ಸಾರಾಂಶ
ವಿಪಕ್ಷಗಳ ಒಕ್ಕೂಟವಾಗಿರುವ ಇಂಡಿಯಾ ಕೂಟದಲ್ಲಿ ಬಿರುಕುಗಳು ಮೂಡಿರುವುದು ಸ್ಪಷ್ಟವಾಗಿರುವ ನಡುವೆಯೇ, ‘ಕೂಟದ ಎಲ್ಲಾ ಪಕ್ಷಗಳು ಪರಸ್ಪರ ಕಚ್ಚಾಡುವ ಬದಲು ಒಟ್ಟಾಗಿ ಬಿಜೆಪಿಗೆ ಸವಾಲೊಡ್ಡಬೇಕು’ ಎಂದು ಉದ್ಧವ್ ಬಣದ ಶಿವಸೇನೆಯ ನಾಯಕಿ ಪ್ರಿಯಾಂಕಾ ಚತುರ್ವೇದಿ ಆಗ್ರಹಿಸಿದ್ದಾರೆ.
ನವದೆಹಲಿ: ವಿಪಕ್ಷಗಳ ಒಕ್ಕೂಟವಾಗಿರುವ ಇಂಡಿಯಾ ಕೂಟದಲ್ಲಿ ಬಿರುಕುಗಳು ಮೂಡಿರುವುದು ಸ್ಪಷ್ಟವಾಗಿರುವ ನಡುವೆಯೇ, ‘ಕೂಟದ ಎಲ್ಲಾ ಪಕ್ಷಗಳು ಪರಸ್ಪರ ಕಚ್ಚಾಡುವ ಬದಲು ಒಟ್ಟಾಗಿ ಬಿಜೆಪಿಗೆ ಸವಾಲೊಡ್ಡಬೇಕು’ ಎಂದು ಉದ್ಧವ್ ಬಣದ ಶಿವಸೇನೆಯ ನಾಯಕಿ ಪ್ರಿಯಾಂಕಾ ಚತುರ್ವೇದಿ ಆಗ್ರಹಿಸಿದ್ದಾರೆ.
ಸಂಸತ್ತಿನ ಆವರಣದಲ್ಲಿ ಮಾತನಾಡಿದ ಅವರು, ‘ಪಕ್ಷಗಳು ತಮ್ಮ ವೈಯಕ್ತಿಕ ರಾಜಕೀಯ ಮಹತ್ವಾಕಾಂಕ್ಷೆಗಳು ಭಾರತದ ಹಿತಾಸಕ್ತಿಯನ್ನು ಹಿಮ್ಮೆಟ್ಟುತ್ತಿರುವುದನ್ನು ಅರಿಯಬೇಕು.
ಇಂಡಿಯಾ ಕೂಟವು ತನ್ನ ಯೋಚನೆ ಹಾಗೂ ಚಟುವಟಿಕೆಗಳನ್ನು ಒಗ್ಗೂಡಿಸಿಕೊಳ್ಳಬೇಕು. ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಿಸುವ ಅವಶ್ಯಕತೆಯಿದ್ದು, ಅದಕ್ಕಾಗಿಯೇ ಇಂಡಿಯಾ ಕೂಟ ರಚನೆಯಾಗಿದೆ. ಇದನ್ನು ಮರೆತು ತಮ್ಮತಮ್ಮಲ್ಲೇ ಕಚ್ಚಾಡಿಕೊಂಡಿದ್ದರೆ ಎಲ್ಲರೂ ಸೋಲುತ್ತೇವೆ’ ಎಂದರು. ಜೊತೆಗೆ, ‘ಎಲ್ಲರೂ ಪ್ರಾಮಾಣಿಕವಾಗಿ ಚರ್ಚಿಸಿ, ಬಿಜೆಪಿ ವಿರುದ್ಧ ಹುರುಪಿನಿಂದ ಹೋರಾಡೋಣ’ ಎಂದು ಕರೆ ನೀಡಿದರು.