ವರ್ಷಕ್ಕೆ ಒಬ್ಬರು ಪ್ರಧಾನಿ ಬೇಕಾ?: ಇಂಡಿಯಾ ಕೂಟಕ್ಕೆ ಮೋದಿ ಟಾಂಗ್‌

| Published : Apr 25 2024, 01:02 AM IST / Updated: Apr 25 2024, 05:29 AM IST

ವರ್ಷಕ್ಕೆ ಒಬ್ಬರು ಪ್ರಧಾನಿ ಬೇಕಾ?: ಇಂಡಿಯಾ ಕೂಟಕ್ಕೆ ಮೋದಿ ಟಾಂಗ್‌
Share this Article
  • FB
  • TW
  • Linkdin
  • Email

ಸಾರಾಂಶ

ಇಂಡಿಯಾ ಒಕ್ಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಘೋಷಣೆ ಆಗದ್ದನ್ನು ಹಾಗೂ ನಾಯಕರ ನಡುವೆ ಕಚ್ಚಾಟ ಇರುವುದನ್ನು ಪ್ರಶ್ನಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ವರ್ಷಕ್ಕೆ ಒಬ್ಬರು ಪ್ರಧಾನಿ ಬೇಕಾ?’ ಎಂದು ಪ್ರಶ್ನಿಸಿದ್ದಾರೆ.

ಹರ್ದಾ (ಮಧ್ಯಪ್ರದೇಶ): ಇಂಡಿಯಾ ಒಕ್ಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಘೋಷಣೆ ಆಗದ್ದನ್ನು ಹಾಗೂ ನಾಯಕರ ನಡುವೆ ಕಚ್ಚಾಟ ಇರುವುದನ್ನು ಪ್ರಶ್ನಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ವರ್ಷಕ್ಕೆ ಒಬ್ಬರು ಪ್ರಧಾನಿ ಬೇಕಾ?’ ಎಂದು ಪ್ರಶ್ನಿಸಿದ್ದಾರೆ.

ಮಧ್ಯಪ್ರದೇಶದ ಹರ್ದಾದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ, ‘ಇಂಡಿಯಾ ಮಹಾಮೈತ್ರಿ ಕೂಟ ತಮ್ಮ ನಾಯಕತ್ವ ಸಮಸ್ಯೆ ಪರಿಹರಿಸಲು ಒಂದು ವರ್ಷ, ಒಬ್ಬ ಪ್ರಧಾನಿ ಎನ್ನುವ ಸೂತ್ರ ಬಳಸುವುದಕ್ಕೆ ಮುಂದಾಗಿದೆ. ಅಂದರೆ 5 ವರ್ಷಕ್ಕೆ ಐವರು ಪ್ರಧಾನಿ. ಅವರು ಪ್ರಧಾನಿ ಹುದ್ದೆಯ ಹರಾಜಿನಲ್ಲಿ ನಿರತರಾಗಿದ್ದಾರೆ. ಇದು ವಿಪಕ್ಷಗಳ ಅತ್ಯಂತ ಅಪಾಯಕಾರಿ ಆಟ. ನೀವು ಐದು ವರ್ಷಕ್ಕೆ ಐವರು ಪ್ರಧಾನಿಗಳನ್ನು ನೋಡಲು ಸಿದ್ಧರಿದ್ದೀರಾ..?’ ಎಂದು ಪ್ರಶ್ನಿಸಿದರು.