ನಾರ್ಥಾಂಪ್ಟನ್: ಇಂಗ್ಲೆಂಡ್ ಲಯನ್ಸ್ ವಿರುದ್ಧದ 2ನೇ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ‘ಎ’ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಶತಕ ಬಾರಿಸಿದ್ದ ಕೆ.ಎಲ್.ರಾಹುಲ್, 2ನೇ ಇನ್ನಿಂಗ್ಸ್‌ನಲ್ಲೂ ಉತ್ತಮ ಬ್ಯಾಟಿಂಗ್ ನಡೆಸಿದ್ದು, ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಗೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ. 2ನೇ ದಿನದಾಟದಂತ್ಯಕ್ಕೆ 3 ವಿಕೆಟ್‌ಗೆ 192 ರನ್ ಗಳಿಸಿದ್ದ ಇಂಗ್ಲೆಂಡ್ ಲಯನ್ಸ್, 3ನೇ ದಿನವಾದ ಭಾನುವಾರ ದಿಢೀರ್ ಕುಸಿತ ಕಂಡಿತು. 29 ರನ್ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡಿದ್ದ ಲಯನ್ಸ್, ಕೊನೆ 2 ವಿಕೆಟ್‌ಗೆ 84 ರನ್ ಸೇರಿಸಿ 327 ರನ್‌ಗೆ ಆಲೌಟ್ ಆಯಿತು. ಖಲೀಲ್ ಅಹ್ಮದ್ 4 ವಿಕೆಟ್ ಕಿತ್ತರು. 2ನೇ ಇನ್ನಿಂಗ್ಸಲ್ಲಿ ಭಾರತ ‘ಎ’ 20 ಓವರಲ್ಲಿ 1 ವಿಕೆಟ್‌ಗೆ 90 ರನ್ ಗಳಿಸಿತ್ತು. ರಾಹುಲ್ ಔಟಾಗದೆ 42 ರನ್ ಗಳಿಸಿದ್ದರು.
ಇಂಡಿಯಾ ‘ಎ’ ಟೆಸ್ಟ್: 2ನೇಇನ್ನಿಂಗ್ಸಲ್ಲೂ ರಾಹುಲ್ ಮಿಂಚು
ಇಂಗ್ಲೆಂಡ್ ಲಯನ್ಸ್ ವಿರುದ್ಧದ 2ನೇ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ‘ಎ’ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಶತಕ ಬಾರಿಸಿದ್ದ ಕೆ.ಎಲ್.ರಾಹುಲ್, 2ನೇ ಇನ್ನಿಂಗ್ಸ್‌ನಲ್ಲೂ ಉತ್ತಮ ಬ್ಯಾಟಿಂಗ್ ನಡೆಸಿದ್ದು, ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಗೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ.
Latest Videos
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.