ಸಾರಾಂಶ
ಭಾರತ ಸೋಮವಾರ ನಡೆಸಿದ ಅಗ್ನಿ 5 ಕ್ಷಿಪಣಿ ಉಡ್ಡಯನವನ್ನು ಚೀನಾ ಹದ್ದಿನಗಟ್ಟಿಟ್ಟು ವೀಕ್ಷಿಸಿದೆ.
ನವದೆಹಲಿ: ಭಾರತ ಸೋಮವಾರ ನಡೆಸಿದ ಅಗ್ನಿ 5 ಕ್ಷಿಪಣಿ ಉಡ್ಡಯನವನ್ನು ಚೀನಾ ಹದ್ದಿನಗಟ್ಟಿಟ್ಟು ವೀಕ್ಷಿಸಿದೆ. ಕಳೆದ ಕೆಲ ದಿನಗಳಿಂದ ವಿಶಾಖಪಟ್ಟಣಂ ಕರಾವಳಿಯಿಂದ 500 ಕಿ.ಮೀ ಆಸುಪಾಸಿನ ದೂರದಲ್ಲೇ ಚೀನಾದ ಗೂಢಚರ್ಯೆ ಹಡಗು ಕ್ಸಿಯಾನ್ ಯಾಂಗ್ ಹಾಂಗ್ 01 ಸಂಚರಿಸುತ್ತಿದೆ. ಅದರಲ್ಲೂ ಮಾ.11-16ರ ಅವಧಿಯಲ್ಲಿ ಒಡಿಶಾ ಕರಾವಳಿ ತರವನ್ನು ಸಂಭವನೀಯ ಉಡ್ಡಯನ ಯೋಜನೆಗಾಗಿ ವೈಮಾನಿಕ ಹಾರಾಟ ನಿಷಿದ್ಧ ವಲಯ ಎಂದು ಭಾರತ ಘೋಷಿಸಿದ ಬಳಿಕ ಚೀನಾದ ಹಡಗು ಭಾರತದ ಕರಾವಳಿ ತೀರದಲ್ಲೇ ಬೀಡುಬಿಟ್ಟು ಭಾರತದ ಚಲನವಲನಗಳ ಮೇಲೆ ನಿಗಾ ವಹಿಸಿತ್ತು. ಆದರೆ ಸದ್ಯ ಚೀನಾ ಸಂಶೋಧನಾ ಹಡಗು ವಿಶೇಷ ಆರ್ಥಿಕ ವಲಯ ಪ್ರದೇಶದಿಂದ ಹೊರಗೇ, ಅಂತಾರಾಷ್ಟ್ರೀಯ ಜಲಸೀಮೆಯಲ್ಲೇ ಇದೆ. ಹಡಗಿನ ಚಲನವಲನದ ಮೇಲೆ ನಿಗಾ ಇಡಲಾಗಿದೆ ಎಂದು ನೌಕಾಪಡೆಯ ಮೂಲಗಳು ತಿಳಿಸಿವೆ.