ಸಾರಾಂಶ
ಅಕ್ರಮ ಮರಳುಗಾರಿಕೆಗೆ ಅಡ್ಡ ಬಂದ ಎಎಸ್ಐ ಬಗ್ರಿ ಎನ್ನುವವರ ಮೇಲೆ ಟ್ರ್ಯಾಕ್ಟರ್ ಚಲಾಯಿಸಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದ ಶಹದೋಲ್ ನಲ್ಲಿ ನಡೆದಿದೆ.
ಶಹದೋಲ್ (ಮ.ಪ್ರ.): ಅಕ್ರಮ ಮರಳುಗಾರಿಕೆಗೆ ಅಡ್ಡ ಬಂದ ಎಎಸ್ಐ ಬಗ್ರಿ ಎನ್ನುವವರ ಮೇಲೆ ಟ್ರ್ಯಾಕ್ಟರ್ ಚಲಾಯಿಸಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದ ಶಹದೋಲ್ ನಲ್ಲಿ ನಡೆದಿದೆ.
ಇದರ ಬೆನ್ನಲ್ಲೇ ಎಸ್ಐ ಸಾವಿಗೆ ಕಾರಣವಾದ ಟ್ರ್ಯಾಕ್ಟರ್ ಮಾಲೀಕನ 4 ಲಕ್ಷ ರು. ಮತ್ತು 10 ಲಕ್ಷ ರು ಬೆಲೆ ಬಾಳುವ 2 ಮನೆಯನ್ನು ‘ಅಕ್ರಮ ನಿರ್ಮಾಣ’ದ ಆರೋಪ ಹೊರಿಸಿ ನೆಲಸಮಗೊಳಿಸಲಾಗಿದೆ.
ಟ್ರ್ಯಾಕ್ಟರ್ ಮಾಲೀಕ ಸುರೇಂದ್ರ ಸಿಂಗ್, ಸುರೇಂದ್ರ ಸಿಂಗ್ ಪುತ್ರ ಆಶುತೋಷ್ ಸಿಂಗ್ , ಚಾಲಕ ರಾಜ್ ರಾವತ್ ಟ್ರ್ಯಾಕ್ಟರ್ ನಲ್ಲಿದ್ದರು. ಅವರನ್ನೂ ಬಂಧಿಸಲಾಗಿದೆ.
ಮೃತ ಪೊಲೀಸ್ ಅಧಿಕಾರಿ ಬೇರೊಂದು ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ತನ್ನ ಸಹದ್ಯೋಗಿಗಳ ಜೊತೆಗೆ ತೆರಳುತ್ತಿದ್ದರು. ಈ ವೇಳೆಯಲ್ಲಿ ಟ್ರ್ಯಾಕ್ಟರ್‌ನಲ್ಲಿ ಅಕ್ರಮವಾಗಿ ಮರಳು ಸಾಗಣೆ ಗಮನಕ್ಕೆ ಬಂದಿದೆ. ಟ್ರ್ಯಾಕ್ಟರ್ ನಿಲ್ಲಿಸಲು ಪೊಲೀಸರು ಸೂಚಿಸಿದ್ದಾರೆ. ಆಗ ಆರೋಪಿಗಳು ಟ್ರಾಕ್ಟರ್ ನಿಲ್ಲಿಸದೇ ಎಎಸ್‌ಐ ಮೇಲೆ ಹರಿಸಿ ಹತ್ಯೆ ಮಾಡಿದ್ದಾರೆ.