ಸಾರಾಂಶ
ಜಾರ್ಖಂಡದ ಪಲಾಮು ಹುಲಿ ಸಂರಕ್ಷಿತಾರಣ್ಯ(ಪಿಟಿಆರ್)ದಲ್ಲಿ ವ್ಯಾಘ್ರಗಳಿಗೆ ಆಹಾರ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಮಧ್ಯಪ್ರದೇಶದಿಂದ ಕಾಡೆಮ್ಮೆ ಮತ್ತು ಜಿಂಕೆಗಳನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
ರಾಂಚಿ: ಜಾರ್ಖಂಡದ ಪಲಾಮು ಹುಲಿ ಸಂರಕ್ಷಿತಾರಣ್ಯ(ಪಿಟಿಆರ್)ದಲ್ಲಿ ವ್ಯಾಘ್ರಗಳಿಗೆ ಆಹಾರ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಮಧ್ಯಪ್ರದೇಶದಿಂದ ಕಾಡೆಮ್ಮೆ ಮತ್ತು ಜಿಂಕೆಗಳನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
50 ಕಾಡುಕೋಣ
ಪ್ರಸ್ತುತ ಪಿಟಿಆರ್‌ನಲ್ಲಿ 1.5ರಿಂದ 4 ವರ್ಷದ ವರೆಗಿನ 33 ಹೆಣ್ಣು, 25 ಗಂಡು ಹಾಗೂ 10 ಮರಿ ಸೇರಿ 68 ಎಮ್ಮೆಗಳಿವೆ. ಹುಲಿಗಳ ಹೊಟ್ಟೆ ತಿಂಬಿಸಲು ಅವು ಸಾಕಾಗದ ಹಿನ್ನೆಲೆಯಲ್ಲಿ, 50 ಕಾಡುಕೋಣಗಳನ್ನು ಮಧ್ಯಪ್ರದೇಶದಿಂದ ಕರೆತರಲು ಯೋಜಿಸಲಾಗಿದೆ.
ವರ್ಷಗಳುರುಳಿದಂತೆ ಅವುಗಳ ಸಂಖ್ಯೆ ಕ್ಷೀಣಿಸುತ್ತಾ ಸಾಗಿದೆ
ಈ ಬಗ್ಗೆ ಪಿಟಿಆರ್‌ನ ನಿರ್ದೇಶಕ ಎಸ್.ಆರ್. ನಟೇಶ್ ಮಾತನಾಡಿದ್ದು, ‘1974ರಲ್ಲಿ ಈ ಪ್ರದೇಶದಲ್ಲಿ 1500 ಕಾಡೆಮ್ಮೆಗಳಿದ್ದವು. ಆದರೆ ವರ್ಷಗಳುರುಳಿದಂತೆ ಅವುಗಳ ಸಂಖ್ಯೆ ಕ್ಷೀಣಿಸುತ್ತಾ ಸಾಗಿದೆ. ಅತ್ತ ಹುಲಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅವುಗಳಿಗೆ ಆಹಾರವಾಗಿ ನೀಡಲು ಕಾಡುಕೋಣ ಮತ್ತು ಜಿಂಕೆಗಳನ್ನು ರಫ್ತು ಮಾಡಲು ಮಧ್ಯಪ್ರದೇಶದ ಅಧಿಕಾರಿಗಳು ಒಪ್ಪಿದ್ದಾರೆ. ಅದರೆ ಕೇಂದ್ರಸರ್ಕಾರದ ಅನುಮತಿಯೂ ಬೇಕಿದ್ದು, ಅದಕ್ಕಾಗಿ ಮನವಿ ಸಲ್ಲಿಸಲಾಗಿದೆ’ ಎಂದರು. ‘ಪಲಾಮುವಲ್ಲಿ ಕಾಡೆಮ್ಮೆಗಳ ಸಂತಾನೋತ್ಪತ್ತಿಯ ಗತಿ ಕ್ಷೀಣಿಸಿದ್ದು, ಹೊಸ ಕೋಣಗಳನ್ನು ತರುವುದರಿಂದ ಅದು ವೇಗ ಪಡೆದುಕೊಳ್ಳುವ ನಿರೀಕ್ಷೆಯಿದೆ’ ಎಂದೂ ತಿಳಿಸಿರುವ ಅವರು, ‘ಒಂದೇ ಪ್ರದೇಶದಲ್ಲಿ ಅಧಿಕ ಪ್ರಾಣಿಗಳು ಬೀಡುಬಿಟ್ಟರೆ ರೋಗಗಳು ಹರಡುವ ಸಾಧ್ಯತೆಯಿದೆ. ಆದ್ದರಿಂದ ಅವು ಸಂರಕ್ಷಿತ ಪ್ರದೇಶದ ತುಂಬೆಲ್ಲಾ ಚದುರುವ ಅವಶ್ಯಕತೆಯಿದೆ’ ಎಂದರು. ಪ್ರಸ್ತುತ ಸಂರಕ್ಷಿತ ಪ್ರದೇಶದಲ್ಲಿ 7 ಹುಲಿಗಳು ಇವೆ ಎನ್ನಲಾಗಿದೆ.
;Resize=(128,128))
;Resize=(128,128))