ನಾನೇನೂ ನೊಬೆಲ್‌ ಪ್ರಶಸ್ತಿ ಕೇಳಿರಲಿಲ್ಲ : ಟ್ರಂಪ್‌!

| N/A | Published : Oct 12 2025, 01:02 AM IST

ಸಾರಾಂಶ

ಈ ಬಾರಿ ನೊಬೆಲ್‌ ಶಾಂತಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ನನಗೆ ಆ ಗೌರವ ಸಿಗದೇ ಹೋದರೆ ಅಮೆರಿಕನ್ನರಿಗೇ ಅವಮಾನ ಎಂದು ಹಲವು ಬಾರಿ ಹೇಳಿದ್ದರು. ಆದರೆ ಪ್ರಶಸ್ತಿ ಕೈತಪ್ಪಿದ್ದರ ಬಗ್ಗೆ ಬೇಸರಿಸುತ್ತಲೇ, ‘ನಾನೇನೂ ಪ್ರಶಸ್ತಿ ಕೇಳಿರಲಿಲ್ಲ’ ಚಟಾಕಿ ಹಾರಿಸಿದ್ದಾರೆ.

ವಾಷಿಂಗ್ಟನ್‌: ಈ ಬಾರಿ ನೊಬೆಲ್‌ ಶಾಂತಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ನನಗೆ ಆ ಗೌರವ ಸಿಗದೇ ಹೋದರೆ ಅಮೆರಿಕನ್ನರಿಗೇ ಅವಮಾನ ಎಂದು ಹಲವು ಬಾರಿ ಹೇಳಿದ್ದರು. ಆದರೆ ಪ್ರಶಸ್ತಿ ಕೈತಪ್ಪಿದ್ದರ ಬಗ್ಗೆ ಬೇಸರಿಸುತ್ತಲೇ, ‘ನಾನೇನೂ ಪ್ರಶಸ್ತಿ ಕೇಳಿರಲಿಲ್ಲ’ ಚಟಾಕಿ ಹಾರಿಸಿದ್ದಾರೆ.

ಶುಕ್ರವಾರ ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನೊಬೆಲ್‌ ಶಾಂತಿ ಪ್ರಶಸ್ತಿ ಕೈತಪ್ಪಿದ ಬಳಿಕ ಮೊದಲ ಬಾರಿಗೆ ಮಾತನಾಡಿದರು, ‘ಪ್ರಶಸ್ತಿಗೆ ಪಾತ್ರರಾದ ಮಹಿಳೆ ಇಂದು ನನಗೆ ಕರೆ ಮಾಡಿದ್ದರು. ನಾನು ನಿಮ್ಮ ಪರವಾಗಿ ಪ್ರಶಸ್ತಿ ಸ್ವೀಕರಿಸಿದ್ದೇನೆ. ಪ್ರಶಸ್ತಿಗೆ ನೀವು ಹೆಚ್ಚು ಅರ್ಹರಿದ್ದೀರಿ ಎಂದು ಆಕೆ ನನಗೆ ಹೇಳಿದರು. ಆದರೆ ನಾನೇನೂ ಪ್ರಶಸ್ತಿ ಕೊಡಿ ಎಂದು ಕೇಳಿರಲಿಲ್ಲ, ಬಹುಶಃ ಆಕೆಯೇ ಕೇಳಿದ್ದಿರಬಹುದು’ ಎಂದು ಲಘು ಶೈಲಿಯಲ್ಲಿ ಹೇಳಿದಾಗ ಗೋಷ್ಠಿ ನಗೆಗಡಲಲ್ಲಿ ತೇಲಿತು.

ಇದೇ ವೇಳೆ, ‘ಬಹಳ ಸಮಯದಿಂದ ನಾನು ಆಕೆಗೆ ಸಹಾಯ ಮಾಡುತ್ತಿದ್ದೇನೆ. ವಿಪತ್ತಿನ ವೇಳೆ ವೆನಿಜುವೆಲಾಗೆ ಬಹಳ ಸಮಯ ನೆರವಿನ ಅವಶ್ಯಕತೆ ಇತ್ತು. ನನ್ನಿಂದಾಗಿ ಲಕ್ಷಾಂತರ ಜನರ ಜೀವ ಉಳಿಯಿತು ಎಂಬ ಹೆಮ್ಮೆ ನನಗೆ ಇದೆ’ ಎಂದು ಹೇಳಿದರು.

- ಮಾರಿಯಾ ನನಗೆ ಫೋನ್‌ ಮಾಡಿದ್ದರು

- ನಿಮ್ಮ ಪರವಾಗಿ ಪ್ರಶಸ್ತಿ ಸ್ವೀಕರಿಸಿದ್ದೇನೆ, ನೀವು ಅರ್ಹ ಎಂದರು

- ನಾನೇನೂ ಕೇಳಿರಲಿಲ್ಲ, ಆಕೆಯೇ ಪ್ರಶಸ್ತಿ ಕೇಳಿರಬಹುದು

- ಪ್ರಶಸ್ತಿ ಪುರಸ್ಕೃತೆಗೆ ನಾನು ಹಲವು ಬಾರಿ ನೆರವು ನೀಡಿದ್ದೆ

Read more Articles on