ಕಮಲಾ ಗೆದ್ದರೆ ಶ್ವೇತಭವನ ತುಂಬಾ ಸಾಂಬಾರ್‌ ಸ್ಮೆಲ್‌ : ಟ್ರಂಪ್‌ ಆಪ್ತೆ ಕೀಳು ಟೀಕೆ

| Published : Sep 13 2024, 01:32 AM IST / Updated: Sep 13 2024, 06:33 AM IST

kamala haris

ಸಾರಾಂಶ

ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧ ಮುಂದುವರೆದಿದ್ದು, ಇಸ್ರೇಲ್‌ನ ಪಶ್ಚಿನ ದಂಡೆ ಪ್ರದೇಶದಲ್ಲಿ ಹಮಾಸ್‌ ಸ್ಫೋಟಕ ತುಂಬಿರುವ ವಾಹನದಿಂದ ಡಿಕ್ಕಿ ಹೊಡೆಸಿ ದಾಳಿ ಮಾಡಿದೆ. ಈ ದಾಳಿಗೆ ಭಾರತೀಯ ಮೂಲದ ಇಸ್ರೇಲಿ ಸೈನಿಕನೊಬ್ಬ ಮೃತಪಟ್ಟಿದ್ದಾನೆ.

ಜೆರುಸಲೇಂ: ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧ ಮುಂದುವರೆದಿದ್ದು, ಇಸ್ರೇಲ್‌ನ ಪಶ್ಚಿನ ದಂಡೆ ಪ್ರದೇಶದಲ್ಲಿ ಹಮಾಸ್‌ ಸ್ಫೋಟಕ ತುಂಬಿರುವ ವಾಹನದಿಂದ ಡಿಕ್ಕಿ ಹೊಡೆಸಿ ದಾಳಿ ಮಾಡಿದೆ. ಈ ದಾಳಿಗೆ ಭಾರತೀಯ ಮೂಲದ ಇಸ್ರೇಲಿ ಸೈನಿಕನೊಬ್ಬ ಮೃತಪಟ್ಟಿದ್ದಾನೆ. ಮಣಿಪುರದ ‘ಬ್ನೀ ಮೆನಾಶೆ’ ಸಮುದಾಯಕ್ಕೆ ಸೇರಿದ ಸಾರ್ಜೆಂಟ್‌ ಗೆರಿ ಗಿಡಿಯಾನ್ ಹಂಗಲ್‌ (24) ಮೃತಪಟ್ಟ ಯೋಧ. 2020ರಲ್ಲಿ ಹಂಗಲ್‌ ಇಸ್ರೇಲ್‌ಗೆ ವಲಸೆ ಬಂದಿದ್ದರು. ಇವರ ಜತೆ 300ಕ್ಕೂ ಹೆಚ್ಚು ಬ್ನೀ ಮೆನಾಶೆ ಸಮುದಾಯದ ಯುವಕರು ಇಸ್ರೇಲ್‌ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

==

ಕಮಲಾ ಗೆದ್ದರೆ ಶ್ವೇತಭವನ ತುಂಬಾ ಸಾಂಬಾರ್‌ ಸ್ಮೆಲ್‌: ಟ್ರಂಪ್‌ ಆಪ್ತೆ ಕೀಳು ಟೀಕೆ

ವಾಷಿಂಗ್ಟನ್: ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಅಮೆರಿಕದ ಅಧ್ಯಕ್ಷರಾದರೆ ಶ್ವೇತಭವನದಲ್ಲಿ ಸಾಂಬಾರ್‌ ಸ್ಮೆಲ್ ಬರಲಿದೆ ಎಂದು ಎದುರಾಳಿ ಟ್ರಂಪ್‌ ಪಕ್ಷದ ನಾಯಕಿ ಲೂರಾ ಲೂಮರ್‌ ಕೀಳು ಹೇಳಿಕೆ ನೀಡಿದ್ದಾರೆ. ಅಜ್ಜ- ಅಜ್ಜಿಯಂದಿರ ದಿನದಂದು ಕಮಲಾ ಇನ್ಸ್ಟಾಗ್ರಾಮ್‌ನಲ್ಲಿ ಬಾಲ್ಯದಲ್ಲಿ ತಾವು ಅಜ್ಜ ಅಜ್ಜಿ ಜೊತೆಗಿನ ಫೋಟೋ ಹಂಚಿಕೊಂಡಿದ್ದರು. ಅದಕ್ಕೆ ಲೂಮರ್‌, ‘ಕಮಲಾ ಗೆದ್ದರೆ ಶ್ವೇತಭವನ ತುಂಬಾ ಸಾಂಬಾರ್‌ ಸ್ಮೆಲ್‌’ ಎಂದಿದ್ದಾರೆ. ಈ ಪೋಸ್ಟ್‌ಗೆ ನೆಟ್ಟಿಗರು ಲೂಮರ್‌ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

==

ಪಕ್ಷಾಂತರಿಗಳಿಗೆ ಸೀರೆ, ಬಳೆ ತೊಡಿ ಎಂದ ತೆಲಂಗಾಣದ ಪಕ್ಷಾಂತರಿ ಬಿಆರೆಸ್‌ ಶಾಸಕ

ಹೈದರಾಬಾದ್‌: ತೆಲಂಗಾಣದಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್‌)ಯ 10 ಜನ ಶಾಸಕರು ಕಾಂಗ್ರೆಸ್‌ ಸೇರ್ಪಡೆಯಾದ ಬೆನ್ನಲ್ಲೇ, ಪಕ್ಷ ಬಿಟ್ಟು ಕಾಂಗ್ರೆಸ್‌ ಸೇರಿದ ಶಾಸಕರಿಗೆ, ‘ನೀವು ಪುರುಷರಲ್ಲ, ಸೀರೆ ಮತ್ತು ಬಳೆಗಳನ್ನು ತೊಡಿ’ ಎಂದು ಬಿಆರ್‌ಎಸ್‌ ಶಾಸಕ ಕೌಶಿಕ್ ರೆಡ್ಡಿ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್‌ ಕೌಶಿಕ್‌ ರೆಡ್ಡಿಯವರನ್ನು ತರಾಟೆಗೆ ತೆಗೆದುಕೊಂಡಿದ್ದು, ಅವರಿಗೆ ಇಂತಹ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವ ಅಭ್ಯಾಸವಿದೆ’ ಎಂದಿದೆ. ವಿಪರ್‍ಯಾಸವೆಂದರೆ ಪಕ್ಷಾಂತರಿಗಳಿಗೆ ಲೇವಡಿ ಮಾಡಿರುವ ಕೌಶಿಕ್ ರೆಡ್ಡಿ, ಬಿಆರ್‌ಎಸ್‌ ಪಕ್ಷ ಸೇರ್ಪಡೆಯಾಗುವ ಮುನ್ನ ಕಾಂಗ್ರೆಸ್‌ನಲ್ಲಿದ್ದರು.

==

ಸೆನ್ಸೆಕ್ಸ್‌ 1440 ಅಂಕ ಏರಿಕೆ: ಮೊದಲ ಬಾರಿ 83000ರ ಅಂಕ ದಾಟಿದ ಸೂಚ್ಯಂಕಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಗುರುವಾರ 1449 ಅಂಕಗಳ ಭಾರೀ ಏರಿಕೆ ಕಂಡು 82,962 ಅಂಕಗಳಲ್ಲಿ ಮುಕ್ತಾಯವಾಗಿದೆ. ಸೆನ್ಸೆಕ್ಸ್‌ 83000 ಅಂಕಗಳ ಗಡಿದಾಟಿದ್ದು ಇದೇ ಮೊದಲು. ಇನ್ನೊಂದೆಡೆ ನಿಫ್ಟಿ ಕೂಡಾ 470 ಅಂಕ ಏರಿಕೆ ಕಂಡು 25433 ಅಂಕಗಳನ್ನು ತಲುಪಿತು. ಗುರುವಾರದ ಷೇರುಪೇಟೆ ಪರಿಣಾಮ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 6.59 ಲಕ್ಷ ಕೋಟಿ ರು.ನಷ್ಟು ಏರಿಕೆಯಾಗಿದೆ. ಅಮೆರಿಕದಲ್ಲಿ ಹಣದುಬ್ಬರ ಭೀತಿ ದೂರವಾಗಿದ್ದು, ಅಮೆರಿಕದ ಕೇಂದ್ರೀಯ ಬ್ಯಾಂಕ್ ಬಡ್ಡಿದರ ಕಡಿತ ಮಾಡುವ ಸುಳಿವು ಸಿಕ್ಕಿದ್ದು, ಭಾರತೀಯ ಷೇರುಪೇಟೆಯಲ್ಲಿ ವಿದೇಶಿ ಸಾಂಸ್ಥಿಕೆ ಹೂಡಿಕೆದಾರರ ಹೂಡಿಕೆ ಹೆಚ್ಚಿದ್ದು ಸೂಚ್ಯಂಕ ಹೆಚ್ಚಳಕ್ಕೆ ಕಾರಣವಾಯ್ತು ಎನ್ನಲಾಗಿದೆ. ಐಟಿ, ಬ್ಯಾಂಕಿಂಗ್‌, ಆಟೋಮೊಬೈಲ್‌, ಫಾರ್ಮಾ ವಲಯದ ಕಂಪನಿಗಳು ಉತ್ತಮ ಏರಿಕೆ ಕಂಡವು.

==

ಅಜಾನ್ ವೇಳೆ ದುರ್ಗಾ ಪೂಜೆ, ಸಂಗೀತ ಬೇಡ: ಹಿಂದೂಗಳಿಗೆ ಬಾಂಗ್ಲಾ ಸರ್ಕಾರ ಸೂಚನೆ

ಢಾಕಾ: ಬಾಂಗ್ಲಾದಲ್ಲಿ ಹಿಂದೂಗಳ ಸುರಕ್ಷತೆಯ ಪ್ರಶ್ನೆಗಳು ಎದ್ದಿರುವ ಬೆನ್ನಲ್ಲಿಯೇ, ಅಜಾನ್ ಮತ್ತು ನಮಾಜ್ ಸಂದರ್ಭದಲ್ಲಿ ದುರ್ಗಾ ಪೂಜೆ ಮಾಡಬೇಡಿ, ಸಂಗೀತ ವಾದ್ಯಗಳನ್ನು ನುಡಿಸಬೇಡಿ ಎಂದು ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರ ದೇಶದಲ್ಲಿರುವ ಹಿಂದೂಗಳಿಗೆ ಮನವಿ ಮಾಡಿದೆ. ‘ನಮಾಜ್ ಮಾಡುವ ಸಂದರ್ಭದಲ್ಲಿ ಇಂತಹ ಚಟುವಟಿಕೆಗಳನ್ನು ನಿಲ್ಲಿಸಬೇಕಿದೆ ಮತ್ತು ಅಜಾನ್ ವೇಳೆಯಲ್ಲಿ 5 ನಿಮಿಷಕ್ಕೂ ಮುನ್ನ ಅದಕ್ಕೆ ವಿರಾಮ ನೀಡಬೇಕು’ ಎಂದು ಬಾಂಗ್ಲಾದ ಗೃಹ ಇಲಾಖೆ ಹೇಳಿದೆ. ಇದರ ಜೊತೆಗೆ ಅಜಾನ್ ಮತ್ತು ನಮಾಜ್ ಸಂದರ್ಭದಲ್ಲಿ ಹಿಂದೂ ಸಂಘಟನೆಗಳು ಸಂಗೀತ ವಾದ್ಯಗಳನ್ನು ನುಡಿಸದಂತೆ, ಧ್ವನಿ ವರ್ಧಕ ಬಳಸಬೇಡಿ ಅಂಥಲೂ ಮನವಿ ಮಾಡಿದೆ. ಆದರೆ ದುರ್ಗಾ ಪೂಜೆಗಳನ್ನು ಯಾವುದೇ ತಡೆಯಿಲ್ಲದೇ ನಡೆಸುತ್ತೇವೆ ಎಂದಿದೆ.