1 ವಾರದ ಬಿಕ್ಕಟ್ಟು ಅಂತ್ಯ: ಸಂಸತ್ ಕಲಾಪ ಸುಸೂತ್ರ ಆರಂಭ

| Published : Dec 04 2024, 12:32 AM IST

1 ವಾರದ ಬಿಕ್ಕಟ್ಟು ಅಂತ್ಯ: ಸಂಸತ್ ಕಲಾಪ ಸುಸೂತ್ರ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಅದಾನಿ ಸೌರ ವಿದ್ಯುತ್‌ ಹಗರಣ, ಸಂಭಲ್‌ ಗಲಭೆ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ 1 ವಾರದಿಂದ ನಡೆಯದೇ ಪದೇ ಪದೇ ಮುಂದೂಡಿಕೆ ಆಗುತ್ತಿದ್ದ ಸಂಸತ್‌ ಕಲಾಪ, ಮಂಗಳವಾರ ಹಳಿಗೆ ಬಂದಿದೆ.

ಪಿಟಿಐ ನವದೆಹಲಿ

ಅದಾನಿ ಸೌರ ವಿದ್ಯುತ್‌ ಹಗರಣ, ಸಂಭಲ್‌ ಗಲಭೆ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ 1 ವಾರದಿಂದ ನಡೆಯದೇ ಪದೇ ಪದೇ ಮುಂದೂಡಿಕೆ ಆಗುತ್ತಿದ್ದ ಸಂಸತ್‌ ಕಲಾಪ, ಮಂಗಳವಾರ ಹಳಿಗೆ ಬಂದಿದೆ. ಆಡಳಿತ ಹಾಗೂ ವಿಪಕ್ಷಗಳ ನಡುವೆ ಸಂಧಾನ ಏರ್ಪಟ್ಟ ಕಾರಣ ಚಳಿಗಾಲ ಅಧಿವೇಶನದಲ್ಲಿ ಇದೇ ಮೊದಲ ಬಾರಿಗೆ ಸುಸೂತ್ರ ಕಲಾಪ ಆರಂಭವಾಯಿತು.

ಬೆಳಗ್ಗೆ ಸದನ ಸಮಾವೇಶಗೊಂಡ ನಂತರ ಸಂಭಲ್‌ ವಿಷಯದ ಬಗ್ಗೆ ಪ್ರಸ್ತಾಪಕ್ಕೆ ಸಮಾಜವಾದಿ ಪಕ್ಷಕ್ಕೆ ಅವಕಾಶ ನೀಡಲಾಯಿತು. ಆಗ ಲೋಕಸಭೆಯಲ್ಲಿ ಅಖಿಲೇಶ್‌ ಯಾದವ್‌ ಹಾಗೂ ರಾಜ್ಯಸಭೆಯಲ್ಲಿ ರಾಮಗೋಪಾಲ ಯಾದವ್‌ ಮಾತನಾಡಿದರು. ನಂತರ ಚೀನಾ-ಭಾರತ ಸಂಬಂಧ ಕುರಿತಂತೆ ಲೋಕಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾತನಾಡಿದರು.

ಇನ್ನು ಅದಾನಿ ಹಗರಣದ ಬಗ್ಗೆ ಪ್ರತ್ಯೇಕ ಚರ್ಚೆ ಬದಲು ಶೂನ್ಯವೇಳೆಯಲ್ಲಿ ಪ್ರಸ್ತಾಪಕ್ಕೆ ಸಮ್ಮತಿಸಲಾಗಿದೆ ಎಂದು ಗೊತ್ತಾಗಿದೆ. ಹೀಗಾಗಿ ಈ ವಿಷಯ ಚರ್ಚೆಗೆ ಬಂದಾಗ ಸದನ ಕಾವೇರುವ ಸಂಭವವಿದೆ.