ಸಾರಾಂಶ
ನವದೆಹಲಿ: ಪಹಲ್ಗಾಂ ನರಮೇಧ ನಡೆಸಿದ ಪಾಕಿಸ್ತಾನಕ್ಕೆ ಭಾರತ ಶಾಕ್ ಮೇಲೆ ಶಾಕ್ ನೀಡುತ್ತಿದ್ದು, ಇದೀಗ ಮತ್ತೊಂದು ಆಘಾತ ನೀಡಿದೆ. ಪಾಕಿಸ್ತಾನದ ಶತ್ರು ರಾಷ್ಟ್ರ ಅಪ್ಘಾನಿಸ್ತಾನದ ಟ್ರಕ್‌ಗಳ ಸಂಚಾರಕ್ಕೆ ಅಟ್ಟಾರಿ- ವಾಘಾ ಗಡಿ ಸಂಚಾರ ಮುಕ್ತಗೊಳಿಸುವ ಮೂಲಕ ಉಗ್ರಪೋಷಿತ ರಾಷ್ಟ್ರಕ್ಕೆ ಮತ್ತೊಂದು ಪೆಟ್ಟು ನೀಡಿದೆ.
ಪಾಕಿಸ್ತಾನ ಬೆಂಬಲಿಸಿ ದ್ರೋಹ ಎಸಗಿದ್ದ ಟರ್ಕಿ ಸೇರಿದಂತೆ ಕೆಲ ದೇಶಗಳಿಗೆ ಪೆಟ್ಟು ನೀಡಿದ್ದ ಭಾರತ ಪಾಕಿಸ್ತಾನದ ಶತ್ರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾದಂತೆ ಕಾಣುತ್ತಿದೆ. ಅದಕ್ಕೆ ಸಾಕ್ಷಿಯೆನ್ನುವಂತೆ ಅಟ್ಟಾರಿ- ವಾಘಾ ಗಡಿಯಲ್ಲಿ ಬಂಧಿಯಾಗಿದ್ದ ಡ್ರೈ ಫ್ರೂಟ್‌ಗಳನ್ನು ಹೊತ್ತಿರುವ ಟ್ರಕ್‌ಗಳ ಭಾರತ ಪ್ರವೇಶಕ್ಕೆ ಅನುಮತಿಸಿದೆ.
ಶುಕ್ರವಾರಷಷ್ಟೇ ಅಘ್ಘಾನಿಸ್ತಾನದ ವಿದೇಶಾಂಗ ಸಚಿವ ಮೌಲವಿ ಅಮೀರ್ ಖಾನ್ ಜೊತೆಗೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ದೂರವಾಣಿ ಮಾತುಕತೆ ನಡೆಸಿದ್ದರು. ತಾಲಿಬಾನ್ ಸರ್ಕಾರ ರಚನೆ ಬಳಿಕ ಇದು ಭಾರತದ ಮೊದಲ ಸಚಿವರ ಮಟ್ಟದ ಮಾತುಕತೆಯಾಗಿತ್ತು. ಜೈಶಂಕರ್ ಮಾತುಕತೆ ಬಳಿಕ ಅಪ್ಘನ್ ಅಭಿವೃದ್ಧಿಗೆ ನೆರವು ಮುಂದುವರೆಸುತ್ತೇವೆ ಎಂದಿದ್ದರು. ಈ ಬೆನ್ನಲ್ಲೇ ಬೆಳವಣಿಗೆಯಾಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ವ್ಯಾಪಾರಕ್ಕೆ ಏಕೈಕ ಅಧಿಕೃತ ಕಾರಿಡಾರ್ ಆಗಿರುವ ಈ ಪ್ರಮುಖ ಭೂ ಮಾರ್ಗವನ್ನು ಏ.24ರಿಂದ ಮುಚ್ಚಲಾಗಿತ್ತು. ಆಫ್ಘಾನಿಸ್ತಾನದಿಂದಲೂ ಇದೇ ಮಾರ್ಗವಾಗಿ ಟ್ರಕ್‌ಗಳು ಭಾರತ ಪ್ರವೇಶಿಸುತ್ತಿದ್ದವು. ಆದರೆ ಗಡಿ ಬಂದ್‌ನಿಂದ ಡ್ರೈಫ್ರೂಟ್ , ಗಿಡಮೂಲಿಕೆ ಸಾಗಿಸುತ್ತಿದ್ದ 162 ಟ್ರಕ್‌ಗಳು ಪಾಕ್ ಗಡಿಯಲ್ಲಿಯೇ ಬಂಧಿಯಾಗಿದ್ದವು. ಇದೀಘ ಅಪ್ಘನ್ ಅಧಿಕಾರಿಗಳ ಮನವಿಯ ಮೇರೆಗೆ, ಭಾರತ ಮತ್ತು ಆಫ್ಘಾನಿಸ್ತಾನ ನಡುವೆ ಮಾತುಕತೆ ನಡೆದ ನಂತರ ವಾಘಾ- ಅಟ್ಟಾರಿ ಗಡಿಯನ್ನು ಮತ್ತೆ ತೆರೆಯಲಾಗಿದೆ.