ಸಾರಾಂಶ
- ರಾಜ್ಯ ರೈತ ಕಲ್ಯಾಣ ಸಂಘದ ಅಧ್ಯಕ್ಷ ಸಿ. ಚಂದನ್ ಗೌಡ ಅಭಿಮತ----------
ಕನ್ನಡಪ್ರಭ ವಾರ್ತೆ ಹುಣಸೂರುರಾಸಾಯನಿಕ ಪದಾರ್ಥಗಳ ಬಳಕೆ ನಿಷೇಧಿಸುವ ಸ್ವಾತಂತ್ರ ಬೇಕಾಗಿದೆ. ಅಲ್ಲದೇ ಭಾರತ ವಿಶ್ವಗುರು ಆಗಲಿಕ್ಕೆ ನಮ್ಮ ಹೆಮ್ಮೆಯ ರೈತರಿಂದ ಮಾತ್ರ ಸಾಧ್ಯ ಎಂದು ರಾಜ್ಯ ರೈತ ಕಲ್ಯಾಣ ಸಂಘದ ಅಧ್ಯಕ್ಷ ಸಿ. ಚಂದನ್ ಗೌಡ ಹೇಳಿದರು.
ತಾಲೂಕಿನ ಹನಗೋಡು ಹೋಬಳಿಯ ಹಬ್ಬನಕುಪ್ಪೆ ಗ್ರಾಮದಲ್ಲಿ ನಡೆದ ರೈತ ಕಲ್ಯಾಣ ಸಂಘ ಉದ್ಘಾಟನೆ ಹಾಗೂ ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರಾಸಾಯನಿಕ ಜಗತ್ತು ಮನುಕುಲಕ್ಕೆ ಆಪತ್ತು. ಆದ್ದರಿಂದ ರಾಸಾಯನಿಕ ಕೃಷಿ ತ್ಯಜಿಸಿ, ಸಾಂಪ್ರದಾಯಿಕ ಕೃಷಿಗೆ ಹೆಚ್ಚಿನ ಒತ್ತುಕೊಟ್ಟು, ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯುವಂಥ ನಿಟ್ಟಿನಲ್ಲಿ ರೈತರಿಗೆ ಬೆನ್ನೆಲುಬಾಗಿ ರೈತ ಕಲ್ಯಾಣ ನಿಂತಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.
ನಮ್ಮ ರೈತರು ಕೇವಲ ಜೈ ಕಿಸಾನ್ ಆಗದೇ, ರಾಸಾಯನಿಕ ಮುಕ್ತ ಕೃಷಿಯಲ್ಲಿ ಸಾಧನೆ ಮಾಡುವ ಮೂಲಕ ಜೈ ಜವಾನ್ ಆಗಬೇಕಾಗಿದೆ. ಮತ್ತೊಮ್ಮೆ ಭಾರತ ದೇಶದ 147 ಕೋಟಿ ಜನರಿಗೆ ಒಳ್ಳೆಯ ಆರೋಗ್ಯ, ಒಳ್ಳೆಯ ಆಹಾರ ಸಿಗಬೇಕಾಗಿದ್ದರೆ ಅದು ಈ ನಮ್ಮ ಧರೆನೇ ದರಿತ್ರಿ. ಪ್ರಕೃತಿ ಮಾತೆಯ ಜೀವಂತ ಖಜಾನೆಯಾದ ಮಣ್ಣಿನಿಂದ ಮಾತ್ರ ಸಾಧ್ಯ ಎಂದ ಅವರು, ಮಣ್ಣಿನ ಫಲದಿಂದ ಮಾತ್ರ ರೈತನಿಗೆ ಬಲ ತುಂಬಲು ಸಾಧ್ಯವೆಂಬ ಮಾತನ್ನು ಹೇಳಿದರು.ಸಂಘದ ಗೌರವಾಧ್ಯಕ್ಷ ಹೇಮಂತ್, ರಾಜ್ಯ ಕಾರ್ಯಾಧ್ಯಕ್ಷ ಜಗದೀಶ್, ರಾಜ್ಯ ಪತ್ರಿಕಾ ಕಾರ್ಯದರ್ಶಿ ಹರೀಶ್ ಪಿ. ಗೌಡ, ರಾಜ್ಯ ಗೌರವ ಸಲಹೆಗಾರ ಗಿರೀಶ್, ಹುಣಸೂರು ತಾಲೂಕು ಅಧ್ಯಕ್ಷ ಪ್ರತಾಪ್, ಉಪಾಧ್ಯಕ್ಷ ಬಸವರಾಜ್, ಗಜೇಂದ್ರ, ಮಹಿಳಾ ಅಧ್ಯಕ್ಷೆ ಮೀನಾಕ್ಷಮ್ಮ, ಪುನೀತ್, ದೀಪು, ಶಿವಕುಮಾರ್, ಪ್ರಜ್ವಲ್, ಅಶೋಕ್, ಜೈಪ್ರಕಾಶ್, ಚಿಕ್ಕೇಗೌಡ್ರು, ಗ್ರಾಪಂ ಅಧ್ಯಕ್ಷ ಜಗದೀಶ್, ತಾಪಂ ಮಾಜಿ ಅಧ್ಯಕ್ಷ ಪ್ರೇಮ್ ಕುಮಾರ್ ಮತ್ತು ಗ್ರಾಮಸ್ಥರು ಇದ್ದರು.