ಸಾರಾಂಶ
‘ಇತರ ದೇಶಗಳ ಮೇಲಿನ ಅವಲಂಬನೆಯೇ ಭಾರತದ ಬಹುದೊಡ್ಡ ಶತ್ರು. ಇದಕ್ಕೆ ಸ್ವಾವಲಂಬನೆಯೊಂದೇ ಪರಿಹಾರ’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಉಭಯ ದೇಶಗಳ ಸಂಬಂಧದ ಮೇಲೆ ಕರಿನೆರಳು ಬೀರಿರುವ ನಡುವೆಯೇ ಮೋದಿ ಇಂಥ ಮಾತುಗಳನ್ನು ಆಡಿದ್ದಾರೆ.
-ಆತ್ಮನಿರ್ಭರ ಭಾರತ ಸಾಕಾರಕ್ಕೆ ಪ್ರಧಾನಿ ಮೋದಿ ಕರೆ
-ಜಗತ್ತಿನ ಶಾಂತಿ, ಸ್ಥಿರತೆಗೆ ನಮ್ಮ ಸ್ವಾವಲಂಬನೆ ಅಗತ್ಯಪಿಟಿಐ ಭಾವನಗರ (ಗುಜರಾತ್)
‘ಇತರ ದೇಶಗಳ ಮೇಲಿನ ಅವಲಂಬನೆಯೇ ಭಾರತದ ಬಹುದೊಡ್ಡ ಶತ್ರು. ಇದಕ್ಕೆ ಸ್ವಾವಲಂಬನೆಯೊಂದೇ ಪರಿಹಾರ’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಉಭಯ ದೇಶಗಳ ಸಂಬಂಧದ ಮೇಲೆ ಕರಿನೆರಳು ಬೀರಿರುವ ನಡುವೆಯೇ ಮೋದಿ ಇಂಥ ಮಾತುಗಳನ್ನು ಆಡಿದ್ದಾರೆ.ಇಲ್ಲಿ ನಡೆದ ‘ಸಮುದ್ರದಿಂದ ಸಮೃದ್ಧಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸುಮಾರು 34,200 ಕೋಟಿ ರು. ವೆಚ್ಚದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
‘ಭಾರತ ವಿಶ್ವಭ್ರಾತೃತ್ವದ ಚೈತನ್ಯದೊಂದಿಗೆ ಮುನ್ನುಗ್ಗುತ್ತಿದೆ. ಇಂದು ಭಾರತಕ್ಕೆ ಜಗತ್ತಿನಲ್ಲಿ ಯಾವುದೇ ದೊಡ್ಡ ಶತ್ರುವಿಲ್ಲ. ಆದರೆ ನಿಜವಾದ ಅರ್ಥದಲ್ಲಿ, ಭಾರತದ ದೊಡ್ಡ ಶತ್ರುವೆಂದರೆ ಇತರ ದೇಶಗಳ ಮೇಲಿನ ಅವಲಂಬನೆ. ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರ ಆತ್ಮನಿರ್ಭರವಾಗಬೇಕು’ ಎಂದು ಕರೆ ನೀಡಿದರು.‘140 ಕೋಟಿ ಭಾರತೀಯರ ಭವಿಷ್ಯವನ್ನು ಬಾಹ್ಯ ಶಕ್ತಿಗಳಿಗೆ ಬಿಡಲಾಗುವುದಿಲ್ಲ ಅಥವಾ ರಾಷ್ಟ್ರೀಯ ಅಭಿವೃದ್ಧಿಯ ಸಂಕಲ್ಪವು ವಿದೇಶಿ ಅವಲಂಬನೆಯನ್ನು ಆಧರಿಸಿರಲು ಸಾಧ್ಯವಿಲ್ಲ. 140 ಕೋಟಿ ಜನಸಂಖ್ಯೆಯುಳ್ಳ ದೇಶವು ಇತರರ ಮೇಲೆ ಅವಲಂಬಿತವಾಗಿದ್ದರೆ, ಅದು ರಾಷ್ಟ್ರೀಯ ಸ್ವಾಭಿಮಾನದೊಂದಿಗೆ ರಾಜಿ ಮಾಡಿಕೊಂಡಂತೆ’ ಎಂದರು.