ಸಾರಾಂಶ
ನವದೆಹಲಿ : ಷ್ಟಾಚಾರದ ಪ್ರಕರಣದಲ್ಲಿ ವಿಪಕ್ಷಗಳ ಹಲವು ನಾಯಕರ ವಿರುದ್ಧ ಕೇಂದ್ರದ ತನಿಖಾ ಸಂಸ್ಥೆಗಳು ದಾಳಿ ತೀವ್ರಗೊಳಿಸಿರುವ ನಡುವೆಯೇ ಇಂಡಿಯಾ ಮೈತ್ರಿಕೂಟ ಭಾನುವಾರ ನವದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿತು. ಮೈತ್ರಿಕೂಟದ ಬಹುತೇಕ ನಾಯಕರು ಭಾಗಿಯಾಗಿದ್ದ ಸಭೆಯಲ್ಲಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಪಕ್ಷ ನಾಯಕರು ತೀವ್ರ ವಾಗ್ದಾಳಿ ನಡೆಸಿದರು.ಸಭೆ ಕೈಗೊಂಡ 5 ನಿರ್ಣಯಗಳು
ಚುನಾವಣೆಗೂ ಮುನ್ನ ವಿಪಕ್ಷಗಳನ್ನು ಬೇಕೆಂದೇ ದಮನ ಮಾಡಲಾಗುತ್ತಿದೆ. ಆಯೋಗ ಇದನ್ನು ತಡೆಯಬೇಕು.ಸಿಬಿಐ, ಐಟಿ ದುರ್ಬಳಕೆಗೆ ಚುನಾವಣಾ ಆಯೋಗ ಕಡಿವಾಣ ಹಾಕಬೇಕು. ಹೇಮಂತ್ ಸೊರೇನ್, ಕೇಜ್ರಿವಾಲ್‌ರನ್ನು ಕೂಡಲೇ ಜೈಲಿಂದ ಬಿಡುಗಡೆ ಮಾಡಬೇಕು. ಲೋಕಸಭೆ ಚುನಾವಣೆಯಲ್ಲಿ ಸಮನಾದ ಸ್ಪರ್ಧೆ ನಡೆಸಲು ಆಯೋಗ ಅವಕಾಶ ಮಾಡಿಕೊಡಬೇಕು.ಚುನಾವಣಾ ಬಾಂಡ್ ಮೂಲಕ ಬಿಜೆಪಿ ಭ್ರಷ್ಟಾಚಾರ ನಡೆಸಿದೆ. ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ಆಗಬೇಕು.ಬಿಜೆಪಿಯಿಂದ ಸಂವಿಧಾನ ನಾಶ
ನಾನು ಇಂದು ದೇಶದ ಜನಸಂಖ್ಯೆಯ ಶೇ.50ರಷ್ಟಿರುವ ಮಹಿಳೆಯರು ಹಾಗೂ ಶೇ.9ರಷ್ಟಿರುವ ಆದಿವಾಸಿಗಳ ದನಿಯಾಗಿ ಈ ಸಭೆಗೆ ಬಂದಿದ್ದೇನೆ. ಪ್ರಜಾಪ್ರಭುತ್ವದ ಮೇಲೆ ನಿರಂಕುಶಾಧಿಕಾರದ ಶಕ್ತಿಗಳು ದಾಳಿಗೆ ಯತ್ನಿಸುತ್ತಿರುವ ರೀತಿ, ಅದರ ವಿರುದ್ಧ ಈ ಸಭೆ ಸೇರಿದೆ ಎಂಬುದಕ್ಕೆ ಜನಸಂದಣಿಯೇ ಸಾಕ್ಷಿ, ಅಂಬೇಡ್ಕರ್‌ರ ಸಂವಿಧಾನದ ಎಲ್ಲಾ ಆಶಯವನ್ನು ಬಿಜೆಪಿ ನಾಶಪಡಿಸುತ್ತಿದೆ. ಒಂದೊಂದಾಗಿ ಸಾಂವಿಧಾನಿಕ ಸಂಸ್ಥೆಗಳನ್ನು ಕೆಡವಿದ್ದಾರೆ. ಹೀಗಾಗಿ ಜನರು ತಮ್ಮ ಮತಗಳನ್ನು ಬುದ್ಧಿವಂತಿಕೆಯಿಂದ ಹಾಕಬೇಕು.
- ಕಲ್ಪನಾ ಸೊರೇನ್, ಬಂಧಿತ ಹೇಮಂತ ಸೊರೇನ್ ಪತ್ನಿಸಿಂಹವನ್ನು ಹೆಚ್ಚು ಬಂಧಿಸಿ ಇಡಲಾಗದು
ದಬ್ಬಾಳಿಕೆ ಕೆಲಸ ಮಾಡುವುದಿಲ್ಲ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಹೆಚ್ಚು ಕಾಲ ಕಂಬಿ ಹಿಂದೆ ಇಡಲು ಸಾಧ್ಯವಿಲ್ಲ. ಬಿಜೆಪಿಯು ಮುಖ್ಯಮಂತ್ರಿ ಕೇಜ್ರಿವಾಲ್ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದೆ. ಅವರು ರಾಜೀನಾಮೆ ನೀಡಬೇಕೇ? ಅವರ ಬಂಧನ ಸಮರ್ಥನೀಯವೇ? ಅವರು ‘ಶೇರ್''''’(ಸಿಂಹ). ಅವರನ್ನು ಹೆಚ್ಚು ಕಾಲ ಕಂಬಿಯ ಹಿಂದೆ ಇಡಲು ಸಾಧ್ಯವಿಲ್ಲ.
- ಸುನಿತಾ ಕೇಜ್ರಿವಾಲ್, ಕೇಜ್ರಿವಾಲ್ ಪತ್ನಿಬಿಜೆಪಿ, ಆರೆಸ್ಸೆಸ್ ವಿಷ ಇದ್ದಂತೆ
ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿಷದಂತಿವೆ. ಅದರ ರುಚಿ ನೋಡಬೇಡಿ. ಹೀಗಾಗಿ ಬಿಜೆಪಿ ಸೋಲಿಸಲು ಎಲ್ಲ ವಿರೋಧ ಪಕ್ಷಗಳು ಒಂದಾಗಬೇಕು. ಇದು ಪ್ರಜಾಪ್ರಭುತ್ವ, ದೇಶ ಮತ್ತು ಸಂವಿಧಾನವನ್ನು ಉಳಿಸುವ ಚುನಾವಣೆ. ಇಬ್ಬರು ಸಿಎಂಗಳ ಬಂಧನದಿಂದ ಪ್ರಜಾಪ್ರಭುತ್ವಕ್ಕೆ ಇರುವ ಬೆದರಿಕೆ ಸಾಬೀತಾಗಿದೆ. ನಾವು ಒಗ್ಗಟ್ಟಾದರೆ ಮಾತ್ರ ಬಿಜೆಪಿ ವಿರುದ್ಧ ಹೋರಾಡಲು ಸಾಧ್ಯ, ಪರಸ್ಪರ ಹೊಡೆದಾಡಿಕೊಂಡು ಹೊಡೆದಾಡಿಕೊಂಡರೆ ಯಶಸ್ವಿಯಾಗಲ್ಲ.
- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
ಕೇಜ್ರಿ, ಸೊರೇನ್ ಬಿಡುಗಡೆ ಮಾಡಿ
ಚುನಾವಣೆಗೂ ಮುನ್ನ ವಿಪಕ್ಷಗಳನ್ನು ಬೇಕೆಂದೇ ದಮನ ಮಾಡಲು ಯತ್ನಿಸಲಾಗುತ್ತಿದೆ. ಚುನಾವಣಾ ಆಯೋಗ ಇದನ್ನು ತಡೆಯಬೇಕು. ಸಿಬಿಐ, ಐಟಿ ದುರ್ಬಳಕೆಗೆ ಆಯೋಗ ಕಡಿವಾಣ ಹಾಕಬೇಕು. ಹೇಮಂತ್ ಸೊರೇನ್, ಕೇಜ್ರಿವಾಲ್‌ರನ್ನು ಕೂಡಲೇ ಜೈಲಿಂದ ಬಿಡುಗಡೆ ಮಾಡಬೇಕು. ಚುನಾವಣಾ ಬಾಂಡ್ ಮೂಲಕ ಬಿಜೆಪಿ ಭಾರಿ ಭ್ರಷ್ಟಾಚಾರ ನಡೆಸಿದೆ. ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ಆಗಬೇಕು. ಬಿಜೆಪಿ ಓಟಕ್ಕೆ ಕಡಿವಾಣ ಹಾಕಲು ಇಂಡಿಯಾ ಕೂಟ ಸಿದ್ಧ.
- ಪ್ರಿಯಾಂಕಾ ವಾದ್ರಾ, ಕಾಂಗ್ರೆಸ್ ನಾಯಕಿ ಮೋದಿ ಮ್ಯಾಚ್ ಫಿಕ್ಸಿಂಗ್
ಅಂಪೈರ್‌ಗಳು ಮತ್ತು ನಾಯಕನ ಮೇಲೆ ಒತ್ತಡ ಹೇರಿ ಆಟಗಾರರನ್ನು ಖರೀದಿಸಿ ಪಂದ್ಯ ಗೆದ್ದರೆ ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಎನ್ನುತ್ತಾರೆ. ನಮ್ಮ ಮುಂದೆ ಲೋಕಸಭೆ ಚುನಾವಣೆ ಇದೆ. ಅಂಪೈರ್‌ಗಳನ್ನು ಬಳಸಿ (ಇ.ಡಿ., ಸಿಬಿಐ) ಪಂದ್ಯ ಆರಂಭವಾಗುವ ಮುನ್ನ ಇಬ್ಬರು ಆಟಗಾರರನ್ನು (ಕೇಜ್ರಿವಾಲ್, ಸೊರೇನ್) ಬಂಧಿಸಲಾಗಿದೆ. ನರೇಂದ್ರ ಮೋದಿ ಈ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಿ ಜನರ ಹಕ್ಕು ಕಸಿಯಲಾಗುತ್ತದೆ.
- ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡಮೋದಿ ಭರವಸೆ ಚೀನಾ ಸರಕು ಇದ್ದಂತೆ
ನರೇಂದ್ರ ಮೋದಿ ಅವರ ಭರವಸೆಗಳು ಚೀನಾದ ಸರಕುಗಳಂತಿದೆ ಮತ್ತು ಚುನಾವಣೆಗಾಗಿ ಮಾತ್ರ. ಹೆಚ್ಚು ಕಾಲ ಬಾಳಿಕೆ ಬರಲ್ಲ. ಕಳೆದ ಚುನಾವಣೆಯಲ್ಲೇ ನೀಡಿದ ಭರವಸೆಗಳನ್ನು ಮೋದಿ ಈಡೇರಿಸಿಲ್ಲ. ಹೀಗಾಗಿ ಜನರು ಬಿಜೆಪಿ ಹಾಕಿರುವ ಖೆಡ್ಡಾಗೆ ಬೀಳಬಾರದರು. ದೇಶದಲ್ಲಿ "ಅಘೋಷಿತ ತುರ್ತು ಪರಿಸ್ಥಿತಿ " ಚಾಲ್ತಿಯಲ್ಲಿದೆ. ಆದರೆ ದೇಶದಲ್ಲಿ ಆರ್‌ಎಸ್‌ಎಸ್ ಕಾರ್ಯಸೂಚಿಯನ್ನು ಜಾರಿಗೆ ತರಲು ಪ್ರತಿಪಕ್ಷಗಳು ಬಿಡುವುದಿಲ್ಲ.
- ತೇಜಸ್ವಿ ಯಾದವ್, ಆರ್‌ಜೆಡಿ ಮುಖಂಡ
ದೇಶ ನಿರಂಕುಶ ಪ್ರಜಾಪ್ರಭುತ್ವದತ್ತ
ಬಿಜೆಪಿ ಎಂದರೆ ಭ್ರಷ್ಟ ಜನತಾ ಪಕ್ಷ. ಅದರ ನೈಜ ಮುಖವು ಈಗ ಚುನಾವಣಾ ಬಾಂಡ್‌ಗಳ ಮೂಲಕ ಬಯಲಾಗಿದೆ. ಪರಿವಾರವೇ ಗೊತ್ತಿಲ್ಲದ ಮೋದಿ ಅವರು ಈಗ ಮೋದಿ ಕಾ ಪರಿವಾರ್ ಅಭಿಯಾನ ಆರಂಭಿಸಿದ್ದು ಹಾಸ್ಯಾಸ್ಪದ. ನಾವು ಇಂದು ದಿಲ್ಲಿಗೆ ಪ್ರಚಾರಕ್ಕಾಗಿ ಅಲ್ಲ, ಪ್ರಜಾಪ್ರಭುತ್ವ ಉಳಿಸಲು ಬಂದಿದ್ದೇವೆ. ವಿಪಕ್ಷ ನಾಯಕರನ್ನು ಸುಖಾಸುಮ್ಮನೇ ಜೈಲಿಗೆ ಕಳಿಸಲಾಗುತ್ತಿದೆ ದೇಶ ನಿರಂಕುಶ ಪ್ರಜಾಪ್ರಭುತ್ವದತ್ತ ಸಾಗುತ್ತಿದೆ. ಇದನ್ನು ತಡೆಯಲು ಬಿಜೆಪಿಯನ್ನು ಕಿತ್ತೊಗೆಯಬೇಕು,
- ಉದ್ಧವ ಠಾಕ್ರೆ, ಶಿವಸೇನೆ ನಾಯಕ
ಬಿಜೆಪಿಗೆ ಇಂದು ವಿಶ್ವವೇ ಬೈತಿದೆ
ಕೇಜ್ರಿವಾಲ್ ಅವರ ಬಂಧನದ ಕಾರಣ ಇಂದು ವಿಶ್ವಾದ್ಯಂತ ಬಿಜೆಪಿ ಟೀಕೆಗೆ ಗುರಿಯಾಗಿದೆ. ಬಿಜೆಪಿಗೂ ಅಧಿಕಾರ ಕೈತಪ್ಪುವ ಆತಂಕ ಎದುರಾಗಿದೆ. ಹೀಗಾಗಿ ಸಿಬಿಐ, ಐಟಿ, ಇ.ಡಿ.ಗಳನ್ನು ಬಳಸಿ ಬೆದರಿಸಿ ಬಿಜೆಪಿಗಾಗಿ ದುಡ್ಡು ಪೀಕುವ ಹೊಸ ಐಡಿಯಾವನ್ನು ಬಿಜೆಪಿ ಹುಟ್ಟುಹಾಕಿದೆ. ಆದರೆ ನಾವು ಇದನ್ನು ಖಂಡಿಸಿ ಬೆದರಿಸಲು ಇಂದು ದಿಲ್ಲಿಗೆ ಬಂದಿದ್ದೇವೆ. ಅದರೆ ಇಂದು ಮೋದಿ ದಿಲ್ಲಿಯಲ್ಲಿರದೇ ಬೇರೆ ಊರಿಗೆ ಹೋಗಿದ್ದಾರೆ. ಇದು ಯಾರು ಅಧಿಕಾರದಿಂದ ಹೊರಹೋಗುತ್ತಿದ್ದಾರೆ ಎಂಬುದರ ಸೂಚಕ.
- ಅಖಿಲೇಶ್ ಯಾದವ್, ಸಮಾಜವಾದಿ ಪಾರ್ಟಿ ಮುಖ್ಯಸ್ಥ