ಹೈವೇಲಿ ಗಲೀಜು ಶೌಚಾಲಯ ಕಂಡರೆ ವರದಿ ಮಾಡಿ ₹ 1000 ರೀ ಚಾರ್ಜ್‌ ಪಡೀರಿ

| N/A | Published : Oct 15 2025, 08:13 AM IST

Indian Toilet vs Western Toilet
ಹೈವೇಲಿ ಗಲೀಜು ಶೌಚಾಲಯ ಕಂಡರೆ ವರದಿ ಮಾಡಿ ₹ 1000 ರೀ ಚಾರ್ಜ್‌ ಪಡೀರಿ
Share this Article
  • FB
  • TW
  • Linkdin
  • Email

ಸಾರಾಂಶ

ಟೋಲ್‌ ಪ್ಲಾಜಾದಂತದ ಸಾರ್ವಜನಿಕ ಪ್ರದಶದಲ್ಲಿ ಸ್ವಚ್ಛತೆಯನ್ನು ಕಾಪಾಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಜನಸಾಮಾನ್ಯರಿಗೆ ನೀಡಿರುವ ಸರ್ಕಾರ, ಅದಕ್ಕಾಗಿ 1000 ರು. ಬಹುಮಾನವನ್ನೂ ನೀಡಲಿದೆ!

ನವದೆಹಲಿ: ಟೋಲ್‌ ಪ್ಲಾಜಾದಂತದ ಸಾರ್ವಜನಿಕ ಪ್ರದಶದಲ್ಲಿ ಸ್ವಚ್ಛತೆಯನ್ನು ಕಾಪಾಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಜನಸಾಮಾನ್ಯರಿಗೆ ನೀಡಿರುವ ಸರ್ಕಾರ, ಅದಕ್ಕಾಗಿ 1000 ರು. ಬಹುಮಾನವನ್ನೂ ನೀಡಲಿದೆ!

ಹೌದು, ಅ.31ರ ವರೆಗೆ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ವಹಿಸುವ ಯಾವುದೇ ಟೋಲ್‌ ಪ್ಲಾಜಾದಲ್ಲಿ ಕೊಳಕಾದ ಶೌಚಾಲಯ ಕಂಡುಬಂದರೆ ಅದನ್ನು ‘ರಾಜಮಾರ್ಗಯಾತ್ರಾ’ ಆ್ಯಪ್‌ ಮೂಲಕ ವರದಿ ಮಾಡಬಹುದು. ಇದಕ್ಕೆ ಪ್ರತಿಯಾಗಿ ಮಾಹಿತಿ ನೀಡಿದವರ ಫಾಸ್ಟ್‌ಟ್ಯಾಗ್‌ಗೆ 1000 ರು. ರೀಚಾರ್ಜ್‌ ಸಿಗಲಿದೆ.

ದೂರು ನೀಡೋದು ಹೇಗೆ?:

ಪ್ಲಾಜಾಗಳಲ್ಲಿ ಕೊಳಕಾಗಿರುವ ಶೌಚಾಲಯಗಳ ಸ್ಪಷ್ಟ ಚಿತ್ರ ತೆಗೆಯಬೇಕು. ಅದರಲ್ಲಿ ಜಿಯೋಟ್ಯಾಗ್‌ ಮತ್ತು ಸಮಯ ಇರುವುದು ಕಡ್ಡಾಯ. ಇದನ್ನು ರಾಜಮಾರ್ಗಯಾತ್ರಾದಲ್ಲಿ ಅಪ್‌ಲೋಡ್‌ ಮಾಡುವವರು ತಮ್ಮ ಹೆಸರು, ಸ್ಥಳ, ವಾಹನ ನೋಂದಣಿ ಸಂಖ್ಯೆ, ಮೊಬೈಲ್‌ ಸಂಖ್ಯೆಯನ್ನು ಉ್ಲಲೇಖಿಸುವುದು ಕಡ್ಡಾಯ. ಬಳಿಕ ಫಾಸ್ಟ್ಯಾಗ್‌ಗೆ ಜಮೆಯಾಗುವ ಹಣವನ್ನು ನಗದಾಗಿ ಪಡೆಯುವ ಅಥವಾ ವರ್ಗಾಯಿಸಿಕೊಳ್ಳಲಾಗದು.

Read more Articles on