ಜಿಎಸ್ಟಿ ಸಂಗ್ರಹ ಏರಿಕೆಯಲ್ಲಿ ಕರ್ನಾಟಕ ದೇಶಕ್ಕೆ ನಂ.1!

| Published : Apr 02 2024, 01:02 AM IST / Updated: Apr 02 2024, 06:24 AM IST

ಜಿಎಸ್ಟಿ ಸಂಗ್ರಹ ಏರಿಕೆಯಲ್ಲಿ ಕರ್ನಾಟಕ ದೇಶಕ್ಕೆ ನಂ.1!
Share this Article
  • FB
  • TW
  • Linkdin
  • Email

ಸಾರಾಂಶ

2024ರ ಮಾರ್ಚ್‌ ತಿಂಗಳಲ್ಲಿ ಕರ್ನಾಟಕದಲ್ಲಿ ಒಟ್ಟಾರೆ 11392 ಕೋಟಿ ಜಿಎಸ್ಟಿ ಸಂಗ್ರಹವಾಗಿದೆ. ಈ ಮೂಲಕ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿ ಮುಂದುವರೆದಿದೆ.

ನವದೆಹಲಿ: 2024ರ ಮಾರ್ಚ್‌ ತಿಂಗಳಲ್ಲಿ ಕರ್ನಾಟಕದಲ್ಲಿ ಒಟ್ಟಾರೆ 11392 ಕೋಟಿ ಜಿಎಸ್ಟಿ ಸಂಗ್ರಹವಾಗಿದೆ. ಈ ಮೂಲಕ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿ ಮುಂದುವರೆದಿದೆ. ಮೊದಲ ಸ್ಥಾನದಲ್ಲಿ ಎಂದಿನಂತೆ ಮಹಾರಾಷ್ಟ್ರ 27688 ಕೋಟಿ ರು.ನೊಂದಿಗೆ ಮೊದಲ ಸ್ಥಾನದಲ್ಲಿದೆ.

ಆದರೆ ಕಳೆದ ಒಂದು ವರ್ಷದಲ್ಲಿ ಗಣನೀಯ ಪ್ರಗತಿ ಸಾಧಿಸಿದ ಪ್ರಮುಖ (ಹೆಚ್ಚಿನ ಆರ್ಥಿಕತೆ) ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನ ಪಡೆದಿದೆ. 2023ರ ಮಾರ್ಚ್‌ನಲ್ಲಿ ಕರ್ನಾಟಕ 10360 ಕೋಟಿ ರು. ಜಿಎಸ್ಟಿ ಸಂಗ್ರಹಿಸಿದ್ದರೆ ಕಳೆದ ತಿಂಗಳು 13014 ಕೋಟಿ ರು. ಸಂಗ್ರಹಿಸಿದೆ. ಅಂದರೆ ಶೇ.26ರಷ್ಟು ಹೆಚ್ಚಳವಾಗಿದೆ. ಇದು ದೇಶದಲ್ಲೇ ಅತ್ಯಧಿಕ ಎಂಬುದು ವಿಶೇಷ