ಅಕ್ರಮ ವಲಸಿಗರ ನ್ಯಾಯಯುತ ಗಡಿಪಾರಿಗೆ ತಕರಾರಿಲ್ಲ : ವಿದೇಶಾಂಗ ಸಚಿವ ಎಸ್‌. ಜೈಶಂಕರ್‌

| Published : Jan 24 2025, 12:45 AM IST / Updated: Jan 24 2025, 04:46 AM IST

S Jaishankar

ಸಾರಾಂಶ

‘ವಿದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ನ್ಯಾಯಸಮ್ಮತವಾಗಿ ಗಡಿಪಾರು ಮಾಡುವ ಬಗ್ಗೆ ನಮಗೆ ತಕರಾರಿಲ್ಲ. ಅವರನ್ನು ದೇಶಕ್ಕೆ ಬರಮಾಡಿಕೊಳ್ಳಲು ಭಾರತ ಸದಾ ಸಿದ್ಧವಿದೆ’ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ.

ವಾಷಿಂಗ್ಟನ್‌: ‘ವಿದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ನ್ಯಾಯಸಮ್ಮತವಾಗಿ ಗಡಿಪಾರು ಮಾಡುವ ಬಗ್ಗೆ ನಮಗೆ ತಕರಾರಿಲ್ಲ. ಅವರನ್ನು ದೇಶಕ್ಕೆ ಬರಮಾಡಿಕೊಳ್ಳಲು ಭಾರತ ಸದಾ ಸಿದ್ಧವಿದೆ’ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ.

‘ಅಕ್ರಮ ವಲಸಿಗರನ್ನು ಅಮೆರಿಕದಿಂದ ಹೊರಹಾಕುವ ಭಾಗವಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ ಸುಮಾರು 1.8 ಲಕ್ಷ ದಾಖಲೆರಹಿತ ಅಥವಾ ವೀಸಾ ಅವಧಿ ಮೀರಿ ವಾಸವಿರುವ ಭಾರತೀಯರನ್ನು ಗಡಿಪಾರು ಮಾಡಲಿದೆ’ ಎಂಬ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಭಾರತದ ಪ್ರತಿಭೆಗಳಿಗೆ ಜಾಗತಿಕ ಮಟ್ಟದಲ್ಲಿ ಒಳ್ಳೆಯ ಅವಕಾಶಗಳು ಸಿಗಬೇಕೆಂಬ ಉದ್ದೇಶದಿಂದ ಸರ್ಕಾರ ನ್ಯಾಯಯುತ ವಲಸೆಯನ್ನು ಬೆಂಬಲಿಸುತ್ತದೆ. ಆದರೆ, ಅಕ್ರಮ ವಲಸೆಯನ್ನು ಬಲವಾಗಿ ಖಂಡಿಸುತ್ತೇವೆ. ಕಾರಣ, ವಿದೇಶಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳು ನಮ್ಮ ಪ್ರತಿಷ್ಠೆಗೆ ಧಕ್ಕೆ ತರುತ್ತವೆ. ಆದ್ದರಿಂದ ಅಂಥವರು ಅಮೆರಿಕ ಸೇರಿದಂತೆ ಯಾವ ದೇಶದಲ್ಲಿದ್ದರೂ ಮರಳಿ ಭಾರತಕ್ಕೆ ಕರೆದುಕೊಳ್ಳಲು ಸಿದ್ಧ’ ಎಂದರು.