ಪಾಕ್‌ನಿಂದ ಭಾರತಕ್ಕೆ ಸಾಗಿಸುತ್ತಿದ್ದ ₹600 ಕೋಟಿ ಮೌಲ್ಯದ ಡ್ರಗ್ಸ್‌ ವಶ

| Published : Apr 29 2024, 01:34 AM IST / Updated: Apr 29 2024, 05:09 AM IST

ಪಾಕ್‌ನಿಂದ ಭಾರತಕ್ಕೆ ಸಾಗಿಸುತ್ತಿದ್ದ ₹600 ಕೋಟಿ ಮೌಲ್ಯದ ಡ್ರಗ್ಸ್‌ ವಶ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆ ನಡುವೆಯೇ, ಪಾಕಿಸ್ತಾನದಿಂದ ಭಾರತಕ್ಕೆ ಸಾಗಿಸಲಾಗುತ್ತಿದ್ದ 600 ಕೋಟಿ ರು. ಮೌಲ್ಯದ 86 ಕೆಜಿಯಷ್ಟು ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳುವಲ್ಲಿ ಭಾರತೀಯ ಕರಾವಳಿ ಕಾವಲು ಪಡೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಪೋರ್‌ಬಂದರ್‌: ಲೋಕಸಭಾ ಚುನಾವಣೆ ನಡುವೆಯೇ, ಪಾಕಿಸ್ತಾನದಿಂದ ಭಾರತಕ್ಕೆ ಸಾಗಿಸಲಾಗುತ್ತಿದ್ದ 600 ಕೋಟಿ ರು. ಮೌಲ್ಯದ 86 ಕೆಜಿಯಷ್ಟು ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳುವಲ್ಲಿ ಭಾರತೀಯ ಕರಾವಳಿ ಕಾವಲು ಪಡೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಶನಿವಾರ ರಾತ್ರಿ ಅರಬ್ಬಿ ಸಮುದ್ರದಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಕರಾವಳಿ ಕಾವಲು ಪಡೆಯ ಐಎನ್‌ಎಸ್‌ ರಾಜರತನ್‌ ಹಡಗಿನ ಸಹಾಯದಿಂದ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ದೋಣಿಯನ್ನು ಸೆರೆ ಹಿಡಿಯಲಾಯಿತು. 

ಖಚಿತ ಮಾಹಿತಿ ಮೇರೆಗೆ ನಡೆದ ಕಾರ್ಯಾಚರಣೆ ವೇಳೆ ಬೋಟ್‌ನಲ್ಲಿ 600 ಕೋಟಿ ರು. ಮೌಲ್ಯದ ಮಾದಕ ವಸ್ತು ಪತ್ತೆಯಾಗಿತು. ಈ ಹಿನ್ನೆಲೆಯಲ್ಲಿ ಬೋಟ್‌ನಲ್ಲಿದ್ದ 14 ಪಾಕಿಸ್ತಾನಿಯರನ್ನು ವಶಕ್ಕೆ ಪಡೆದ ಸಿಬ್ಬಂದಿ, ಬೋಟ್‌, ಮಾದಕ ವಸ್ತು ಮತ್ತು ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ.