇ ಸಾಲಿನ ಬುಕರ್ ಪ್ರಶಸ್ತಿಯನ್ನು ಹಂಗೇರಿಯಾದ ಬ್ರಿಟಿಷ್ ಲೇಖಕ ಡೇವಿಡ್ ಸ್ಜಲೇ ಅವರು ತಮ್ಮ ಫ್ಲೆಶ್ ಕಾದಂಬರಿಗೆ ಪಡೆದುಕೊಂಡಿದ್ದಾರೆ. ಈ ಮೂಲಕ ರೇಸ್‌ನಲ್ಲಿದ್ದ ಭಾರತೀಯ ಲೇಖಕಿ ಕಿರಣ್ ದೇಸಾಯಿ ಕೊನೆ ಕ್ಷಣದಲ್ಲಿ ಪ್ರಶಸ್ತಿ ತಪ್ಪಿಸಿಕೊಂಡಿದ್ದಾರೆ.
ಲಂಡನ್; 2025ನೇ ಸಾಲಿನ ಬುಕರ್ ಪ್ರಶಸ್ತಿಯನ್ನು ಹಂಗೇರಿಯಾದ ಬ್ರಿಟಿಷ್ ಲೇಖಕ ಡೇವಿಡ್ ಸ್ಜಲೇ ಅವರು ತಮ್ಮ ಫ್ಲೆಶ್ ಕಾದಂಬರಿಗೆ ಪಡೆದುಕೊಂಡಿದ್ದಾರೆ. ಈ ಮೂಲಕ ರೇಸ್‌ನಲ್ಲಿದ್ದ ಭಾರತೀಯ ಲೇಖಕಿ ಕಿರಣ್ ದೇಸಾಯಿ ಕೊನೆ ಕ್ಷಣದಲ್ಲಿ ಪ್ರಶಸ್ತಿ ತಪ್ಪಿಸಿಕೊಂಡಿದ್ದಾರೆ.
ಕಿರಣ್ ದೇಸಾಯಿ ಅವರ ‘ ದಿ ಲೋನ್ಲಿನೆಸ್ ಆಫ್ ಸೋನಿಯಾ ಆ್ಯಂಡ್ ಸನ್ನಿ’ ಕೃತಿಯು ಬೂಕರ್ ಪ್ರಶಸ್ತಿ ಸುತ್ತಿನಲ್ಲಿತ್ತು. ಆದರೆ ಸ್ಜಲೇ ಅವರು ಕೊನೆಗೆ ವಿಜೇತರಾದರು. 51 ವರ್ಷದ ಸ್ಜಲೇ ಪ್ರಶಸ್ತಿಯ ಜತೆಗೆ 50 ಸಾವಿರ ಪೌಂಡ್ ನಗದನ್ನು ಬಹುಮಾನ ರೂಪದಲ್ಲಿ ಪಡೆಯಲಿದ್ದಾರೆ.ಒಂದು ವೇಳೆ ಕಿರಣ್ ಗೆದ್ದಿದ್ದಾರೆ 2 ಸಲ ಬುಕರ್ ಗೆದ್ದು ಇತಿಹಾಸ ನಿರ್ಮಿಸುತ್ತಿದ್ದರು. 2006ರಲ್ಲಿ ಅವರು ‘ ದಿ ಇನ್‌ಹೆರಿಟೆನ್ಸ್ ಆಫ್ ಲಾಸ್’ ಕೃತಿಗೆ ಪಡೆದಿದ್ದರು.
ಈ ಪ್ರಶಸ್ತಿ ಕೇವಲ ‘ಬುಕರ್’ ಆಗಿದ್ದು, ಬ್ರಿಟನ್‌ನಲ್ಲಿ ಪ್ರಕಾಶನಗೊಂಡ ಆಂಗ್ಲ ಕೃತಿಗಳಿಗೆ ನೀಡಲಾಗುತ್ತದೆ. ಇನ್ನೊಂದು ಪ್ರಶಸ್ತಿ ‘ಇಂಟರ್‌ನ್ಯಾಷನಲ್ ಬುಕರ್’ ಆಗಿದ್ದು, ಆಂಗ್ಲ ಅನುವಾದಿತ ಹಾಗೂ ಮೂಲ ಕೃತಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಕನ್ನಡದ ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಪಡೆದಿದ್ದರು.)
)
;Resize=(128,128))
;Resize=(128,128))
;Resize=(128,128))