ಅರಬ್ಬಿ ಸಮುದ್ರದಲ್ಲಿ ತಾಂತ್ರಿಕ ದೋಷದಿಂದ ಸಿಲುಕಿದ್ದ ಭಾರತದ ಹಡಗಿನಲ್ಲಿದ್ದ ಸಿಬ್ಬಂದಿಗೆ ಪಾಕಿಸ್ತಾನ ನೌಕಾಪಡೆಯು ಮಾನವೀಯ ನೆಲೆಯಲ್ಲಿ ಸಹಾಯ ಹಸ್ತ ಚಾಚಿರುವ ಘಟನೆ ನಡೆದಿದೆ.ಒಮಾನ್‌ನಿಂದ ಭಾರತಕ್ಕೆ ಬರುತ್ತಿದ್ದ ಎಂವಿ ಗೌತಮ್ ಹಡಗು ಅರಬ್ಬಿ ಸಮುದ್ರದಲ್ಲಿ ತೊಂದರೆಗೆ ಒಳಗಾಗಿತ್ತು
ಇಸ್ಲಾಮಾಬಾದ್: ಅರಬ್ಬಿ ಸಮುದ್ರದಲ್ಲಿ ತಾಂತ್ರಿಕ ದೋಷದಿಂದ ಸಿಲುಕಿದ್ದ ಭಾರತದ ಹಡಗಿನಲ್ಲಿದ್ದ ಸಿಬ್ಬಂದಿಗೆ ಪಾಕಿಸ್ತಾನ ನೌಕಾಪಡೆಯು ಮಾನವೀಯ ನೆಲೆಯಲ್ಲಿ ಸಹಾಯ ಹಸ್ತ ಚಾಚಿರುವ ಘಟನೆ ನಡೆದಿದೆ.
ಒಮಾನ್‌ನಿಂದ ಭಾರತಕ್ಕೆ ಬರುತ್ತಿದ್ದ ಎಂವಿ ಗೌತಮ್ ಹಡಗು
ಒಮಾನ್‌ನಿಂದ ಭಾರತಕ್ಕೆ ಬರುತ್ತಿದ್ದ ಎಂವಿ ಗೌತಮ್ ಹಡಗು ಅರಬ್ಬಿ ಸಮುದ್ರದಲ್ಲಿ ತೊಂದರೆಗೆ ಒಳಗಾಗಿತ್ತು. ಈ ವೇಳೆ ಹಡಗಿನಲ್ಲಿದ್ದ 6 ಭಾರತೀಯರು, ಓರ್ವ ಇಂಡೋನೇಷ್ಯಾ ಸಿಬ್ಬಂದಿ ಮಧ್ಯದಲ್ಲಿಯೇ ಸಿಲುಕಿಕೊಂಡಿದ್ದರು. ಆಗ ಮುಂಬೈನಲ್ಲಿರುವ ಸಾಗರ ರಕ್ಷಣಾ ಮತ್ತು ಸಮನ್ವಯ ಕೇಂದ್ರವು ಪಾಕಿಸ್ತಾನಿ ಅಧಿಕಾರಿಗಳನ್ನು ಸಂಪರ್ಕಿಸಿ ಸಹಾಯ ಕೋರಿತ್ತು.
ಪಾಕಿಸ್ತಾನ ಸಾಗರ ಭದ್ರತಾ ಸಂಸ್ಥೆ (ಪಿಎಂಎಸ್‌ಎ) ನೆರವು
ಹೀಗಾಗಿ ಸಿಬ್ಬಂದಿಗೆ ಪಾಕಿಸ್ತಾನ ಸಾಗರ ಭದ್ರತಾ ಸಂಸ್ಥೆ (ಪಿಎಂಎಸ್‌ಎ) ನೆರವು ನೀಡಿದೆ.ಮಾರ್ಗಮಧ್ಯೆದಲ್ಲಿಯೇ ಸಿಲುಕಿದ್ದ ಸಿಬ್ಬಂದಿಗೆ ಆಹಾರ, ವೈದ್ಯಕೀಯ ನೆರವು ಮತ್ತು ತಾಂತ್ರಿಕ ನೆರವು ಸೇರಿದಂತೆ ತುರ್ತು ಸಹಾಯವನ್ನು ಒದಗಿಸಿತ್ತು. ಅಲ್ಲದೇ ಹಡಗಿನ ತಾಂತ್ರಿಕ ದೋಷವನ್ನು ಸರಿಪಡಿಸಲು ಕೂಡ ಯತ್ನಿಸಿತ್ತು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

