ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಜಮೀನಿನಲ್ಲಿ ದನ ಮೇಯಿಸುತ್ತಿದ್ದ ವ್ಯಕ್ತಿ ಮೇಲೆ ಹುಲಿ ದಾಳಿ ನಡೆಸಿ ಕೊಂದಿರುವ ಘಟನೆ ಮೈಸೂರು ಜಿಲ್ಲೆ ಸರಗೂರು ತಾಲೂಕು ಮುಳ್ಳೂರು ಸಮೀಪದ ಬೆಣ್ಣೆಗೆರೆ ಗ್ರಾಮದಲ್ಲಿ ಭಾನುವಾರ ನಡೆದಿದೆ.ಬೆಣ್ಣೆಗೆರೆ ಗ್ರಾಮದ ರಾಜಶೇಖರ್ (54) ಎಂಬವರೇ ಹುಲಿ ದಾಳಿಗೆ ಬಲಿಯಾದವರು. ಇವರು ಜಮೀನಿನಲ್ಲಿ ದನ ಮೇಯಿಸುತ್ತಿದ್ದ ವೇಳೆ ಹಿಂಭಾಗದಿಂದ ಬಂದು ಹುಲಿ ದಾಳಿ ನಡೆಸಿ, ಎಳೆದೊಯ್ದಿದಿದೆ. ಅಕ್ಕಪಕ್ಕದ ಜಮೀನಿನಲ್ಲಿದ್ದ ಗ್ರಾಮಸ್ಥರು ಕಿರುಚಾಡಿದ ಹಿನ್ನೆಲೆಯಲ್ಲಿ ಮೃತದೇಹ ಬಿಟ್ಟು ಹುಲಿ ಪರಾರಿಯಾಗಿದೆ.ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮವಾದ ಮುಳ್ಳೂರು ಸಮೀಪದ ಬೆಣ್ಣೆಗೆರೆ ಗ್ರಾಮದ ಬಳಿ ಒಡೆಯನಪುರ, ಕುದುರೆಗುಂಡಿ ಹಳ್ಳದಿಂದ ನುಗು ಹೊಳೆಯವರೆಗೆ ನೂರಾರು ಎಕರೆ ಪ್ರದೇಶದಲ್ಲಿ ದಟ್ಟ ಪೊದೆ ಬೆಳೆದುಕೊಂಡಿದ್ದು, ಆ ಭಾಗದಲ್ಲಿ ವನ್ಯಜೀವಿಗಳು ಆಶ್ರಯ ಪಡೆದಿದ್ದು, ಪದೇ ಪದೇ ಕಾಡಂಚಿನ ಗ್ರಾಮದ ಜನರು ಸಾಕಿರುವ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದೆ.ಅದೇ ರೀತಿ ಭಾನುವಾರ ತಮ್ಮ ಹೊಲದಲ್ಲಿ ಜಾನುವಾರು ಮೇಯಿಸಲು ರಾಜಶೇಖರ್ ತೆರಳಿದ್ದಾಗ ಹಾಡಹಗಲೇ ಪೊದೆಯಲ್ಲಿ ಅಡಗಿದ್ದ ಹುಲಿಯೊಂದು ಏಕಾಏಕಿ ಅವರ ಮೇಲೆ ದಾಳಿ ನಡೆಸಿದೆ. ಪಂಜದಿಂದ ಮುಖದ ಭಾಗಕ್ಕೆ ಬಲವಾಗಿ ಹೊಡೆದ ಹುಲಿ, ತೋಳಿಗೆ ಕಚ್ಚಿದೆ. ಹುಲಿ ದಾಳಿ ಮಾಡಿದ್ದನ್ನು ಕಂಡ ಕೆಲಸದಾಳು ನಾಗ ಎಂಬವರು ಜೋರಾಗಿ ಕೂಗಿದಾಗ, ಹುಲಿ ರಾಜಶೇಖರ್ ಅವರನ್ನು ಬಿಟ್ಟು ನಾಗನ ಮೇಲೆ ದಾಳಿ ಮಾಡಲು ಬಂದಿದೆ. ಆದರೆ, ಸಮೀಪ ಬರುತ್ತಿದ್ದಂತೆ ನಾಗ ಪ್ರಾಣ ರಕ್ಷಿಸಿಕೊಳ್ಳಲು ಓಡಿದ್ದಾನೆ. ಇದರಿಂದ ವಿಚಲಿತಗೊಂಡ ಹುಲಿ ಕಾಡಿನತ್ತ ಹೋಗಿದೆ. 10 ದಿನಗಳಲ್ಲಿ 2ನೇ ದಾಳಿಸರಗೂರು ತಾಲೂಕಿನ ಬಡಗಲಪುರದಲ್ಲಿ ಅ.17 ರಂದು ಹುಲಿಯೊಂದು ದಾಳಿ ನಡೆಸಿ ಮಹದೇವೇಗೌಡ ಎಂಬುವರನ್ನು ಗಂಭೀರವಾಗಿ ಗಾಯಗೊಳಿಸಿತ್ತು. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹದೇವೇಗೌಡ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಇವರ ಮೇಲೆ ದಾಳಿ ನಡೆಸಿದ ಹುಲಿಯನ್ನು ಅರಣ್ಯ ಇಲಾಖೆಯು ಸೆರೆ ಹಿಡಿದಿತ್ತು. ಇದಾದ 10 ದಿನದ ಅಂತರದಲ್ಲಿ ಎರಡನೇ ಹುಲಿ ದಾಳಿ ವರದಿಯಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.ಸರಗೂರು ಪೊಲೀಸರ ರಕ್ಷಣೆಯೊಂದಿಗೆ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಗ್ರಾಮಸ್ಥರ ಮನವೊಲಿಸುವ ಪ್ರಯತ್ನಿಸಿದರು. ಅಷ್ಟರಲ್ಲಾಗಲೇ ಎಚ್.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು ಸ್ಥಳಕ್ಕೆ ಬಂದು ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು.ಈ ವೇಳೆ ಗ್ರಾಮಸ್ಥರು ಕಾಡಂಚಿನ ಭಾಗದಲ್ಲಿ ಸತತವಾಗಿ ವನ್ಯಜೀವಿಗಳ ಹಾವಳಿ ನಡೆಯುತ್ತಲೇ ಇದೆ. ರೈತರು ಸಾಕಿದ ಜಾನುವಾರುಗಳ ಮೇಲೆ ವನ್ಯಜೀವಿ ದಾಳಿ ಮಾಡಿ ಹತ್ಯೆಗೈಯ್ಯುತ್ತಿದೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದ್ದು, ಸರಿಯಾದ ಪ್ರಮಾಣದಲ್ಲಿ ಪರಿಹಾರ ಸಿಗುತ್ತಿಲ್ಲ. ಆ ಕಾರಣದಿಂದ ವನ್ಯಜೀವಿಗಳ ಉಪಟಳಕ್ಕೆ ಶಾಶ್ವತ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.ಮೃತ ರಾಜಶೇಖರ್ ಅವರು ಬಡವರಾಗಿದ್ದು, ಸೂಕ್ತ ಪರಿಹಾರ ನೀಡಬೇಕು. ಅಲ್ಲದೆ, ಅವರ ಇಬ್ಬರು ಮಕ್ಕಳಲ್ಲಿ ಯಾರಿಗಾದರೂ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಕೊಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. 20 ಲಕ್ಷ ಪರಿಹಾರ ಭರವಸೆಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಅನಿಲ್ ಚಿಕ್ಕಮಾದು ಅವರು, ಸರ್ಕಾರದ ವತಿಯಿಂದ 20 ಲಕ್ಷ ರೂ. ಪರಿಹಾರ ಕೊಡಿಸುವುದಾಗಿ ಹಾಗೂ ಮೃತ ರಾಜಶೇಖರ್ ಅವರ ಕುಟುಂಬದ ಒಬ್ಬ ಸದಸ್ಯರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದರು. ಆ ಬಳಿಕವಷ್ಟೇ ಗ್ರಾಮಸ್ಥರು ಮೃತದೇಹ ಮರಣೋತ್ತರ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಟ್ಟರು. ಸ್ಥಳಕ್ಕೆ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಎಸ್. ಪ್ರಭಾಕರ್, ಡಿಸಿಎಫ್ ಪರಮೇಶ್ ಮೊದಲಾದವರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))