ಸಾರಾಂಶ
ದುಬೈ: ಕೊಲ್ಲಿ ದೇಶ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆಸ್ತಿ ಖರೀದಿ ಮಾಡುವ ವಿದೇಶಿಯರ ಪೈಕಿ ಭಾರತೀಯರೇ ಮೊದಲ ಸ್ಥಾನದಲ್ಲಿದೆ ಎಂದು ತನಿಖಾ ವರದಿಯೊಂದು ಅಚ್ಚರಿಯ ಅಂಶ ಬಹಿರಂಗಪಡಿಸಿದೆ.ಅಂತಾರಾಷ್ಟ್ರೀಯ ಅಪರಾಧ ಮತ್ತು ಸಂಘರ್ಷಗಳ ಕುರಿತು ಅಧ್ಯಯನ ನಡೆಸುವ ಅಮೆರಿಕ ಮೂಲದ ‘ದ ಸೆಂಟರ್ ಫಾರ್ ಅಡ್ವಾನ್ಸ್‌ಡ ಡಿಫೆನ್ಸ್ ಸ್ಟಡೀಸ್’ ಎಂಬ ಸರ್ಕಾರೇತರ ಸಂಘಟನೆಯೊಂದು ಸಿದ್ಧಪಡಿಸಿರುವ ‘ದುಬೈ ಅನ್‌ಲಾಕ್’ ಎಂಬ ವರದಿಯಲ್ಲಿ ಈ ಅಂಶವಿದೆ.
ವರದಿ ಅನ್ವಯ ಭಾರತದ 29700 ಪ್ರಜೆಗಳು ಕೊಲ್ಲಿ ದೇಶದಲ್ಲಿ 35000 ಆಸ್ತಿ ಖರೀದಿ ಮಾಡುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಇದರ ಒಟ್ಟು ಮೌಲ್ಯ 1.40 ಲಕ್ಷ ಕೋಟಿ ರು. 17000 ಪಾಕಿಸ್ತಾನಿಯರು 23000 ಆಸ್ತಿ ಖರೀದಿ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಸೌದಿ ಅರೇಬಿಯಾ, ಬ್ರಿಟನ್ ಪ್ರಜೆಗಳು ಇದ್ದಾರೆ.
ಯಾರ್‍ಯಾರಿಂದ ಖರೀದಿ?:
ಭಾರತದ ಶ್ರೀಮಂತ ಉದ್ಯಮಿಗಳಾದ ಮುಕೇಶ್ ಅಂಬಾನಿ (1900 ಕೋಟಿ ರು.), ಲುಲು ಗ್ರೂಪ್‌ನ ಅಧ್ಯಕ್ಷ ಎಂ.ಎ. ಯೂಸುಫ್ ಅಲಿ (580 ಕೋಟಿ ರು.), ಬುರ್ಜೀಲ್ ಹೋಲ್ಡಿಂಗ್ಸ್ ಮಾಲೀಕ ಶಂಶೀರ್ ವಯಾಲಿಲ್ ಪರಂಬತ್ (565 ಕೋಟಿ ರು.), ಗೌತಮ್ ಅದಾನಿ ಸೋದರ ವಿನೋದ್ ಅದಾನಿ (165 ಕೋಟಿ ರು.) ಮೌಲ್ಯದ ಆಸ್ತಿ ಹೊಂದಿದ್ದಾರೆ.ಉಳಿದಂತೆ ನಟ ಶಾರುಖ್ ಖಾನ್, ಶಿಲ್ಪಾ ಶೆಟ್ಟಿ, ನಟ ಅನಿಲ್ ಕಪೂರ್, ಸ್ವಿಜರ್ಲೆಂಡ್ ಮೂಲದ ಟೆನಿಸ್ ಆಟಗಾರ ರೋಜರ್ ಫೆಡರರ್, ನಟ ಬ್ರಾಡ್ ಪಿಟ್ ಆಸ್ತಿ ಖರೀದಿ ಮಾಡಿದ ಪ್ರಮಖರು.
;Resize=(128,128))
;Resize=(128,128))
;Resize=(128,128))
;Resize=(128,128))