ಸಾರಾಂಶ
ನ.23ರಂದು ಕೆನಡಾದ ಒಂಟಾರಿಯೋ ಪ್ರಾಂತ್ಯದ ಓಕ್‌ವಿಲ್ಲೆಯಲ್ಲಿ ಸ್ಥಳೀಯ ವೈಷ್ಣೋದೇವಿ ದೇಗುಲವು ಭಾರತೀಯ ದೂತಾವಾಸ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಸ್ಥಳೀಯ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ಒಟ್ಟಾವ: ನ.23ರಂದು ಕೆನಡಾದ ಒಂಟಾರಿಯೋ ಪ್ರಾಂತ್ಯದ ಓಕ್‌ವಿಲ್ಲೆಯಲ್ಲಿ ಸ್ಥಳೀಯ ವೈಷ್ಣೋದೇವಿ ದೇಗುಲವು ಭಾರತೀಯ ದೂತಾವಾಸ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಸ್ಥಳೀಯ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ಹಿರಿಯ ಭಾರತೀಯರಿಗೆ ಜೀವಿತ ಪ್ರಮಾಣಪತ್ರ ನೀಡಲು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಭದ್ರತೆಯ ಕಾರಣ ನೀಡಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಆದರೆ ಖಲಿಸ್ತಾನಿ ಉಗ್ರರ ಒತ್ತಡಕ್ಕೆ ಮಣಿದು ಪೊಲೀಸರು ಹೀಗೆ ಮಾಡಿದ್ದಾರೆ ಎಂದು ಸ್ಥಳೀಯ ಹಿಂದೂ ಸಮುದಾಯ ಆರೋಪಿಸಿದೆ.ಜೊತೆಗೆ ಪೊಲೀಸರ ಇಂಥ ವರ್ತನೆಯು ಸಮುದಾಯದ ಒಳಿತಿನ ಕಾರ್ಯಕ್ರಮಕ್ಕೆ ಭದ್ರತೆ ನೀಡಲಾಗದ ಅವರ ಅಸಮರ್ಥತೆಯನ್ನು ತೋರಿಸುತ್ತದೆ. ಹೀಗಾಗಿ ಸ್ಥಳೀಯ ಹಿಂದೂ, ಸಿಖ್, ಮುಸ್ಲಿಂ ಮತ್ತು ಇತರೆ ಸಮುದಾಯದ ಜನರಿಗೆ ನೆರವಾಗುವ ಕಾರ್ಯಕ್ರಮಗಳಿಗೆ ಅಡ್ಡಿ ತಪ್ಪಿಸಲು ಹಾಲ್ಟನ್ ಪ್ರಾಂತೀಯ ಪೊಲೀಸ್ ಸೇವೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವೈಷ್ಣೋದೇವಿ ದೇಗುಲದ ಆಡಳಿತ ಮಂಡಳಿ ಆಗ್ರಹ ಮಾಡಿದೆ.
ಕಳೆದ 2 ವಾರದ ಅವಧಿಯಲ್ಲೂ ದೇಶದ ವಿವಿಧ ಭಾಗಗಳಲ್ಲಿ ಪೊಲೀಸರು ಹಿಂದೂ ದೇಗುಲ ಮಂಡಳಿ ಆಯೋಜಿಸಿದ್ದ ಇದೇ ರೀತಿಯ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದರು. ಜೊತೆಗೆ ಭದ್ರತೆ ನೀಡಲು ಹಣ ಕೇಳಿದ್ದರು.