ಸಾರಾಂಶ
ಜೈಪುರ: ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಪೋಖ್ರಣ್ ಬಳಿ ಐಎಎಫ್ ಯುದ್ಧ ವಿಮಾನದಲ್ಲಿ ಆಕಸ್ಮಿಕವಾಗಿ ಏರ್‌ಸ್ಟೋರ್ ಬಿಡುಗಡೆಯಾಗಿದೆ. ಜನಸಂಚಾರವಿರದ ಪ್ರದೇಶದಲ್ಲಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
‘ಏರ್‌ಸ್ಟೋರ್’ ಕ್ಷಿಪಣಿ, ಬಾಂಬ್, ಮಿಲಿಟರಿ ಉಪಕರಣಗಳಾಗಿರುತ್ತವೆ. ಇದನ್ನು ಇತರ ದೇಶದ ವಿರುದ್ಧ ಯುದ್ಧ ಮಾಡುವಾಗ ಬಿಡುಗಡೆ ಮಾಡಲಾಗುತ್ತದೆ.
ಆದರೆ, ಬುಧವಾರ ಪೋಖ್ರಣ್ ಫೈರಿಂಗ್ ರೇಂಜ್ ಪ್ರದೇಶದಿಂದ ಕೆಲ ದೂರದಲ್ಲಿ ವಾಸಿಸುತ್ತಿದ್ದ ಜನರಿಗೆ ದೊಡ್ಡದಾದ ಶಬ್ದವೊಂದು ಕೇಳಿಸಿದೆ. ಈ ವೇಳೆ ಸ್ಥಳೀಯರು ಸ್ಥಳಕ್ಕೆ ಹೋಗಿ ನೋಡಿದಾಗ ಏರ್‌ಸ್ಟೋರ್‌ನ ಕೆಲ ವಸ್ತುಗಳು ಪತ್ತೆಯಾಗಿವೆ.
ಈ ಕುರಿತು ಭಾರತೀಯ ವಾಯುಪಡೆ ‘ ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ‘ಪೋಖ್ರಣ್ ಫೈರಿಂಗ್ ರೇಂಜ್ ಪ್ರದೇಶದಲ್ಲಿ ತಾಂತ್ರಿಕ ದೋಷದಿಂದ ಆಕಸ್ಮಿಕವಾಗಿ ಭಾರತೀಯ ವಾಯುಪಡೆ ವಿಮಾನದಲ್ಲಿ ಏರ್‌ಸ್ಟೋರ್ ಬಿಡುಗಡೆಯಾಗಿದೆ’ ಎಂದಿದೆ.
ಐಎಎಫ್ ಏರ್ ಸ್ಡೋರ್‌ನ ನಿಖರ ಸ್ವರೂಪವನ್ನು ಬಹಿರಂಗ ಪಡಿಸಿಲ್ಲ. ಆದರೆ ಘಟನೆ ಕುರಿತು ತನಿಖೆಗೆ ಆದೇಶಿಸಿದೆ.