ಸಾರಾಂಶ
2 ದಿನಗಳ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಮುಖ್ಯ ಅತಿಥಿಯಾಗಿ ಅಲ್ಲಿನ 60ನೇ ಸ್ವಾತಂತ್ರ್ಯದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ, ದ್ವೀಪರಾಷ್ಟ್ರದೊಂದಿಗೆ ಭಾರತದ ಸಂಬಂಧ ಬಲಪಡಿಸಿ, ದೇಶದ ಅಭಿವೃದ್ಧಿಗೆ ಎಲ್ಲಾ ರೀತಿಯಲ್ಲೂ ನೆರವಾಗುವ ಭರವಸೆ ನೀಡಿದ್ದಾರೆ.
ದ್ವೀಪರಾಷ್ಟ್ರದ 60ನೇ ಸ್ವಾತಂತ್ರ್ಯ ದಿನಕ್ಕೆ ಮೋದಿ ಅತಿಥಿಮಾಲೆ: 2 ದಿನಗಳ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಮುಖ್ಯ ಅತಿಥಿಯಾಗಿ ಅಲ್ಲಿನ 60ನೇ ಸ್ವಾತಂತ್ರ್ಯದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ, ದ್ವೀಪರಾಷ್ಟ್ರದೊಂದಿಗೆ ಭಾರತದ ಸಂಬಂಧ ಬಲಪಡಿಸಿ, ದೇಶದ ಅಭಿವೃದ್ಧಿಗೆ ಎಲ್ಲಾ ರೀತಿಯಲ್ಲೂ ನೆರವಾಗುವ ಭರವಸೆ ನೀಡಿದ್ದಾರೆ.
ಮಾಲೆಯ ಐತಿಹಾಸಿಕ ರಿಪಬ್ಲಿಕ್ ಸ್ಕ್ವೇರ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ ಮೋದಿಗೆ, ಅಲ್ಲಿನ ಅಧ್ಯಕ್ಷ ಮೊಹಮ್ಮದ್ ಮುಯಿಜು ಸೇರಿದಂತೆ ಹಿರಿಯ ಅಧಿಕಾರಿಗಳು ಸ್ವಾಗತ ಕೋರಿದರು. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೋದಿ, ‘ಮಾಲ್ಡೀವ್ಸ್‌ನ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದು ಗೌರವದ ಸಂಗತಿ’ ಎಂದು ಬಣ್ಣಿಸಿದ್ದಾರೆ.ಅಂತೆಯೇ, ‘ಭಾರತ ಮತ್ತು ಮಾಲ್ಡೀವ್ಸ್ ಪರಸ್ಪರ ಗೌರವ, ಮೌಲ್ಯಗಳು ಮತ್ತು ಸಾಂಸ್ಕೃತಿಕ ಮತ್ತು ಆರ್ಥಿಕ ವಿನಿಮಯದ ದೀರ್ಘ ಇತಿಹಾಸದ ಮೇಲೆ ನಿರ್ಮಾಣವಾದ ಆಳ ಪಾಲುದಾರಿಕೆಯನ್ನು ಹೊಂದಿವೆ. ನಮ್ಮ ಈ ಸಂಬಂಧವು, ಅನೇಕ ಕ್ಷೇತ್ರಗಳಲ್ಲಿನ ಸಹಕಾರದಿಂದ ವೃದ್ಧಿಸುತ್ತದೆ. ಮಾಲ್ಡೀವ್ಸ್ ಜನರನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದ್ದಾರೆ.============ಮಾಲ್ಡೀವ್ಸ್ ನಾಯಕರ ಭೇಟಿ:
ಪ್ರಧಾನಿ ಮೋದಿಯವರು ಮಾಲ್ಡೀವ್ಸ್ ಉಪರಾಷ್ಟ್ರಪತಿ ಉಝ್ ಹುಸೇನ್ ಮೊಹಮದ್ ಲತೀಫ್ ಅವರನ್ನು ಭೇಟಿಯಾಗಿದ್ದು, ‘ಉಭಯ ದೇಶಗಳು ಮೂಲಸೌಕರ್ಯ, ತಂತ್ರಜ್ಞಾನ, ಹವಾಮಾನ ಬದಲಾವಣೆ, ಇಂಧನ ಮತ್ತು ಇತರ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರೆಸಲಿವೆ. ಈ ಸಂಬಂಧ ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಆಳವಾಗಲಿದೆ’ ಎಂದು ಹೇಳಿದ್ದಾರೆ.ಅಂತೆಯೇ, ಅಲ್ಲಿನ ಸ್ಪೀಕರ್ ಅಬ್ದುಲ್ ರಹೀಂ ಅಬ್ದುಲ್ಲಾ, ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್, ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಮೂಲದವರನ್ನೂ ಭೇಟಿಯಾಗಿ ಸಂವಾದ ನಡೆಸಿದರು.