ಭಾರತಕ್ಕೆ ಪಾಲುದಾರರು ಬೇಕು, ಬೋಧಕರಲ್ಲ : ಜೈಶಂಕರ್‌

| N/A | Published : May 05 2025, 12:46 AM IST / Updated: May 05 2025, 06:53 AM IST

Dr S Jaishankar
ಭಾರತಕ್ಕೆ ಪಾಲುದಾರರು ಬೇಕು, ಬೋಧಕರಲ್ಲ : ಜೈಶಂಕರ್‌
Share this Article
  • FB
  • TW
  • Linkdin
  • Email

ಸಾರಾಂಶ

‘ ಭಾರತವು ಪಾಲುದಾರರನ್ನು ಹುಡುಕುತ್ತಿದೆ. ಇತರರಿಗೆ ಬೋಧಿಸಿ ತತ್ವಗಳನ್ನು ಪಾಲಿಸದ ಬೋಧಕರನ್ನಲ್ಲ’ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.

ನವದೆಹಲಿ:‘ ಭಾರತವು ಪಾಲುದಾರರನ್ನು ಹುಡುಕುತ್ತಿದೆ. ಇತರರಿಗೆ ಬೋಧಿಸಿ ತತ್ವಗಳನ್ನು ಪಾಲಿಸದ ಬೋಧಕರನ್ನಲ್ಲ’ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ. ಈ ಮೂಲಕ ಉಕ್ರೇನ್‌-ರಷ್ಯಾ ಯುದ್ಧದ ವಿಷಯದಲ್ಲಿ ದ್ವಿಮುಖ ನೀತಿ ಅನುಸರಸಿದ ಕೆಲ ಯುರೋಪ್‌ ರಾಷ್ಟ್ರಗಳಿಗೆ ತಿರುಗೇಟು ನೀಡಿದ್ದಾರೆ.

ಆರ್ಟಿಕಲ್ ಸರ್ಕಲ್ ಇಂಡಿಯಾ ಫೋರಮ್‌- 2025 ಶೃಂಗದಲ್ಲಿ ಮಾತನಾಡಿದ ಅವರು, ‘ನಾವು ಜಗತ್ತನ್ನು ನೋಡುವಾಗ ನಾವು ಪಾಲುದಾರರನ್ನು ಹುಡುಕುತ್ತೇವೆ. ಉಪದೇಶಕರನ್ನು ಹುಡುಕುವುದಿಲ್ಲ. ವಿದೇಶಗಳಲ್ಲಿ ಬೋಧಿಸುವ ಉಪದೇಶಕರು ತಮ್ಮ ಮನೆಗಳಲ್ಲಿ ಅದನ್ನು ಪಾಲಿಸಲ್ಲ. ಯುರೋಪಿನ ಕೆಲವು ಭಾಗಗಳು ಇನ್ನೂ ಆ ಸಮಸ್ಯೆ ಹೊಂದಿವೆ’ ಎಂದರು.

ಭಾರತಕ್ಕೆ ರಷ್ಯಾ 250 ಕೋಟಿ ರು. ‘ಇಗ್ಲಾ-ಎಸ್‌’ ಕ್ಷಿಪಣಿ

ನವದೆಹಲಿ: ಪಹಲ್ಗಾಂ ನರಮೇಧದ ಬಳಿಕ ಭಾರತ-ಪಾಕ್‌ ಉದ್ವಿಗ್ನತೆ ಸೃಷ್ಟಿ ಆಗಿರುವ ನಡುವೆಯೇ ಭಾರತ ಸೇನೆಯು ತನ್ನ ವಾಯು ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು 250 ಕೋಟಿ ರು.ಮೌಲ್ಯದ ರಷ್ಯಾದ ಇಗ್ಲಾ- ಎಸ್‌ ವಾಯು ರಕ್ಷಣಾ ಕ್ಷಿಪಣಿ ಸ್ವೀಕರಿಸಿದೆ.ಈ ಕ್ಷಿಪಣಿಗಳನ್ನು ಸೇನಾ ವಾಯು ರಕ್ಷಣೆಗೆ ಪೂರೈಸಲಾಗಿದ್ದು, ಶತ್ರು ವಿಮಾನಗಳು, ಡ್ರೋನ್‌ಗಳು ಮತ್ತು ಹೆಲಿಕಾಪ್ಟರ್‌ ದಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ ಹಾಗೂ ಭಾರತದ ರಕ್ಷಣಾ ಬಲ ಹೆಚ್ಚಲಿದೆ. ‘ಇಗ್ಲಾ-ಎಸ್’ ಇಗ್ಲಾ ಕ್ಷಿಪಣಿಗಳ ಮುಂದುವರಿದ ಆವೃತ್ತಿಯಾಗಿದ್ದು, ಇದು 1990ರ ದಶಕದಿಂದಲೂ ಬಳಕೆಯಲ್ಲಿದೆ. ಇದು ಅತಿ ಕಡಿಮೆ ವ್ಯಾಪ್ತಿಯ ವಾಯುರಕ್ಷಣಾ ವ್ಯವಸ್ಥೆಗಳ ಭಾಗವಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಸೇನಾ ಟ್ರಕ್ ಕಂದಕಕ್ಕೆ; 3 ಸೈನಿಕರು ಸಾವು

ರಾಂಬನ್: ಜಮ್ಮು-ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಭಾನುವಾರ ಸೇನಾ ವಾಹನವೊಂದು 700 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಮೂವರು ಸೇನಾ ಸಿಬ್ಬಂದಿಗಳು ಸಾವಿಗೀಡಾಗಿದ್ದಾರೆ.ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಜಮ್ಮುವಿನಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಬೆಂಗಾವಲು ಪಡೆಯ ಭಾಗವಾಗಿದ್ದ ಸೇನಾ ಟ್ರಕ್ ಬ್ಯಾಟರಿ ಚಶ್ಮಾ ಬಳಿ ಬೆಳಿಗ್ಗೆ 11.30ರ ಸುಮಾರಿಗೆ ಕಂದಕಕ್ಕೆ ಉರುಳಿ ಬಿದ್ದಿದೆ. ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸೈನಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೃತರನ್ನು ಅಮಿತ್ ಕುಮಾರ್, ಸುಜೀತ್ ಕುಮಾರ್ ಮತ್ತು ಮನ್ ಬಹದ್ದೂರ್ ಎಂದು ಗುರುತಿಸಲಾಗಿದೆ.

ಅಜಿತ್ ಪವಾರ್ ನಮ್ಮ ಕೂಟಕ್ಕೆ ಬಂದರೆ ಸಿಎಂ: ಉದ್ಧವ್ ಸೇನೆ ಆಫರ್

ರತ್ನಗಿರಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಮಹಾ ವಿಕಾಸ್ ಅಘಾಡಿ (ಎಂವಿಎ)ಗೆ ಮರಳಿದರೆ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಶಿವಸೇನೆ (ಯುಬಿಟಿ) ನಾಯಕ ವಿನಾಯಕ್ ರಾವುತ್ ಹೇಳಿದ್ದಾರೆ.‘ಅಜಿತ್ ಪವಾರ್ ಅವರು ಮಹಾಯುತಿ ಮೈತ್ರಿಕೂಟದಲ್ಲಿದ್ದರೆ ಎಂದಿಗೂ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಅವರು ಮುಖ್ಯಮಂತ್ರಿಯಾಗಬೇಕಾದರೆ, ಎಂವಿಎಗೆ ಮರಳಬೇಕು. ಅಲ್ಲಿದ್ದು ಮುಖ್ಯಮಂತ್ರಿಯಾಗುವ ಕನಸು ಕಾಣುವ ಬದಲು, ಆ ಅವಕಾಶವನ್ನು ಪಡೆಯುವ ಸ್ಥಳಕ್ಕೆ ಬರಬೇಕು’ ಎಂದು ರಾವುತ್ ಹೇಳಿದರು.