ಸಾರಾಂಶ
ಸ್ವದೇಶಿ ತಂತ್ರಜ್ಞಾನದ ಕ್ಷಿಪಣಿ (ಐಟಿಸಿಎಂ- ಇಂಡೀಜಿನಸ್ ಟೆಕ್ನಾಲಜಿ ಕ್ರೂಸ್ ಮಿಸೈಲ್) ಯನ್ನು ಭಾರತ ಗುರುವಾರ ಯಶಸ್ವಿಯಾಗಿ ಪ್ರಯೋಗಿಸಿದೆ.
ಬಾಲಾಸೋರ್: ಸ್ವದೇಶಿ ತಂತ್ರಜ್ಞಾನದ ಕ್ಷಿಪಣಿ (ಐಟಿಸಿಎಂ- ಇಂಡೀಜಿನಸ್ ಟೆಕ್ನಾಲಜಿ ಕ್ರೂಸ್ ಮಿಸೈಲ್) ಯನ್ನು ಭಾರತ ಗುರುವಾರ ಯಶಸ್ವಿಯಾಗಿ ಪ್ರಯೋಗಿಸಿದೆ.
ಒಡಿಶಾದ ಚಂಡೀಪುರದ ಉಡ್ಡಯನ ನೆಲೆಯಲ್ಲಿ ಈ ಕ್ಷಿಪಣಿ ಪ್ರಯೋಗ ನಡೆಸಿದ್ದು, ಅದು ತನ್ನೆಲ್ಲಾ ಮಾನದಂಡಗಳನ್ನು ಯಶಸ್ವಿಯಾಗಿ ಪೂರೈಸಿದ ಎಂದು ಕ್ಷಿಪಣಿ ಸಿದ್ಧಪಡಿಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಓ) ಹೇಳಿದೆ.
ಸ್ವದೇಶಿ ಪ್ರೊಪಲ್ಷನ್ ನಿಂದ ನಡೆಸಲ್ಪಡುವ ಸ್ವದೇಶಿ ದೀರ್ಘ ಶ್ರೇಣಿಯ ಸಬ್ ಸಾನಿಕ್ ಕ್ಷಿಪಣಿಯ ಯಶಸ್ಸು ಭಾರತ ರಕ್ಷಣಾ ವ್ಯವಸ್ಥೆಗೆ ಪ್ರಮುಖ ಮೈಲಿಗಲ್ಲು ಎಂದು ಉಡ್ಡಯನದ ಕುರಿತು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಶೇಷವೆಂದರೆ ಈ ಸ್ವದೇಶಿ ಪ್ರೊಪಲ್ಷನ್ ಅನ್ನು ಬೆಂಗಳೂರಿನ ಗ್ಯಾಸ್ ಟರ್ಬೈನ್ ರಿಸರ್ಚ್ ಎಸ್ಟ್ಲಾಬ್ಲಿಷ್‌ಮೆಂಟ್ ಅಭಿವೃದ್ಧಿಪಡಿಸಿದೆ.