ಚಳ್ಳಕೆರೆಯಲ್ಲಿ ಇಂದು ಭಾರತದ ಸ್ಪೇಸ್‌ಶಿಪ್‌ ಪ್ರಯೋಗ

| Published : Mar 22 2024, 01:00 AM IST / Updated: Mar 22 2024, 08:59 AM IST

ಚಳ್ಳಕೆರೆಯಲ್ಲಿ ಇಂದು ಭಾರತದ ಸ್ಪೇಸ್‌ಶಿಪ್‌ ಪ್ರಯೋಗ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಮೊದಲ ಸ್ವದೇಶಿ ಬಾಹ್ಯಾಕಾಶ ನೌಕೆ ಎಂದು ಕರೆಯಲಾಗುವ ‘ಪುಷ್ಪಕ್‌ ’ ಮರುಬಳಕೆಯ ವಾಹಕ ಕರ್ನಾಟಕದ ಚಳ್ಳಕರೆಯಲ್ಲಿರುವ ರಕ್ಷಣಾ ಇಲಾಖೆಯ ರನ್‌ವೇನಲ್ಲಿ ಪ್ರಯೋಗಕ್ಕೆ ಒಳಪಡಿಸಲಾಗುವುದು.

ತಿರುವನಂತಪುರ: ಭಾರತದ ಮೊದಲ ಸ್ವದೇಶಿ ಬಾಹ್ಯಾಕಾಶ ನೌಕೆ ಎಂದು ಕರೆಯಲಾಗುವ ‘ಪುಷ್ಪಕ್‌ ’ ಮರುಬಳಕೆಯ ವಾಹಕ (ಆರ್‌ಎಲ್‌ವಿ) ಅನ್ನು ಶುಕ್ರವಾರ ಬೆಳಗ್ಗೆ 7 ಗಂಟೆಗೆ ಕರ್ನಾಟಕದ ಚಳ್ಳಕರೆಯಲ್ಲಿರುವ ರಕ್ಷಣಾ ಇಲಾಖೆಯ ರನ್‌ವೇನಲ್ಲಿ ಪ್ರಯೋಗಕ್ಕೆ ಒಳಪಡಿಸಲಾಗುವುದು.

ಭವಿಷ್ಯದಲ್ಲಿ ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಸೇರಿಸಿ ಅಲ್ಲಿಂದ ಭೂಮಿಗೆ ಮರಳಲು ಈ ಪುಷ್ಪಕ್‌ ರಾಕೆಟ್‌ ಅಥವಾ ಸ್ಪೇಸ್‌ಶಿಪ್‌ ಅನ್ನು ಬಳಕೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ಉದ್ದೇಶಿಸಿದೆ.

ಇದರ ಭಾಗವಾಗಿ ಈಗಾಗಲೇ 2 ಬಾರಿ ಚಳ್ಳಕೆರೆಯ ರನ್‌ವೇನಲ್ಲಿ ಈ ಸ್ಪೇಸ್‌ಶಿಪ್‌ ಮಾದರಿಯ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಇದೇ ರಾಕೆಟ್‌ನ ಸ್ವಯಂ ಸುರಕ್ಷಿತ ಲ್ಯಾಂಡಿಂಗ್ ಮಾಡುವ ವ್ಯವಸ್ಥೆಯನ್ನು ಕಳೆದ ವರ್ಷದ ಏ.2ರಂದು ಯಶಸ್ವಿಯಾಗಿ ಪ್ರಯೋಗ ಮಾಡಲಾಗಿತ್ತು.

ಅದರ ಮುಂದುವರೆದ ಭಾಗವಾಗಿ ಇನ್ನಷ್ಟು ಉಪಕರಣ ಮತ್ತು ವ್ಯವಸ್ಥೆಗಳ ಪರೀಕ್ಷೆಗಾಗಿ ಶುಕ್ರವಾರ ಇನ್ನೊಂದು ಸುತ್ತಿನ ಪ್ರಯೋಗಕ್ಕೆ ಇಸ್ರೋ ಸಜ್ಜಾಗಿದೆ.

ಈ ಸ್ಪೇಸ್‌ಶಿಪ್‌ ನಿಜ ರೂಪ ಪಡೆದುಕೊಂಡು ಉಡ್ಡಯನ ಆರಂಭಿಸಿದರೆ ಉಪಗ್ರಹ ಉಡ್ಡಯನ ವೆಚ್ಚ ಭಾರೀ ಪ್ರಮಾಣದಲ್ಲಿ ಇಳಿಯಲಿದೆ.